ತಾನು ಕೆಲಸ ಮಾಡಲಿರುವ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಯಾವುದೇ ಹೊಸ ಉದ್ಯೋಗಿಗೆ ಮಹತ್ವದ ಸಂಗತಿಯಾಗಿರುತ್ತದೆ. ಮೂರ್ನಾಲ್ಕು ಸಂದರ್ಶನಗಳ ಬಳಿಕ ಕಂಪನಿ ಉದ್ಯೋಗಿಯನ್ನು ನೇಮಕ ಮಾಡಿಕೊಂಡಿರುತ್ತದೆ. ಹಾಗಿದ್ದೂ, ಉದ್ಯೋಗಕ್ಕೆ ಸೇರುವ ಮುಂಚೆ ಕಂಪನಿ ನೀಡುವ ಜಾಬ್ ಆಫರ್ ಲೆಟರ್‌ನಲ್ಲಿ ಏನೇನು ನಮೂದಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು.
ಉದ್ಯೋಗ ಸಿಕ್ಕ ಸಂತೋಷದಲ್ಲಿ ಜಾಬ್ ಆಫರ್ ಲೆಟರ್‌ನಲ್ಲಿರುವ ಸಂಗತಿಗಳ ಬಗ್ಗೆ ಅರಿಯದೇ ಹೋಗುವುದು ಸರಿಯಲ್ಲ. ಆಫರ್ ಲೆಟರ್ ಅನ್ನು ಸಂಪೂರ್ಣವಾಗಿ ಅಭ್ಯಸಿಸಿ ಅದನ್ನು ಒಪ್ಪಿಕೊಳ್ಳುವುದಕ್ಕೆ ಮುಂದಾಗಬೇಕು.
ಸಾಮಾನ್ಯವಾಗಿ ಆಫರ್ ಲೆಟರ್ ದೊರೆಯುವ ಮುನ್ನ ಕಂಪನಿ ಅಭ್ಯರ್ಥಿಯೊಂದಿಗೆ ನಾಲ್ಕೈದು ಬಾರಿ ಸಂದರ್ಶನಗಳನ್ನು ನಡೆಸಿರುತ್ತದೆ. ಉದ್ಯೋಗ ಪಡೆಯಲಿರುವ ಅಭ್ಯರ್ಥಿ ತನ್ನ ಕೆಲಸವನ್ನು ನಿರ್ವಹಿಸಲು ಶಕ್ಯನಾಗಿದ್ದೇನೆಯೇ, ಆತನಿಗಿರುವ ಅನುಭವದಿಂದ ಲಾಭವಾಗಲಿದೆಯೇ ಎಂಬಿತ್ಯಾದಿ ಸಂಗತಿಗಳ ಬಗ್ಗೆ ತಿಳಿದುಕೊಂಡೇ ಸಂಬಳ, ಸೌಲಭ್ಯಗಳನ್ನು ನಿಗದಿ ಮಾಡಲಾಗಿರುತ್ತದೆ. ಆದರೂ, ಅಂತಿಮವಾಗಿ ಜಾಬ್ ಆಫರ್ ಲೆಟರ್ ಕೈಗೆ ಬಂದಾಗ ತುಸು ಗಲಿಬಿಲಿಯಾಗಬಹುದು. ಯಾಕೆಂದರೆ, ಸ್ಯಾಲರಿ ಪ್ಯಾಕೇಜ್ ಸೇರಿದಂತೆ ಇನ್ನಿತರ ಸಂಗತಿಗಳು ತಕ್ಷಣಕ್ಕೆ ಅರ್ಥವಾಗದೇ ಹೋಗಬಹುದು. ಹಾಗಾಗಿ, ಆಫರ್ ಲೆಟರನ್ನು ಒಮ್ಮೆ ಸಂಪೂರ್ಣವಾಗಿ ವಿಶ್ಲೇಷಿಸಿ ಒಪ್ಪಿಕೊಳ್ಳಬೇಕು. ಈ ಬಗ್ಗೆ ಇಲ್ಲಿ ಕೆಲವೊಂದು ಟಿಪ್ಸ್ ಕೊಡಲಾಗಿದೆ. ಓದಿ.
undefined
ನೀವು ನೀಡೋ ಉಡುಗೊರೆ ಬದುಕು ಬೆಳಗಲಿ..! ಪ್ರೀತಿ, ಕಾಳಜಿ ಜೊತೆ ಚಂದದ್ದೊಂದು ಗಿಫ್ಟ್
- ಹುದ್ದೆ ಮತ್ತು ಪಾತ್ರ
ನೀವು ಆಫರ್ ಲೆಟರ್‌ಗೆ ಸಹಿ ಹಾಕುವ ಮುನ್ನ ಕಂಪನಿ ನಿಮಗೆ ಒದಗಿಸಿದ ಹುದ್ದೆ ಯಾವುದು ಮತ್ತು ನಿರ್ವಹಿಸಬೇಕಾದ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳಬೇಕು. ನೀವು ಯಾವ ಹುದ್ದೆಗೆ ಆಯ್ಕೆಯಾಗಿದ್ದೀರಿ ಮತ್ತು ಮಾಡಬೇಕಾದ ಕೆಲಸವೇನು ಎಂಬ ಮಾಹಿತಿಯನ್ನು ಎಚ್‌ಆರ್ ಅವರಿಂದ ತಿಳಿದುಕೊಳ್ಳಬೇಕು. ಬಹಳಷ್ಟು ಸಂದರ್ಭದಲ್ಲಿ ಸಂದರ್ಶನದಲ್ಲಿ ಚರ್ಚೆಯಾದ ರೀತಿಯಲ್ಲಿ ನಿಮ್ಮ ಹುದ್ದೆಯನ್ನು ಆಫರ್ ಲೆಟರ್‌ನಲ್ಲಿ ನಮೂದಿಸಿರುವುದಿಲ್ಲ. ಯಾಕೆಂದರೆ, ನಿಮ್ಮ ಹುದ್ದೆಯೇ ಕಂಪನಿಯಲ್ಲಿ ನಿಮಗೆ ಇರುವ ಜವಾಬ್ದಾರಿಯನ್ನು ತಿಳಿಸುತ್ತದೆ. ಹಾಗಾಗಿ, ಈ ವಿಷಯದಲ್ಲಿ ಎಚ್ಚರವಹಿಸುವುದು ಸೂಕ್ತ.
- ಸ್ಯಾಲರಿ ಪ್ಯಾಕೇಜ್
ಆಫರ್ ಲೆಟರ್ ಪಡೆಯುವಾಗ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯಾಗಿದೆ. ಸಾಮಾನ್ಯವಾಗಿ ಸಂದರ್ಶನದ ಸುತ್ತಗಳ ಪೈಕಿ ಒಂದು ನಿಮ್ಮ ಸಂಬಂಳ ಕಂಪನಿ ನೀಡುವ ಸವಲತ್ತುಗಳ ಬಗ್ಗೆ ಮಾತುಕತೆಯಾಗಿರುತ್ತದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಕಂಪನಿ ಅನುಸರಿಸುವ ವಿಭಿನ್ನ ಲೆಕ್ಕಾಚಾರಗಳು ಆ ಸಂದರ್ಭದಲ್ಲಿ ಗಮನಕ್ಕೆ ಬರುವುದಿಲ್ಲ. ಹಾಗಂತ ಸಂಬಳ ಎಷ್ಟಿದೆ ಎಂಬುದನ್ನು ನೋಡದೆಯೇ ಒಪ್ಪಿಕೊಳ್ಳುತ್ತಾರಂತಲ್ಲ. ಆಫರ್ ಲೆಟರ್‌ನಲ್ಲಿ ಸ್ಯಾಲರಿ ಪ್ಯಾಕೇಜ್ ಮತ್ತು ಸಂಭಾವನೆಯ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸಿರುತ್ತಾರೆ. ಆದರೆ, ಹೆಚ್ಚಿನ ಜನರು ಅಂತಿಮವಾಗಿ ಕೈಗೆ ಎಷ್ಟು ಸಂಬಳ ಬರುತ್ತದೆ ಎಂಬುದನ್ನು ಮಾತ್ರ ಗಮನಿಸುತ್ತಾರೆ. ಆದರೆ, ಕಂಪನಿಗಳು ಸಂಕೀರ್ಣವಾದ ವೇತನ ಪಾವತಿ ವ್ಯವಸ್ಥೆಯನ್ನು ಹೊಂದಿರುತ್ತವೆ. ಅಂದರೆ, ನಿಮಗೆ ನೀಡಲು ಒಪ್ಪಿರುವ ಸಂಬಳವನ್ನು ಬೇಸಿಕ್, ಅಲವನ್ಸಿಸ್, ಕನ್ವೇನ್ಸ್, ಪೆನ್ಶಿಷನ್, ಪ್ರಾವಿಡೆಂಟ್ ಫಂಡ್ ಮತ್ತು ಇತರ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಹಾಗಾಗಿ, ಸಂಬಳದ ಬಗ್ಗೆ ಸಂಪೂರ್ಣ ಬಗ್ಗೆ ತಿಳಿವಳಿಕೆ ಹೊಂದುವುದು ಅತ್ಯವಶ್ಯ.
ರೋಡ್ಸ್ ಸ್ಕಾಲರ್‌ಶಿಫ್ ಗೆದ್ದ ಮೊದಲ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿಯೇ ಸ್ಫೂರ್ತಿ
- ಪರ್ಕ್ಸ್ ಮತ್ತು ಬೆನೆಫಿಟ್ಸ್
ಸ್ಯಾಲರಿ ಪ್ಯಾಕೇಜ್ ಮಾತ್ರವಲ್ಲದೇ ನಿಮಗೆ ಕಂಪನಿ ಕೆಲವು ಭತ್ಯೆಗಳು ಮತ್ತು ಬೆನೆಫಿಟ್‌ಗಳನ್ನು ನೀಡುವ ವಾಗ್ದಾನ ಮಾಡಿರುತ್ತದೆ. ಆ ಬಗ್ಗೆಯೂ ಆಫರ್‌ಲೆಟರ್‌ನಲ್ಲಿ ನಮೂದಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದನ್ನು ಮರೆಯಲು ಹೋಗಬೇಡಿ. ಸರಳವಾಗಿ ಹೇಳಬೇಕು ಎಂದರೆ, ಮೆಡಿಕಲ್ ಬೆನೆಫಿಟ್ಸ್, ಕಾರು ಸೌಲಭ್ಯ, ವಸತಿ ಸೌಲಭ್ಯ ಸೇರಿ ಇತ್ಯಾದಿ ಬೆನೆಫಿಟ್ಸ್ ಬಗ್ಗೆ ಹೇಳಲಾಗಿರುತ್ತದೆ. ಉದಾಹರಣೆಗೆ, ಮೆಡಿಕಲ್ ಅಥವಾ ಡೆಂಟಲ್ ಬೆನೆಫಿಟ್ಸ್ ಸಂಬಂಧ ಬಹಳಷ್ಟು ಕಂಪನಿಗಳು ಇನ್ಶೂರೆನ್ಸ್‌ಗೆ ತಮ್ಮ ಪಾಲಿನ ಅರ್ಧದಷ್ಟು ಹಣವನ್ನು ಪಾವತಿಸುತ್ತವೆ. ಮತ್ತು ಇನ್ನುಳಿದ ಹಣವನ್ನು ಉದ್ಯೋಗಿಯ ಸಂಬಳದಿಂದ ಹಾಕುತ್ತವೇ. ಇಂಥ ಸಂಗತಿಗಳನ್ನು ನೀವು ಜಾಬ್ ಆಫರ್ ಪಡೆಯುವಾಗ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.
- ರಜೆಗಳು ಮತ್ತು ರಜಾದಿನಗಳು
ಆಫರ್ ಲೆಟರ್ ಅಂತ ಬಂದಾಗ ರಜೆಗಳು ಮತ್ತು ರಜಾದಿನಗಳ ಮಾಹಿತಿಯನ್ನು ಬಹುತೇಕ ಎಲ್ಲರೂ ನಿರ್ಲಕ್ಷಿಸುತ್ತಾರೆ. ಸಾಮಾನ್ಯವಾಗಿ ಕೌನ್ಸೆಲರ್‌ಗಳು, ಉದ್ಯೋಗ ಮಾಹಿತಿ ನೀಡುವವರು ತಮ್ಮ ಹತ್ತಿರ ಬರುವ ಅಭ್ಯರ್ಥಿಗಳಿಗೆ ಈ ಬಗ್ಗೆ ತಿಳಿದುಕೊಳ್ಳುವುದರಿಂದ ದೂರವಿರುವಂತೆ ಹೇಳುತ್ತಾರೆ. ಯಾಕೆಂದರೆ, ಇದು ಸಂದರ್ಶಕರ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು ಎಂದು. ಭಾರತದ ಮಟ್ಟಿಗೆ ಇದು ಭಾಗಶಃ ಸತ್ಯವೂ ಹೌದು. ಆದರೆ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದೆರ, ರಜೆಗಳು ಮತ್ತು ರಜಾ ದಿನಗಳ ಬಗೆಗಿನ ಚರ್ಚೆಯು ಸಂದರ್ಶನದ ಒಂದು ಭಾಗವೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. ಈ ಒಂದು ಮಾಹಿತಿಯಿಂದ ಉದ್ಯೋಗಿಗೆ ತಾನು ಮಾಡುತ್ತಿರುವ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಂತಾಗುತ್ತದೆ. ಹಾಗಾಗಿ, ಈ ಬಗ್ಗೆಯೂ ತಿಳಿದುಕೊಳ್ಳುವುದು ತಪ್ಪೇನಲ್ಲ.
- ಜಾಬ್ ಜವಾಬ್ದಾರಿಗಳು
ಆಫರ್ ಲೆಟರ್‌ಗೆ ಸಹಿ ಹಾಕುವ ಮುನ್ನ ನೀವು ಈ ಸಂಗತಿಯ ಬಗ್ಗೆ ತಿಳಿದುಕೊಳ್ಳಬೇಕಾದದು ಮಹತ್ವದ್ದಾಗಿರುತ್ತದೆ. ನೀವು ಮಾಡಲಿರುವ ಉದ್ಯೋಗ ಯಾವದು, ಅದರ ವ್ಯಾಪ್ತಿ ಎಷ್ಟು, ನಿಮಗೆ ಯಾವ ಜವಾಬ್ದಾರಿಗಳು ಬರಲಿವೆ, ಯಾವ ಹೈರಾರ್ಕಿಯಲ್ಲಿ ನೀವು ಕೆಲಸ ಮಾಡಲಿದ್ದೀರಿ ಎಂಬಿತ್ಯಾದಿ ಸಂಗತಿಗಳ ಬಗ್ಗೆ ಗಮನ ಕೊಟ್ಟರೆ ಒಳ್ಳೆಯದು.
ಈ ಯುನಿವರ್ಸಿಟೀಲಿ ಕಲಿತರೆ ಉದ್ಯೋಗ ಪಕ್ಕಾ, ಕರ್ನಾಟಕದ್ದು ಇದೆಯಾ?