ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಯುವಕ ಈವರೆಗೆ 20 ಸರ್ಜರಿಗೆ ಒಳಗಾಗಿದ್ದಾನೆ. ಆದರೆ, ಆತನ ಆತ್ಮಶಕ್ತಿಗೇನೂ ಕುಂದು ಉಂಟಾಗಿಲ್ಲ. ಬಾಯಿಂದಲೇ ಜೆಇಇ ಎಕ್ಸಾಮ್ ಬರೆದು ಇದೀಗ ರ್ಯಾಂಕ್‌ನೊಂದಿಗೆ ಪಶ್ಚಿಮ ಬಂಗಾಳದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಇಂಜನಿಯಿರಂಗ್ ಸೈನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆಗೆ ಪ್ರವೇಶ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾನೆ. ಆತನೆ ಸಾಧನೆ ಪ್ರೇರಣಾದಾಯಕವಾಗಿದೆ.
ಪರೀಕ್ಷೆಯನ್ನ ಎದುರಿಸೋದು ಎಂಥವರಿಗೂ ಸವಾಲೇ ಸರಿ. ಅಂಥದ್ರಲ್ಲಿ ಕೈಗಳೇ ಇಲ್ಲದವರು ಪ್ರತಿಷ್ಠಿತ ಪರೀಕ್ಷೆ ಬರೆಯುತ್ತಾರೆ, ರ್ಯಾಂಕ್ ತೆಗೆದುಕೊಳ್ತಾರೆ ಅಂದ್ರೆ ಒಂದು ಕ್ಷಣ ಅಚ್ಚರಿ ಆಗುತ್ತೆ. ಕೈಗಳು ಸರಿಯಿದ್ದವರಿಂದಲೇ ಆರಾಮಾಗಿ ಎಕ್ಸಾಂ ಬರೆಯೋದು ಕಷ್ಟ. ಇನ್ನು ಅಂಗವಿಕಲರು ಅದ್ಹೇಗೆ ಅಷ್ಟು ಸಲೀಸಾಗಿ ಪರೀಕ್ಷೆ ಬರೆಯುತ್ತಾರೆ ಅನ್ನಿಸದೇ ಇರದು. ಪಾರ್ಶ್ವವಾಯುಗೆ ತುತ್ತಾದ ಯುವಕನೊಬ್ಬ ಜೆಇಇ ಪರೀಕ್ಷೆಯನ್ನು ಎದುರಿಸಿ, ಯಾರೂ ಊಹಿಸದ ರೀತಿಯಲ್ಲಿ ಸಾಧನೆ ಮಾಡಿದ್ದಾನೆ. ಅಂದಹಾಗೇ ಈ ಯುವಕ ಕೈಯಲ್ಲಿ ಪೆನ್ನು ಹಿಡಿದು ಪರೀಕ್ಷೆ ಬರೆದಿಲ್ಲ, ಬದಲಾಗಿ ಬಾಯಿಯಿಂದ ಎಕ್ಸಾಂ ಬರೆದಿದ್ದಾನೆ.
ಸಸ್ಯಾಧರಿತ ಮೊಟ್ಟೆ ಸಂಶೋಧಿಸಿದ ಐಐಟಿ ದೆಹಲಿ ಪ್ರೊಫೆಸರ್‌ಗೆ ಜಾಗತಿಕ ಪ್ರಶಸ್ತಿ
undefined
ಅಚ್ಚರಿ ಎನಿಸಿದ್ರೂ ಇದು ಸತ್ಯ. ೨೧ ವರ್ಷದ ತುಹಿನ್ ದುಬೇ ಬಾಯಿಯಲ್ಲಿ ಪೆನ್ನು ಹಿಡಿದು, ಜೆಇಇ ಮೇನ್ಸ್ ಪರೀಕ್ಷೆ ಬರೆದಿದ್ದಾನೆ. ತುಹಿನ್‌ಗೆ ಪಾರ್ಶ್ವವಾಯು ಹೊಡೆದ ಬಳಿಕ ಕುತ್ತಿಗೆಯಿಂದ ಕೆಳಭಾಗ ಅಂದ್ರೆ ಇಡೀ ದೇಹ ಸ್ವಾದೀನ ಕಳೆದುಕೊಂಡಿದೆ. ಇದ್ರಿಂದ ಧೃತಿಗೆಡದ ತುಹಿನ್, ತನ್ನ ಬಾಯಿಯಿಂದಲೇ ಬರೆಯುವುದು, ಮೊಬೈಲ್ ಹಾಗೂ ಕಂಪ್ಯೂಟರ್ ಆಪರೇಟ್ ಮಾಡುತ್ತಾನೆ. ಹೀಗೆ ಬಾಯಿಯಲ್ಲೇ ಪರೀಕ್ಷೆ ಬರೆದು ದೇಶದ ಪ್ರತಿಷ್ಟಿತ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾನೆ.
ಸೆರಬ್ರೆಲ್ ಪಾಲ್ಸಿ ರೋಗದಿಂದ ಬಳಲುತ್ತಿರುವ ತುಹಿನ್, ಬಾಯಿಯಿಂದಲೇ ಈ ವರ್ಷದ ಜೆಇಇ ಮುಖ್ಯ ಪರೀಕ್ಷೆ ಬರೆದು ೪೩೮ನೇ ರ್ಯಾಂಕ್ ಗಳಿಸಿದ್ದಾನೆ. ಈ ಮೂಲಕ ಪಶ್ಚಿಮ ಬಂಗಾಳದ ಶಹಿಬ್ ಪುರದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಸೀಟು ಪಡೆದುಕೊಂಡಿದ್ದಾನೆ.
ಈವರೆಗೂ ತುಹಿನ್ ೨೦ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದು, ಆತನ ಮೂಳೆ ನೇರವಾಗಿರುವಂತೆ ದೇಹದಲ್ಲಿ ಹಲವು ಪ್ಲೇಟ್‌ಗಳನ್ನ ಅಳವಡಿಸಲಾಗಿದೆ.
ಪಶ್ಚಿಮ ಬಂಗಾಳದ ಮಿಡ್ನಾಪುರ ನಿವಾಸಿಯಾದ ತುಹಿನ್, ರಾಜಸ್ಥಾನದ ಕೋಟಾದ ಇನ್ಸ್‌ಟಿಟ್ಯೂಟ್‌ನಲ್ಲಿ ಜೆಇಇ ಎಕ್ಸಾಂಗೆ ತರಬೇತಿ ಪಡೆದಿದ್ದ. ಕಳೆದ ವರ್ಷ ಕೂಡ ತುಹಿನ್ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಬರೆದಿದ್ದ. ಆದ್ರೆ ೧೨ನೇ ತರಗತಿಯ ಅಂಕಗಳಿಲ್ಲದೇ ಫೇಲ್ ಆಗಿದ್ದ.
ಇಂತಹ ಅಭ್ಯರ್ಥಿ ಪ್ರವೇಶ ಪಡೆದಿರುವುದಕ್ಕೆ ಸಂಸ್ಥೆಯ ಪ್ರತಿಯೊಬ್ಬರೂ ಸಂತೋಷಪಡುತ್ತಾರೆ . ಆ ಯುವಕನಿಗೆ ಅತಿ ಹೆಚ್ಚು ಅವಾರ್ಡ್‌ಗಳನ್ನ ಗಳಿಸಿರುವುದಕ್ಕೆ ನನಗೆ ಸಂತೋಷವಾಗುತ್ತದೆ. ಆತ ಖಂಡಿತವಾಗಿಯೂ ನಮ್ಮ ಸಂಸ್ತೆಯ ಉತ್ತಮ ವಿದ್ಯಾರ್ಥಿಯಾಗುತ್ತಾನೆ ಅಂತ ಹೆಮ್ಮೆಯ ನುಡಿಗಳನ್ನಾಡ್ತಾರೆ ಐಐಇಎಸ್‌ಟಿಯ ಹಿರಿಯ ಅಧಿಕಾರಿಯೊಬ್ಬರು.
ಶ್ರೀನಗರದ ಅಮರ್ ಸಿಂಗ್ ಕಾಲೇಜ್‌ಗೆ ಯುನೇಸ್ಕೋ ಪ್ರಶಸ್ತಿ
ಅಂಗವಿಕಲ ವಿದ್ಯಾರ್ಥಿಯೊಬ್ಬರು ಶೇಕಡಾ ೯೦ರಷ್ಟು ಅಂಕ ಪಡೆದು ನಮ್ಮ ಸಂಸ್ತೆಯಲ್ಲಿ ಓದುತ್ತಿರುವುದು ಇದೇ ಮೊದಲು ಅಂತಾರೆ ಮತ್ತೊಬ್ಬ ಅಧಿಕಾರಿ.
ಸಂಸ್ಥೆಯ ವತಿಯಿಂದ ಅವರ ಕುಟುಂಬಕ್ಕೆ ವಸತಿ ಸೌಲಭ್ಯವನ್ನು ಒದಗಿಸಲಾಗುವುದು.
ಆಂಗ್ಲ ಸೈದ್ಧಾಂತಿಕ ಭೌತಶಾಸ್ತ್ರಜ್ಞ, ವಿಶ್ವವಿಜ್ಞಾನಿ ಸ್ಟೀಫನ್ ಹಾಕಿಂಗ್ ಹಾಗೂ ಹಲವು ಪುಸ್ತಕಗಳೇ ತುಹಿನ್‌ನ ಆಸ್ತಿ. ಇಜಿನಿಯರಿಂಗ್ ಕೋರ್ಸ್ ಕಡಿಮೆ ದೈಹಿಕ ಕೆಲಸವನ್ನು ಪಡೆಯುವುದಿಂದ ನಾನು ಇದನ್ನು ಆಯ್ಕೆ ಮಾಡಿಕೊಂಡೆ ಅಂತಾರೆ ತುಹಿನ್.
ಯಾವುದೇ ಕೆಲಸವನ್ನು ಶೃದ್ಧೆಯಿಂದ ಮಾಡಿದರೆ ಯಾವುದೇ ಅಂಗವಿಕಲತೆಯಾಗಲಿ, ಬಡತನವಾಗಲಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ತುಹಿನ್ ಸಾಕ್ಷಿಯಾಗಿದ್ದಾರೆ. ಎಷ್ಟೋ ಜನರು ಎಲ್ಲ ಸೌಕರ್ಯಗಳಿದ್ದರೂ ನಾಲ್ಕು ಅಕ್ಷರ ಕಲಿಯಲು ಹಿಂದೇಟು ಹಾಕುತ್ತಾರೆ. ಅಂಥದ್ದರಲ್ಲಿ ತುಹಿನ್ ಬಾಯಿಂದಲೇ ಪರೀಕ್ಷೆ ಬರೆದು ಈ ಮಟ್ಟದ ಸಾಧನೆ ಮಾಡಿದ್ದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ವಿಶೇಷವಾಗಿ ಬಡತನ ಮತ್ತು ಅಂಗವಿಕಲರಿಗೆ ತಹಿನ್ ಸಾಧನೆ ಸ್ಫೂರ್ತಿ ತುಂಬಿ ಅವರಿಂದಲೂ ಅಂಥ ಸಾಧನೆಗೆ ಪ್ರೇರೇಪಿಸಲಿದೆ.
ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!