ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶಾಲೆಯೊಂದರಲ್ಲಿ ನಡೆದ ಘಟನೆ| ನಿನಗೆ ನಾಚಿಕೆ ಮಾನ ಮರ್ಯಾದೆ ಇದೆಯೆ? ಶುಲ್ಕ ಕಟ್ಟಿಲ್ಲ. ಶಾಲೆಗೆ ಏಕೆ ಬರುತ್ತಿಯಾ ಅಂತ ಕೇಳಿದ ಶಿಕ್ಷಕರು| ಸ್ವಲ್ಪ ದಿನದಲ್ಲಿ ಶುಲ್ಕ ಪಾವತಿಸುತ್ತೇನೆ ಅಂದರೂ ಕೇಳುತ್ತಿಲ್ಲ ಎಂದು ದೂರಿದ ವಿದ್ಯಾರ್ಥಿ|
ಚಿಕ್ಕಬಳ್ಳಾಪುರ(ಮಾ.05): ಶುಲ್ಕ ಪಾವತಿಸದ್ದಕ್ಕೆ ಜಾತಿ ನಿಂದನೆ ಜೊತೆಗೆ ನಿತ್ಯ ಶಾಲಾ ಶಿಕ್ಷಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶಾಲೆಯೊಂದರ 9ನೇ ತರಗತಿ ಓದುತ್ತಿರುವ ವಿಜಯ್ ವಿಡಿಯೋ ಮಾಡಿರುವ ವಿದ್ಯಾರ್ಥಿಯಾಗಿದ್ದಾನೆ. ಸುಮಾರು 2 ನಿಮಿಷ 24 ಸೆಕೆಂಡ್‌ಗಳ ವಿಡಿಯೋ ಮಾಡಿದ್ದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಇತ್ತಕಡೆ ಗಮನ ಹರಿಸಿ ಶಾಲೆ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾನೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ : ವಿದ್ಯಾರ್ಥಿಗಳೇ ಗಮನಿಸಿ
ನನ್ನ ಶಾಲೆಯಲ್ಲಿ ಅವಮಾನ ಮಾಡುತ್ತಿದ್ದಾರೆ. ನಿನಗೆ ನಾಚಿಕೆ ಮಾನ ಮರ್ಯಾದೆ ಇದೆಯೆ? ಶುಲ್ಕ ಕಟ್ಟಿಲ್ಲ. ಶಾಲೆಗೆ ಏಕೆ ಬರುತ್ತಿಯಾ ಅಂತ ಕೇಳುತ್ತಿದ್ದಾರೆ. ತಂದೆಗೆ ಹಣದ ಸಮಸ್ಯೆ ಇದೆ ಸ್ವಲ್ಪ ದಿನದಲ್ಲಿ ಶುಲ್ಕ ಪಾವತಿಸುತ್ತೇನೆ ಅಂದರೂ ಕೇಳುತ್ತಿಲ್ಲ ಎಂದು ವಿದ್ಯಾರ್ಥಿ ದೂರಿದ್ದಾನೆ.