ಇಂದು ಶಿಕ್ಷಕರ ದಿನಾಚರಣೆ. ಅತ್ಯಂತ ಪವಿತ್ರ ಹಾಗೂ ಗೌರವಯುತ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಕೊಡುಗೆ ಘೋಷಿಸಿದ್ದಾರೆ. ದೇಶಾದ್ಯಂತ 14,500 ಶಾಲೆಗಳ ಉನ್ನತೀಕರಣ ಹಾಗೂ ಅಭಿವೃದ್ಧಿ ಮಾಡುವುದಾಗಿ ಮೋದಿ ಘೋಷಿಸಿದ್ದಾರೆ.
ನವದೆಹಲಿ(ಸೆ.05): ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದೆ. ಈ ಶುಭ ದಿನ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ರೈಸಿಂಗ್ ಇಂಡಿಯಾ(PM-SHRI) ಯೋಜನೆಯಡಿ ದೇಶದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ ಸಂತಸ ಹಂಚಿಕೊಂಡಿದ್ದರೆ. ಶಿಕ್ಷಕರ ದಿನಾಚರಣೆ ಈ ದಿನ ಘೋಷಣೆ ಮಾಡಲು ಸಂತೋಷ ಪಡುತ್ತಿದ್ದೇನೆ. ಪ್ರಧಾನಿ ಮಂತ್ರಿ ರೈಸಿಂಗ್ ಇಂಡಿಯಾ ಯೋಡನೆ ಅಡಿಯಲ್ಲಿ ಭಾರತದ 14,500 ಶಾಲೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣ ಮಾಡಲಾಗುತ್ತಿದೆ. ಈ ಶಾಲೆಗಳು ಸಂಪೂರ್ಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
PM-SHRI ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ಶಾಲೆಗಳು ಹೇಗಿರಲಿದೆ ಅನ್ನೋ ಮಾಹಿತಿಯನ್ನು ಮೋದಿ(PM Modi) ನೀಡಿದ್ದಾರೆ. ಶಾಲೆಯ ಶಿಕ್ಷಣಗಳು(Modern Education) ಆಧುನಿಕತೆ ಪಡೆದುಕೊಳ್ಳಲಿದೆ. ಆಧುನಿಕ, ಪರಿವರ್ತನೆಯ ಹಾಗೂ ಸಮಗ್ರ ವಿಧಾನವನ್ನು ಉನ್ನತೀಕರಿಸಿದ ಶಾಲೆಗಳು ಹೊಂದಿರಲಿದೆ. ಆವಿಷ್ಕಾರ ಆಧಾರಿತ ಭೋದನೆ ಮಾರ್ಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್, ಕ್ರೀಡೆ ಸೇರಿದಂತೆ ಹಲವು ಮಜಲುಗಳ ಪಠ್ಯ ಹಾಗೂ ಪಠ್ಯೇತರ ಚುಟುವಟಿಕೆ, ತರಬೇತಿಗಳನ್ನು ಈ ಶಾಲೆಗಳನ್ನು ನೀಡಲಾಗುತ್ತದೆ. ಪ್ರಮುಖವಾಗಿ ಆಧುನಿಕ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
Today, on I am glad to announce a new initiative - the development and upgradation of 14,500 schools across India under the Pradhan Mantri Schools For Rising India (PM-SHRI) Yojana. These will become model schools which will encapsulate the full spirit of NEP.
— Narendra Modi (@narendramodi)
ರಾಷ್ಟ್ರೀಯ ಶಿಕ್ಷಣ ನೀತಿ(NEP) ಭಾರತದ ಶಿಕ್ಷಣ ಕ್ಷೇತ್ರನ್ನು ಪರಿವರ್ತಿಸಿದೆ. ಇದೀಗ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣದಿಂದ ದೇಶದ ಲಕ್ಷಾನುಗಟ್ಟಲೆ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.
ರಾಜ್ಯದ ಉತ್ತಮ ಶಿಕ್ಷಕ-ಶಿಕ್ಷಕಿಯರ ಪಟ್ಟಿ ಬಿಡುಗಡೆ
ಪ್ರಧಾನಿ ಮೋದಿ ಘೋಷಣೆಯನ್ನು ಶಿಕ್ಷಣ ಸಚಿವಾಲಯ ಸ್ವಾಗತಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸಿದೆ. PM SHRI(Pradhan Mantri Schools For Rising India) ಯೋಜನೆಯಡಿ ಅಭಿವೃದ್ಧಿಪಡಿಸಲಾಗುವು ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಎಲ್ಲಾ ಅಂಶಗಳನ್ನು ಒಳಗೊಂಡಿರಲಿದೆ. ಇಷ್ಟೇ ಈ ಶಾಲೆಗಳು ಮಾದರಿ ಶಾಲೆಗಳಾಗಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ(Ministry of Education) ಹೇಳಿದೆ.
PM SHRI ಶಾಲೆಗಳು ಬಹುಭಾಷಾ ಕಲಿಕೆ, ವಿಭಿನ್ನ ಶೈಕ್ಷಣಿಕ ಸಾಮರ್ಥ್ಯ, ಸಮಾನ ಹಾಗೂ ಸಂತೋಷದಾಯಕ ಶಾಲಾ ವಾತವರಣ ಕಲ್ಪಿಸಲಿದೆ. ಉನ್ನತ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸು ಕೆಲಸವಾಗಲಿದೆ ಎಂದು ಶಿಕ್ಷಣ ಇಲಾಖೆ ಟ್ವೀಟ್ ಮಾಡಿದೆ.