Shivamogga: ಶಾಲೆಯಲ್ಲೇ ನಮಾಜ್‌ಗೆ ಪರ್ಮಿಷನ್‌: ಮುಖ್ಯಶಿಕ್ಷಕಿ ಸಸ್ಪೆಂಡ್‌

By Girish Goudar  |  First Published Mar 22, 2022, 12:27 PM IST

*  ಖಾಸಗಿ ಶಾಲೆಯಲ್ಲಿ ನಿತ್ಯ ನಮಾಜ್‌: ವೀಡಿಯೋ ವೈರಲ್‌- 
*  ಬಿಜೆಪಿ ಕಾರ್ಪೊರೇಟರ್‌ ವಿಶ್ವನಾಥ್‌ ಅಧ್ಯಕ್ಷರಾಗಿರುವ ಶಾಲೆ
*  ನಮಾಜ್‌ಗೆ ಪ್ರತ್ಯೇಕ ಕೋಣೆ ಮೀಸಲಿಟ್ಟಿದ್ದು ಆಡಳಿತ ಮಂಡಳಿಗೆ ಗೊತ್ತೇ ಇರಲಿಲ್ಲ
 


ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ(ಮಾ.22): ನಗರದ ಖಾಸಗಿ ಶಾಲೆಯೊಂದರಲ್ಲಿ(Privet School) ವಿದ್ಯಾರ್ಥಿಗಳಿಗೆ ನಮಾಜ್‌(Namaz) ಮಾಡಲು ಅವಕಾಶ ನೀಡಲಾಗಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆಯಲ್ಲದೆ, ಈ ಸಂಬಂಧ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಖತ್ತಾಗಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಯು ಶಾಲೆ ಮುಖ್ಯಶಿಕ್ಷಕಿಯನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ.

Tap to resize

Latest Videos

ಜಬೀನಾ ಪರ್ವಿನ್‌ ಅಮಾನತುಗೊಂಡ(Sspend) ಮುಖ್ಯಶಿಕ್ಷಕಿ. ಗೋಪಾಲಗೌಡ ಬಡಾವಣೆಯ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ವಿಶೇಷವೆಂದರೆ, ಈ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಬಿಜೆಪಿ(BJP) ಕಾರ್ಪೋರೇಟರ್‌ ವಿಶ್ವನಾಥ್‌ ಎಂಬುವವರು.

Collegeನಲ್ಲಿ ನಮಾಜ್‌ಗೆ ನಕಾರ: ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕ ಪತ್ರ!

ಶಾಲೆಯಲ್ಲಿ ನಿತ್ಯ ನಮಾಜ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬುದು ಸುತ್ತಮುತ್ತಲಿನ ನಿವಾಸಿಗಳ ಮಾತು. ಇಲ್ಲಿಗೆ ಹಿಂದೂ(Hindu) ಮತ್ತು ಮುಸ್ಲಿಂ(Muslim) ಸೇರಿದಂತೆ ಎಲ್ಲ ಸಮುದಾಯದ ವಿದ್ಯಾರ್ಥಿಗಳೂ(Students) ಆಗಮಿಸುತ್ತಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ಪ್ರಾರ್ಥನೆ(Prayer) ವೇಳೆ ತಲೆಗೆ ಹಾಕಿಕೊಳ್ಳುವ ಜಾದರ್‌ (ಟೋಪಿ) ತರುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಇದರ ಬಗ್ಗೆ ಆಸಕ್ತರಾಗಿದ್ದಾರೆ. ಆಗ ಕೋಣೆಯೊಂದರಲ್ಲಿ ಪ್ರತಿದಿನ ನಮಾಜ್‌ ಮಾಡುತ್ತಿರುವುದು ಗೊತ್ತಾಗಿದೆ. ಇದನ್ನು ವೀಡಿಯೋ ಮಾಡಿ ವೈರಲ್‌ ಮಾಡಲಾಗಿದೆ. ಇದಕ್ಕಾಗಿ ಶಾಲೆ ಪ್ರಾಂಶುಪಾಲರು ಪ್ರತ್ಯೇಕ ಕೋಣೆಯೊಂದನ್ನು ಮೀಸಲಿಟ್ಟಿದ್ದರು ಎಂದು ತಿಳಿದುಬಂದಿದೆ. ಆದರೆ ಈ ವಿಷಯ ಆಡಳಿತ ಮಂಡಳಿಗೆ ಗೊತ್ತೇ ಇರಲಿಲ್ಲ ಎನ್ನಲಾಗುತ್ತಿದೆ.

ಸಾರ್ವಜನಿಕರು ಈ ವಿಷಯವನ್ನು ಪೊಲೀಸರಿಗೆ(Police) ತಿಳಿಸಿದ್ದಾರೆ. ಪೊಲೀಸರು ಆಗಮಿಸಿ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಡಿಡಿಪಿಐ ಅವರಿಗೆ ದೂರು ವರ್ಗಾಯಿಸಿದ್ದಾರೆ. ಡಿಡಿಪಿಐ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿದ ಸೂಚನೆಯಂತೆ ಬಿಇಒ ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಆಡಳಿತ ಮಂಡಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಇಷ್ಟೆಲ್ಲಾ ಗೊತ್ತಾಗುತ್ತಿದ್ದಂತೆ ಎಚ್ಚರಗೊಂಡ ಆಡಳಿತ ಮಂಡಳಿಯು ಮುಖ್ಯೋಪಾಧ್ಯಾಯಿನಿ ಜಬೀನಾ ಪರ್ವಿನ್‌ ಅವರನ್ನು ಅಮಾನತ್ತಗೊಳಿಸಿ ಆದೇಶಿಸಿದೆ.

ರೈಲ್ವೆ ನಿಲ್ದಾಣದಲ್ಲಿ ಹಮಾಲಿಗಳಿಂದ ನಮಾಜ್‌: ಹಿಂದೂ ಪರ ಸಂಘಟನೆಗಳ ಆಕ್ರೋಶ

ಬೆಂಗಳೂರು: ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹಮಾಲರ ವಿಶ್ರಾಂತಿ ಕೊಠಡಿಯೊಂದರಲ್ಲಿ ಮುಸ್ಲಿಂ(Muslim) ಸಮುದಾಯದ ಹಮಾಲಿಗಳ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲಾತಾಣಗಳಲ್ಲಿ(Social Media) ವೈರಲ್‌ ಆಗಿದ್ದು, ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾದ ಘಟನೆ ಜ.31 ರಂದು ನಡೆದಿತ್ತು. 

ಸ್ಥಳಕ್ಕೆ ಭೇಟಿ ನೀಡಿದ್ದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ರೈಲ್ವೆ ನಿಲ್ದಾಣದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣವಾಗುತ್ತಿದ್ದು, ಒಂದು ಸಮುದಾಯದ ಹಮಾಲಿಗಳು ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದಾರೆ. ಯಾವ ಆಧಾರದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದರು.

Gurgaon: Namaz ಸಲ್ಲಿಕೆಗೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು!

ಅಲ್ಲದೆ, ಈ ಕೃತ್ಯ ರಾಷ್ಟ್ರೀಯ ಸುರಕ್ಷತಾ ದೃಷ್ಟಿಯಿಂದ(National Security Vision) ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಮುಸ್ಲಿಂ ಹಮಾಲರಿಗೆ(Hamali) ಪ್ರಾರ್ಥನೆ ಸಲ್ಲಿಸಲು ನಿಲ್ದಾಣದ ಹೊರ ಭಾಗಗಳಲ್ಲಿ ಹಲವಾರು ಮಸೀದಿಗಳಿವೆ. ಹೀಗಿದ್ದರೂ, ನಿಲ್ದಾಣದ ಫ್ಲಾಟ್‌ಫಾರ್ಮ್‌ಗಳ ಮಧ್ಯದಲ್ಲಿ ಅವಕಾಶ ನೀಡಿರುವುದು ಷಡ್ಯಂತ್ರವಾಗಿದೆ. ಮುಂದೊಂದು ದಿನ ಈ ಸ್ಥಳವನ್ನು ಮಸೀದಿಯನ್ನಾಗಿ(Mosque) ಪರಿವರ್ತಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಕೃತ್ಯಕ್ಕೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. 

ಇದೇ ವೇಳೆ ಹಿಂದೂ ಜನ ಜಾಗೃತಿ ಸಮಿತಿ, ಭಜರಂಗದಳ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷದ್‌ನ ಸದಸ್ಯರು ಮುಸ್ಲಿಮರ ಪ್ರಾರ್ಥನೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. 
 

click me!