
ದಾವಣಗೆರೆ(ಆ.17): ವಿದ್ಯಾರ್ಥಿಯೊಬ್ಬನಿಗೆ ಬೋಧಕನು ಬೂಟುಗಾಲಿನಿಂದ ಒದ್ದಿರುವುದಾಗಿ ಆರೋಪಿಸಿ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ಸರ್ಕಾರಿ ಪಿಯು ಕಾಲೇಜಿಗೆ ವಿದ್ಯಾರ್ಥಿ ಪಾಲಕರು, ಬಂಧು-ಬಳಗ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.
ತ್ಯಾವಣಿಗೆ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಬೋಧಕ ಪ್ರಭಾಕರ್ ಅದೇ ಕಾಲೇಜಿನ ವಿದ್ಯಾರ್ಥಿ ಪ್ರತಾಪ ನಾಯ್ಕಗೆ ತನ್ನ ಬೂಟುಗಾಲಿನಿಂದ ಒದ್ದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬೂಟುಗಾಲಿನಿಂದ ಪ್ರತಾಪ ನಾಯ್ಕನಿಗೆ ಬೋಧಕ ಪ್ರಭಾಕರ್ ಹೊಡೆದಿರುವ ವಿಚಾರ ಗೊತ್ತಾಗಿ ಪಾಲಕರು, ಕುಟುಂಬ ವರ್ಗದವರು ಕಾಲೇಜಿಗೆ ಧಾವಿಸಿದ್ದಾರೆ.
ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ತೇಜೋವಧೆ ಯತ್ನ; ಸಿಇಎನ್ ಠಾಣೆಗೆ ದೂರು
ಕಾಲೇಜು ಪ್ರಾಚಾರ್ಯರು, ಬೋಧಕರು ಸಾಕಷ್ಟು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿದ್ಯಾರ್ಥಿ ಪಾಲಕರು, ಕುಟುಂಬದವರು ಸೊಪ್ಪು ಹಾಕದ್ದರಿಂದ ಮಧ್ಯಾಹ್ನದ ನಂತರ ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಗ್ರಾಮದ ಕಾಲೇಜಿಗೆ ದೌಡಾಯಿಸಿ, ಸಮಾಧಾನಪಡಿಸಲು ಸಾಕು ಸಾಕಾಗಿ ಹೋಗಿದ್ದಾರೆ. ಬೂಟುಗಾಲಿನಿಂದ ಹೊಡೆದ ಬೋಧಕನಿಗೆ ಪಾಲಕರು, ಕುಟುಂಬ ವರ್ಗ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.