
ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ನೀಡುವ ಜೆಇಇ ಪರೀಕ್ಷೆಯ ಇತಿಹಾಸದಲ್ಲೇ 360ಕ್ಕೆ 360 ಅಂಕಗಳನ್ನು ಗಳಿಸುವ ಮೂಲಕ 2017ರಲ್ಲಿ ವಿದ್ಯಾರ್ಥಿಯೋರ್ವ ದಾಖಲೆ ನಿರ್ಮಿಸಿದ್ದ. ಆತನೇ ಕಲ್ಪಿತ್ ವೀರ್ವಾಲ್, ಇಷ್ಟೊಂದು ಅಂಕ ಗಳಿಸಿದರು ಆತ ಐಐಟಿ ಬಾಂಬೆಯಲ್ಲಿ ಪ್ಲೇಸ್‌ಮೆಂಟ್‌ಗೆ ಹೋಗಲಿಲ್ಲ, ಹಾಗಿದ್ರೆ ಈ ಪ್ರತಿಭಾವಂತ ವಿದ್ಯಾರ್ಥಿ ಈಗೇನ್ ಮಾಡಿದ್ದಾರೆ. ರಾಜಸ್ಥಾನದ ಉದಯಪುರದ ಹುಡುಗನಾದ ಕಲ್ಪಿತ್ ವೀರ್ವಾಲ್ 2017ರಲ್ಲಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ 360ಕ್ಕೆ 360 ಅಂಕಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಜೆಇಇಯಲ್ಲಿ ಔಟ್ ಆಫ್ ಔಟ್ ಅಂಕ ಗಳಿಸಿದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಲ್ಪಿತ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ಸ್ಥಾನ ಗಳಿಸಿದ್ದರು. ಲಕ್ಷಾಂತರ ವಿದ್ಯಾರ್ಥಿಗಳ ಕನಸು ಅವರ ಪಾಲಿಗೆ ನನಸಾಗಿತ್ತು.
ಹಾಗಂತ ಕಲ್ಪಿತ್ ಅವರು ಬಹುತೇಕ ಟಾಪ್ ಸ್ಕೋರರ್ರಂತೆ ಸುಖ ಸುಪ್ಪತಿಗೆ ತುಂಬಿರುವ ಮನೆಯಲ್ಲಿ ಜನಿಸಿರಲಿಲ್ಲ. ಅವರ ತಂದೆ ಪುಷ್ಕರ್ ಲಾಲ್, ಉದಯಪುರದ ಮಹಾರಾಣಾ ಭೂಪಾಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದರೆ, ಅವರ ತಾಯಿ ಪುಷ್ಪಾ ವೀರವಾಲ್ ಶಾಲಾ ಶಿಕ್ಷಕಿಯಾಗಿದ್ದರು. ರಾಜಸ್ಥಾನದ ಕೋಟಾ ಈ ರೀತಿಯ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುವವರ ಸ್ವರ್ಗವಾಗಿದೆ. ಆದರೆ ರಾಜಸ್ಥಾನದವರೆ ಆದರೂ ಕೂಡ ಕಲ್ಪಿತ್ ತಮ್ಮ ಈ ಸಾಧನೆಗೆ ಯಾವುದೇ ಕೋಚಿಂಗ್ ಕ್ಲಾಸ್‌ಗಳಲ್ಲಿ ಟ್ಯೂಷನ್ ಪಡೆದಿರಲಿಲ್ಲ. ಆದರೆ ಅವರು ತಮ್ಮ ಊರಿನಲ್ಲೇ ಇದ್ದುಕೊಂಡು ಸ್ವಯಂ ಅಧ್ಯಯನ ಮಾಡಿದ್ದರು. ಹಾಗಂತ ಅವರು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಂತೆ ದಿನಕ್ಕೆ 16 ಗಂಟೆಗಳ ಕಾಲ ಅಧ್ಯಯನ ನಡೆಸಿರಲಿಲ್ಲ, ಆದರೆ ಕಡಿಮೆ ಸಮಯದಲ್ಲೇ ಹೆಚ್ಚು ಸಾಧನೆ ಮಾಡುವ ಸಾಮರ್ಥ್ಯ ಅವರಿಗಿತ್ತು.
ನಾನು ದಿನಕ್ಕೆ 15 ಗಂಟೆಗಳ ಕಾಲ ಅಧ್ಯಯನ ಮಾಡಲಿಲ್ಲ, ಐಐಟಿ ಸಿದ್ಧತೆಗಳಿಗಾಗಿ ನಾನು ಕೋಟಾಗೆ ಟ್ಯೂಷನ್‌ಗೆ ಹೋಗಲಿಲ್ಲ, ಆದರೆ ಸ್ಥಿರವಾದ ಅಧ್ಯಯನಗಳು ನನಗೆ ಬಹಳಷ್ಟು ಸಹಾಯ ಮಾಡಿದವು ಎಂದು ಅವರು 2017 ರಲ್ಲಿ ಪಿಟಿಐಗೆ ತಿಳಿಸಿದ್ದರು. ಹೀಗೆ ತನ್ನ ಸ್ವಂತ ಪರಿಶ್ರಮದ ಮೂಲಕ ಜೆಇಇ ಪಾಸಾದ ನಂತರ, ಕಲ್ಪಿತ್ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಸೇರಿದರು. ಹೀಗೆ ಕೋರ್ಸ್‌ಗೆ ಸೇರಿದ ಬಹುತೇಕರು ಪದವಿ ಪಡೆಯುವುದು, ಉದ್ಯೋಗ ಅರಸುವುದು, ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ಮಾಡುತ್ತಿದ್ದಾರೆ ಕಲ್ಪಿತ್ ಯೋಜನೆಯೇ ಬೇರೆಯದ್ದಾಗಿತ್ತು.
ಕಾಲೇಜು ಕ್ಯಾಂಪ್‌ನಲ್ಲಿ ನಡೆಸುವ ಪ್ಲೆಸ್‌ಮೆಂಟನ್ನು ಸಂಪೂರ್ಣವಾಗಿ ಬಿಟ್ಟು ಬಿಡುವುದಕ್ಕಾಗಿ ಅವರು ಸಾಕಷ್ಟು ಹಣ ಸಂಪಾದಿಸಲು ಬಯಸಿದ್ದರು. ಇದಕ್ಕಾಗಿ ಅವರು ತಮ್ಮ ಪರೀಕ್ಷಾ ತಯಾರಿ ತಂತ್ರದ ಬಗ್ಗೆ ಪ್ರಬಂಧಗಳನ್ನು ಬರೆಯಲು ಪ್ರಾರಂಭಿಸಿದರು. ಐಐಟಿ 2ನೇ ವರ್ಷದಲ್ಲಿದ್ದಾಗ ಯೂಟ್ಯೂಬ್ ಚಾನೆಲ್ ಆರಂಭಿಸಿದ ಅವರು ತಮ್ಮ ಅಧ್ಯಯನ ತಂತ್ರಗಳು ಜೆಇಇ ಪ್ರಿಪರೇಷನ್ ಟಿಪ್ಸ್‌ಗಳನ್ನು ಅಲ್ಲಿ ಹಂಚಿಕೊಂಡರು. ಅವರ ಈ ಚಾನೆಲ್‌ಗೆ ಸ್ವಲ್ಪ ಸಮಯದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ವಿದ್ಯಾರ್ಥಿಗಳು ಅವರ ಸಲಹೆಯನ್ನು ಪ್ರಾಯೋಗಿಕವಾಗಿದೆ, ಸಂಬಂಧಿಸಿದೆ ಮತ್ತು ಸಾಮಾನ್ಯ ತರಬೇತಿ ಕೇಂದ್ರಗಳು ಬೋಧಿಸುವುದಕ್ಕಿಂತ ಭಿನ್ನವಾಗಿದೆ ಎಂಬುದನ್ನು ಕಂಡುಕೊಂಡರು. 2019 ರಲ್ಲಿ ಅವರ ಯೂಟ್ಯೂಬ್ ಚಾನೆಲೆ 100,000 ಸಬ್‌ಸ್ಕ್ರೈಬರ್‌ಗಳನ್ನು ಗಳಿಸಿತು. ವಿದ್ಯಾರ್ಥಿಗಳ ಈ ಡಿಮಾಂಡ್ ನೋಡಿದ ಕಲ್ಪಿತ್ ಬೇರೆಯೇ ಯೋಜನೆಯ ಬಗ್ಗೆ ಯೋಚನೆ ಮಾಡುವಂತೆ ಮಾಡಿತ್ತು.
ಎಕಾಡ್‌ಬೂಸ್ಟ್ (ACADBOOST) ಆರಂಭಿಸಿದ ಕಲ್ಪಿತ್
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಸಹಾಯ ಮಾಡುವುದಕ್ಕಾಗಿ ಕಲ್ಪಿತ್ ಅಕಾಡ್‌ಬೂಸ್ಟ್ ಎಂಬ ಆನ್‌ಲೈನ್ ಶಿಕ್ಷಣ ವೇದಿಕೆಯನ್ನು ಪ್ರಾರಂಭಿಸಿದರು. ಹಾಗೂ ಇದನ್ನು ವಿಸ್ತರಿಸಲು ಅವರು ತಮ್ಮ ಇಂಟರ್ನ್‌ಶಿಪ್‌ಗಳನ್ನೇ ಕೈ ಬಿಟ್ಟರು. ಮುಂದಿನ ವರ್ಷ, ಅವರು ವೆಬ್‌ಸೈಟ್‌ಗಾಗಿ ತಮ್ಮ ಮೊದಲ ಆನ್‌ಲೈನ್ ಕೋರ್ಸ್ ಅನ್ನು ಅಭಿವೃದ್ಧಿಪಡಿಸಿದರು, ಮತ್ತು ಅದು ಅದ್ಭುತ ಯಶಸ್ಸನ್ನು ಕಂಡಿತು. ಅಲ್ಲದೇ ಅವರು ಐಐಟಿ ಬಾಂಬೆಯ ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪಡೆದ ಅತ್ಯಧಿಕ ಪ್ಯಾಕೇಜ್‌ಗಿಂತ ಹೆಚ್ಚಿನ ಹಣವನ್ನುಇದರಲ್ಲಿ ಗಳಿಸಿದರು. ಅಕಾಡ್‌ಬೂಸ್ಟ್ ಪ್ರತಿ ತಿಂಗಳು ಭಾರಿ ಲಾಭ ಗಳಿಸಿತು.
ಇದರ ಜೊತೆಗೆ ತನ್ನ ಫೈನಲ್ ಇಯರ್‌ನಲ್ಲಿದ್ದಾಗಲೇ ಕಲ್ಪಿತ್ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡರು, ತಮ್ಮ ಫೈನಲಿಯರ್ ಕೋರ್ಸನ್ನು ಒಂದು ಸೆಮಿಸ್ಟರ್ ಮೊದಲೇ ಮುಗಿಸಿದ ಅವರು ಯಾವುದೇ ಉದ್ಯೋಗಕ್ಕೆ ಸೇರದೇ ತಾವೇ ಸ್ಥಾಪಿಸಿದ ಅಕಾಡ್‌ಬೂಸ್ಟ್ ಟೆಕ್ನಾಲಜೀಸ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
2021ರ ವೇಳೆಗೆ ಅತ್ಯಂತ ಕಿರಿಯ ಲಿಂಕ್ಡಿನ್‌ನ ಟಾಪ್ ವಾಯ್ಸ್ ಎನಿಸಿದರು. ಜೊತೆಗೆ ಪ್ರಸಿದ್ಧ ಟೆಡೆಕ್ಸ್ ಸ್ಪೀಕರ್ ಎನಿಸಿದರು. ಹಲವು ಖಾಸಗಿ ಕಂಪನಿಗಳು ಕಲ್ಪಿತ್ ಅವರ ಮನೆಯ ಬಾಗಿಲನ್ನು ಅವರಾಗಿಯೇ ಬಂದು ಬಡಿದರು. ಆದರೆ ಕಲ್ಪಿತ್ ಅದೆಲ್ಲವನ್ನು ತಿರಸ್ಕರಿಸಿದರು. ಸ್ವತಂತ್ರವನ್ನು ಆಯ್ಕೆ ಮಾಡಿದ ಕಲ್ಪಿತ್ ತಮ್ಮ ಉದ್ಯಮದಲ್ಲಿ ಬಂದ ಹಣವನ್ನು ಹಲುವು ಉದ್ಯಮಗಳಲ್ಲಿ ಇನ್‌ವೆಸ್ಟ್ ಮಾಡಿದರು. ಸ್ಟಾಕ್‌ಗಳಲ್ಲಿ ರಿಯಲ್ ಎಸ್ಟೇಟ್‌ಗಳಲ್ಲಿ ಹೂಡಿಕೆ ಮಾಡಿದ ಅವರು ಹಲವು ಮೂಲಗಳಿಂದ ಆದಾಯ ಬರುವಂತೆ ಮಾಡಿದರು.
ತಮ್ಮ ಈ ಸಾಧನೆಯ ಹೊರತಾಗಿಯೂ ಕಲ್ಪಿತ್ ವಿದ್ಯಾರ್ಥಿಗಲ ಕ್ಷೇಮಕ್ಕೆ ಸ್ವರವಾದರು. 2024ರಲ್ಲಿ ಅತೀ ಎನಿಸಿದ ಸ್ಟಡಿ ಶೆಡ್ಯುಲ್ ವೈರಲ್ ಆದಾಗ, ಕೂಡಲೇ ಅದನ್ನು ತಿರಸ್ಕರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರ ಕಾಮೆಂಟ್ ಅಂದು ಹೆಡ್‌ಲೈನ್ ಆಗಿದ್ದವು. "ನಾನು ಜೆಇಇ ಮುಖ್ಯ ಪರೀಕ್ಷೆ 2017 (ಎಐಆರ್ 1) ನಲ್ಲಿ ಅಕ್ಷರಶಃ ಪೂರ್ಣ ಅಂಕಗಳನ್ನು ಗಳಿಸಿದ್ದೇನೆ ಮತ್ತು ಇದರ ಅರ್ಧದಷ್ಟು ಹೆಚ್ಚು ಅಧ್ಯಯನ ಮಾಡಿರಲಿಲ್ಲ, ಇಷ್ಟೊಂದು ಹೆಚ್ಚು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕೌಶಲ್ಯ ಸಮಸ್ಯೆಗಳೊಂದಿಗೆ ಸುಸ್ತಾಗುತ್ತಾರೆ ಎಂದು ಅವರು ಹೇಳಿದ್ದರು.
ಅನೇಕ ಟಾಪರ್‌ಗಳಂತೆ, ಕಲ್ಪಿತ್ ಸಾಮಾನ್ಯ ವಿದ್ಯಾರ್ಥಿ ಜೀವನದಿಂದ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಲಿಲ್ಲ. ಜೆಇಇಗೆ ತಯಾರಿ ನಡೆಸುವಾಗಲೂ, ಅವರು ಕ್ರಿಕೆಟ್, ಟಿವಿ, ಬ್ಯಾಡ್ಮಿಂಟನ್ ಮತ್ತು ಸಂಗೀತಕ್ಕಾಗಿ ಸಮಯವನ್ನು ಮೀಸಲಿಟ್ಟರು. ಕೋಟಾ ತರಬೇತಿ ಕೇಂದ್ರಗಳು ಅವರಿಗೆ ವಿಐಪಿ ಹಾಸ್ಟೆಲ್‌ಗಳು ಮತ್ತು ಸವಲತ್ತುಗಳನ್ನು ನೀಡುವ ಆಮಿಷ ವೊಡ್ಡಿದ್ದವು. ಆದರೆ ಅವರು ಉದಯಪುರದಲ್ಲಿಯೇ ಉಳಿದು ಜೆಇಇಯನ್ನು ಟಾಪರ್ ಆಗಿ ಪಾಸಾಗಿದ್ದಲ್ಲದೇ, ಯಾವುದೋ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಹುಡುಕುವ ಬದಲು ತನ್ನದೇ ಓದು ಮುಗಿಯುವುದರ ಜೊತೆಗೆ ತಮ್ಮದೇ ಒಂದು ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಅವರ ಈ ಯಶೋಗಾಥೆ ಅನೇಕ ವಿದ್ಯಾರ್ಥಿಗಳಿಗೆ ಮಾದರಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.