ಜನವರಿಯಲ್ಲಿ ಶಾಲಾ, ಕಾಲೇಜು ಆರಂಭ ಬೇಡ: ಸುಬುಧೇಂದ್ರ ತೀರ್ಥರು

Kannadaprabha News   | Asianet News
Published : Dec 21, 2020, 09:13 AM IST
ಜನವರಿಯಲ್ಲಿ ಶಾಲಾ, ಕಾಲೇಜು ಆರಂಭ ಬೇಡ: ಸುಬುಧೇಂದ್ರ ತೀರ್ಥರು

ಸಾರಾಂಶ

ಕೊರೋನಾ ಮಹಾಮಾರಿ ಇಡೀ ಮನುಕುಲವನ್ನು ಹಿಂಡಿಹಿಪ್ಪೆ ಮಾಡುತ್ತಿದೆ| ಎರಡನೇ ಹಂತದ ಕೊರೋನಾ ಅಲೆ ಹರಡುವ ಭೀತಿ ಇನ್ನೂ ಇದೆ| ಇಂಥ ಪರಿಸ್ಥಿತಿಯಲ್ಲಿ ಜನವರಿಯಿಂದ ಶಾಲಾ-ಕಾಲೇಜುಗಳನ್ನು ಆರಂಭಿಸುವ ಬದಲು ಒಂದಷ್ಟು ದಿನ ಕಾದು ನೋಡುವುದು ಸೂಕ್ತ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಸುಬುಧೇಂದ್ರ ಶ್ರೀಗಳು|   

ರಾಯಚೂರು(ಡಿ.21): ಚಳಿಗಾಲದಲ್ಲಿ ಕೊರೋನಾ ವ್ಯಾಪಿಸುವ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಜನವರಿಯಿಂದ ಶಾಲಾ-ಕಾಲೇಜುಗಳನ್ನು ಆರಂಭಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಪುನರ್‌ ಪರಿಶೀಲಿಸಬೇಕು ಎಂದು ಮಂತ್ರಾಲಯದ ಡಾ.ಸುಬುಧೇಂದ್ರ ತೀರ್ಥರು ಸಲಹೆ ನೀಡಿದ್ದಾರೆ.

ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಮಹಾಮಾರಿ ಇಡೀ ಮನುಕುಲವನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಎರಡನೇ ಹಂತದ ಕೊರೋನಾ ಅಲೆ ಹರಡುವ ಭೀತಿ ಇನ್ನೂ ಇದೆ. ಇಂಥ ಪರಿಸ್ಥಿತಿಯಲ್ಲಿ ಜನವರಿಯಿಂದ ಶಾಲಾ-ಕಾಲೇಜುಗಳನ್ನು ಆರಂಭಿಸುವ ಬದಲು ಒಂದಷ್ಟು ದಿನ ಕಾದು ನೋಡುವುದು ಸೂಕ್ತ ಎಂದು ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಖಾಸಗಿ ಶಾಲೆಗಳ ಸುಲಿಗೆಯಲ್ಲಿ ಸರ್ಕಾರ ಶಾಮೀಲು: ಬಿಎಸ್‌ವೈ ವಿರುದ್ಧ ಹರಿಹಾಯ್ದ ಸಿದ್ದು

ಸಾಮಾನ್ಯವಾಗಿ ಡಿಸೆಂಬರ್‌, ಜನವರಿಯಲ್ಲಿ ಚಳಿ ಜಾಸ್ತಿ ಇರುತ್ತದೆ. ಇದರಿಂದ ಕೊರೋನಾ ಹರಡುವ ಆತಂಕ ಹೆಚ್ಚಿರುತ್ತದೆ. ಅಲ್ಲದೆ, ಸಣ್ಣ ಮಕ್ಕಳಿಗೆ ಸಾಮಾಜಿಕ ಅಂತರ, ಸ್ವಚ್ಛತೆ ಹಾಗೂ ಇತರೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಕಷ್ಟವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಶಾಲಾ-ಕಾಲೇಜುಗಳನ್ನು ಆರಂಭಿಸಿದರೆ ರಾಜ್ಯದಲ್ಲಿ ಕೊರೋನಾ ವ್ಯಾಪಕವಾಗಿ ಹರಡಬಹುದಾಗಿದೆ. ಈ ಹಿಂದೆ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾದಾಗ ವಿಶ್ವಸಂಸ್ಥೆ, ಕೇಂದ್ರ ಹಾಗೂ ಆರೋಗ್ಯ ತಜ್ಞರು ಕೂಡ ಆ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಸಲಹೆ ನೀಡಿದ್ದರು ಎಂದು ಶ್ರೀಗಳು ಸ್ಮರಿಸಿದರು.
 

PREV
click me!

Recommended Stories

ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ