ಸಿಇಟಿ ಎಡವಟ್ಟು, ಸರ್ಕಾರ ಮೌನ, ವಿದ್ಯಾರ್ಥಿಗಳ ಕುತ್ತಿಗೆಗೆ ಕೈ ಹಾಕಿ ಪೊಲೀಸರ ಗೂಂಡಾ ವರ್ತನೆ

By Suvarna News  |  First Published Apr 22, 2024, 2:49 PM IST

ಸಿಇಟಿ ಪರೀಕ್ಷೆಯಲ್ಲಿ ಯಡವಟ್ಟು ಮಾಡಿರುವ ರಾಜ್ಯ ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದ್ದು, ಪೊಲೀಸರ ಗೂಂಡಾವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.


ಬೆಂಗಳೂರು (ಏ.22): ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಪಠ್ಯ ವ್ಯಾಪ್ತಿಯ ಹೊರಗಿನ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವ ದೂರುಗಳ ಮಧ್ಯೆಯೇ ಸಿಇಟಿ ಪರೀಕ್ಷೆ ಅವಾಂತರ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧೀಕಾರ ಮಾತ್ರ ಯಾವುದಕ್ಕೆ ಕ್ಯಾರೇ ಅನ್ನದೆ ಮೌನಕ್ಕೆ ಜಾರಿದೆ. ತಮ್ಮ ಎಡವಟ್ಟಿನ ಬಗ್ಗೆ ಒಂದು ಪ್ರತಿಕ್ರಿಯೆಯನ್ನು ನೀಡದೆ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿದೆ.

ಇನ್ನು ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಕೂಡ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಪಾಡಿಗೆ ತಾವು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜವಾಬ್ದಾರಿಯುವ ಸಚಿವರಾಗಿ ಸಿಇಟಿ ಯಡವಟ್ಟಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Tap to resize

Latest Videos

undefined

4 ವರ್ಷದ ಡಿಗ್ರಿ ಪಾಸ್‌ ಆದ ವಿದ್ಯಾರ್ಥಿಗಳಿಗೆ ಪಿಎಚ್‌ಡಿಗೆ ನೇರ ಅವಕಾಶ

ಮಲ್ಲೇಶ್ವರಂ ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿದರು.  ಸಿಇಟಿ ಪರೀಕ್ಷೆಯಲ್ಲಿ 50ಕ್ಕೂ ಅಧಿಕ ಪಠ್ಯೇತರ ಪ್ರಶ್ನೆ ಕೇಳಿದ್ದ ಹಿನ್ನೆಲೆ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ  ಆತಂಕ ಉಂಟಾಗಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು  ಆಗ್ರಹಿಸಿದರು.

ಇನ್ನು ಕೆಇಎ‌ ನಿರ್ದೇಶಕಿ ರಮ್ಯಾ ಕೂಡ ಸರಿಯಾದ ಸ್ಪಷ್ಟನೆ ಕೊಡುತ್ತಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ಕೂಡ ಮಾಡಿಲ್ಲ. ಮಾಧ್ಯಮದವರನ್ನು ಕೆಇಎ ಒಳಗಡೆ ಬಿಡದಂತೆ ನಿರ್ದೇಶಕಿ ರಮ್ಯಾ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಇನ್ನು ಅಧಿಕಾರಿಗಳು ಕೆಇಎ ಗೇಟ್ ಬಾಗಿಲು ಹಾಕಿಸಿದ್ದಾರೆ. ಹೀಗಾಗಿ ಮಾಧ್ಯಮಕ್ಕೂ ಪ್ರತಿಕ್ರಿಯೆ ಕೊಡದೇ ಆಗಿರುವ ಲೋಪವನ್ನ ಮರೆಮಾಚಲು ಮುಂದಾದ್ರ ಅನ್ನೋ ಅನುಮಾನ ಎದ್ದಿದೆ.

ಸಿಇಟಿ ಪರೀಕ್ಷೆ ಮುಗಿದ ಮೇಲೆ ಪಿಯು ಹೊಸ ಪಠ್ಯದ ಮಾಹಿತಿ ಕೇಳಿದ ಕೆಇಎ!

ಇನ್ನು 2024 ಸಿಇಟಿ ಪರೀಕ್ಷೆ ಅವಾಂತರ ವಿರೋಧಿಸಿ  ಕೆಇಎ ವಿರುದ್ಧ ಇಂದು ಎಬಿವಿಪಿ ಪ್ರತಿಭಟನೆ ಮಾಡಿರುವ ಹಿನ್ನೆಲೆ ಮಲ್ಲೇಶ್ವರಂನ ಕೆಇಎ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. 30 ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

ಇನ್ನು ಕೆಇಎ ಎದುರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಗೆ ಅಡ್ಡಿಪಡಿಸದಂತೆ  ವಿದ್ಯಾರ್ಥಿಗಳು ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಆದ್ರೆ ಕೆಇಎ ಮುಂಭಾಗದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು  ಪೊಲೀಸರು ಮನವರಿಕೆ ಮಾಡಲು ಪ್ರಯತ್ನಿಸಿದರು. ಹೀಗಾಗಿ ರಸ್ತೆಯಲ್ಲಿ ಕುಳಿತು ABVP ಪ್ರತಿಭಟನೆ ಮುಂದಾಯ್ತು. ಈ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನ ಪೊಲೀಸರು  ವಶಕ್ಕೆ ಪಡೆದರು.   ಬಿಎಂಟಿಸಿ ಬಸ್‌ನಲ್ಲಿ ABVP ಕಾರ್ಯಕರ್ತರು ತುಂಬಿದರು.  ಈ ವೇಳೆ ಕುತ್ತಿಗೆಗೆ ಕೈ ಹಾಕಿ ಪೊಲೀಸರು ಗೂಂಡಾ ವರ್ತನೆ ತೋರಿದರು. ವಿಧ್ಯಾರ್ಥಿಗಳನ್ನ ಎಳೆದಾಡಿ ಕುತ್ತಿಗೆಗೆ ಕೈಹಾಕಿ ತಳ್ಳಾಡಿದರು. ಪೊಲೀಸರ ಈ ವರ್ತನೆಯನ್ನು ವಿಧ್ಯಾರ್ಥಿ ಸಂಘಟನೆ ಖಂಡಿಸಿ ಆಕ್ರೋಶ ಹೊರ ಹಾಕಿತು.

click me!