ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ: KSRTC ಬಸ್‌ಗಳಲ್ಲಿ ಉಚಿತ ಪ್ರಯಾಣ

By Kannadaprabha NewsFirst Published Dec 11, 2020, 8:16 AM IST
Highlights

ಡಿ.31ರವರೆಗೆ ವಿದ್ಯಾರ್ಥಿಗಳ ಹಳೆ ಬಸ್‌ ಪಾಸ್‌ಗೆ ಮಾನ್ಯತೆ| ಕಳೆದ ತಿಂಗಳಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ಕಾಲೇಜುಗಳು ಪುನರಾರಂಭ| 

ಬೆಂಗಳೂರು(ಡಿ.11): ಕೆಎಸ್‌ಆರ್‌ಟಿಸಿಯು ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿರುವ ಹಿನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ಸಾಲಿನ ಬಸ್‌ ಪಾಸ್‌ ತೋರಿಸಿ ಡಿ.31ರ ವರೆಗೂ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿದೆ. 

ಪ್ರಸಕ್ತ ಸಾಲಿನಲ್ಲಿ ಕೊರೋನಾದಿಂದ ಶಾಲಾ-ಕಾಲೇಜು ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ನಿಗಮವು ವಿದ್ಯಾರ್ಥಿ ಬಸ್‌ ಪಾಸ್‌ ವಿತರಣೆ ಮಾಡಿಲ್ಲ. ಇದೀಗ ಕಳೆದ ತಿಂಗಳಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ಕಾಲೇಜುಗಳು ಪುನರಾರಂಭವಾಗಿವೆ. 

ಬಸ್‌ ಪಾಸ್‌ ಇಂದೇ ಕೊನೆ ದಿನ, ನಾಳೆಯಿಂದ ಏನು?

ಹೀಗಾಗಿ ವಿದ್ಯಾರ್ಥಿಗಳು ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವಾಗ ಪ್ರಸಕ್ತ ಸಾಲಿನಲ್ಲಿ ಕಾಲೇಜಿಗೆ ಪಾವತಿಸಿರುವ ಶುಲ್ಕದ ರಶೀದಿಯೊಂದಿಗೆ 2019-20ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.
 

click me!