ಯಾದಗಿರಿ: ಅಧಿಕಾರಿಗಳ ಎಡವಟ್ಟು ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

By Girish Goudar  |  First Published Jan 21, 2023, 2:00 AM IST

ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಅದೇ ಶಿಕ್ಷಣ ಪಡೆಯಲು ಪರಿಶ್ರಮವೂ ಅಷ್ಟೇ ಪಡಬೇಕಾಗುತ್ತದೆ. ಕೆಲವು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಯಾದಗಿರಿ ಜಿಲ್ಲೆಯ ಹಲವು ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್‌

ಯಾದಗಿರಿ(ಜ.21): ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಅದೇ ಶಿಕ್ಷಣ ಪಡೆಯಲು ಪರಿಶ್ರಮವೂ ಅಷ್ಟೇ ಪಡಬೇಕಾಗುತ್ತದೆ. ಕೆಲವು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಯಾದಗಿರಿ ಜಿಲ್ಲೆಯ ಹಲವು ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ. ಯಾದಗಿರಿ ಜಿಲ್ಲೆಯ ಹತ್ತಾರು ಬಿ.ಎಡ್ ವಿದ್ಯಾರ್ಥಿಗಳು ನಗರದ ಡಯಟ್ ಕಚೇರಿಯಲ್ಲಿ ದಾಖಲೆ ಪರಿಶೀಲನಗೆಂದು ಬಂದಾಗ ಶಾಕ್ ಎದಯರಾಗಿತ್ತು. ಇದರಿಂದ ವಿದ್ಯಾರ್ಥಿಗಳು ಕೆರಳಿ ಕೆಂಡವಾದರು. ಜೊತೆಗೆ ತಮಗಾದ ಅಳಲನ್ನು ಬಹಖ ಆಕ್ರೋಶಭರಿತವಾಗಿ ತೋಡಿಕೊಂಡಿದ್ದು, ನಮಗೆ ಈ ನಿರ್ಧಾರದಿಂದ ಆಘಾತವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ಬಿಎಡ್ ಓದಲು ಮುಂದಾದ ವಿದ್ಯಾರ್ಥಿಗಳಿಗೆ ಶಾಕ್..!

ಉನ್ನತ ಶಿಕ್ಷಣ ಪಡೆಯಲು ಮುಂದಾದ ಯಾದಗಿರಿಯ ಹಲವು ವಿದ್ಯಾರ್ಥಿಗಳ ಪರಿಸ್ಥಿತಿ ಈಗ ಡೋಲಾಯಮಾನವಾದ ಪರಿಸ್ಥತಿ ಉಂಟಾಗಿದೆ. ಅದಕ್ಕೆ ಕಾರಣ ನಾವಲ್ಲ ಮೇಲಿನ ನಿರ್ದೇಶನವೇ ಕಾರಣ ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದು, ಇದು ಉನ್ನತ ಶಿಕ್ಷಣ ಪಡೆಯಲು ಮುಂದಾದ ವಿದ್ಯಾರ್ಥಿಗಳು ಬರಸಿಡಿಲು ಬಡಿದಂತಾಗಿದೆ. ಅದರ ಹಿಂದಿನ ಕಹಾನಿ ಇಲ್ಲಿದೆ ನೋಡಿ. ಗುಲಬರ್ಗಾ ವಿಶ್ವವಿದ್ಯಾಲಯವು ಡಿಗ್ರಿ ಫಲಿತಾಂಶವನ್ನು ತಡವಾಗಿ ಪ್ರಕಟಗೊಳಿಸಿದ ಪರಿಣಾಮ ಇದೀಗ ಬಿಎಡ್ ಮಾಡಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಬಿಎಡ್ ಸೀಟ್ ಗಾಗಿ ಕಳೆದ ನವೆಂಬರ್ ನಲ್ಲಿ ಡಿಗ್ರಿ ಐದನೇ ಸೆಮಿಸ್ಟರ್ ಆಧಾರದ ಮೇಲೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಮೊದಲ ಆಯ್ಕೆ ಪಟ್ಟಿಯಲ್ಲಿ ಬಿಎಡ್ ಸೀಟ್ ಕೂಡ ಸಿಕ್ಕಿತ್ತು. ಇಂದು‌‌ ಡಯಟ್ ಅಧಿಕಾರಿಗಳು ದಾಖಲಾತಿ ಪರಿಶೀಲನೆ ವೇಳೆ 6ನೇ‌ ಸೆಮಿಸ್ಟರ್ ಫಲಿತಾಂಶದ ದಾಖಲಾತಿ ಸಲ್ಲಿಸದ ವಿದ್ಯಾರ್ಥಿಗಳನ್ನು ಬಿಎಡ್ ಆಯ್ಕೆ ಪಟ್ಟಿಯಿಂದ ಕೈ ಬಿಟ್ಟು ವಾಪಸ್ ಕಳುಹಿಸಿದ್ದರಿಂದ ರೋಸಿಹೋದ ವಿದ್ಯಾರ್ಥಿಗಳು  ಹಾಗೂ ಪೋಷಕರು ಡಯಟ್ ಅಧಿಕಾರಿಗಳೊಂದಿಗೆ ಶುಕ್ರವಾರ ಯಾದಗಿರಿಯಲ್ಲಿ ಕೆಲಕಾಲ ವಾಗ್ವಾದ ನಡೆಸಿದರು.

Pariksha Pe Charcha: ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ

ಒಂದು ವರ್ಷ ವ್ಯರ್ಥ ಎಂದು ಸ್ಟೂಡೆಂಟ್ಸ್ ಕಿಡಿ

ವಿದ್ಯಾರ್ಥಿಗಳಿಗೆ ಕಳೆದ‌ ನವೆಂಬರನಲ್ಲಿ ಡಿಗ್ರಿ 5ನೇ ಸೆಮಿಸ್ಟರ್ ಫಲಿತಾಂಶದ ಆಧಾರದ ಮೇಲೆ ಅರ್ಜಿ ಸಲ್ಲಿಕೆಯಾಗಿ ಸೀಟ್ ನೀಡಿದ್ದು,  ಇದೀಗ 6ನೇ ಸೆಮಿಸ್ಟರ್ ಆಧಾರದ ಮೇಲೆ‌ ದಾಖಲಾತಿ ಸಲ್ಲಿಸಿಲ್ಲದಿರುವುದನ್ನೇ ನೆಪ ಮಾಡಿ ನಮಗೆ ಬಿಎಡ್ ಸೀಟ್ ನೀಡದೇ ವಾಪಸ್ ಕಳುಹಿಸಿರುವುದರಿಂದ ವಿದ್ಯಾರ್ಥಿಗಳ ಒಂದು ವರ್ಷದ ಸಮಯ ವ್ಯರ್ಥವಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡ್ರು. 5ನೇ ಸೆಮಿಸ್ಟರ್ ಆಧಾರದ ಮೇಲೆ ಬಿಎಡ್ ಗೆ ಅರ್ಜಿ ಸಲ್ಲಿಕೆ ಕರೆದು ಸೀಟ್ ನೀಡಿ ಅಂತಿಮ ಪಟ್ಟಿ ಆಯ್ಕೆ ವೇಳೆ 6ನೇ ಸೆಮಿಸ್ಟರ್ ಫಲಿತಾಂಶದ ದಾಖಲಾತಿ ಕೇಳುತ್ತಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನಿಸಿದ್ದಾರೆ. ಇದರಿಂದ ನಮ್ಮ ಒಂದು ವರ್ಷ ಸುಮ್ಮನೆ ವ್ಯರ್ಥವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ಸುತ್ತೊಲೆ ಆರು ಸೆಮಿಸ್ಟರ್ ಫಲಿತಾಂಶವುಳ್ಳವರಿಗೆ ಮಾತ್ರ ಅವಕಾಶ:ದೊಡ್ಡಪ್ಪ ಹೊಸಮನಿ

ಯಾದಗಿರಿ ಡಯಟ್ ಸಂಸ್ಥೆ ಪ್ರಭಾರಿ ದೊಡ್ಡಪ್ಪ ಹೊಸಮನಿ ಮಾತನಾಡಿ, ಸರ್ಕಾರದ ಸುತ್ತೊಲೆ ಪ್ರಕಾರ ಆರು ಸೆಮಿಸ್ಟರ್ ಫಲಿತಾಂಶ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಆದ್ರೆ ಗುಲಬರ್ಗಾ ವಿಶ್ವವಿದ್ಯಾಲಯದ ಫಲಿತಾಂಶ ತಡವಾಗಿ ಬಂದಿದೆ. ಇದರಿಂದಾಗಿ ಯಾವ ವಿದ್ಯಾರ್ಥಿಗಳು ಆರು ಸೆಮಿಸ್ಟರ್ ಫಲಿತಾಂಶವುಳ್ಳ ಅರ್ಜಿ ಸಲ್ಲಿಸಿದ್ದಾರೋ ಅವರಿಗೆ ಅವಕಾಶ ಕೊಡುತ್ತಿದ್ದೇವೆ. ಆದ್ರೆ ಕೇವಲ ಐದು ಸೆಮಿಸ್ಟರ್ ಫಲಿತಾಂಶ ಫಲಿತಾಂಶವುಳ್ಳ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಇಲ್ಲ ಅಂತ ಸರ್ಕಾರ ಸುತ್ತೊಲೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಏನಾದ್ರು ಐದು ಸೆಮಿಸ್ಟರ್ ಫಲಿತಾಂಶವುಳ್ಳವರಿಗೆ ಅವಕಾಶ ನೀಡಿ ಅಂತ ತಿಳಿಸಿದ್ರೆ ಅವಕಾಶ ನೀಡಲಾಗುತ್ತದೆ ಎಂದರು.

click me!