ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌?

By Kannadaprabha NewsFirst Published Oct 1, 2024, 4:45 AM IST
Highlights

ಸೋಮವಾರ ಬೆಳಗ್ಗೆ 6 ಗಂಟೆಗೆ ಸಿಗಬೇಕಿದ್ದ ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಜಾಲತಾಣದಲ್ಲಿ ಹರಿದಾಡಿದೆ ಶಾಲೆಯವರು ಡೌನ್‌ಲೋಡ್ ಮಾಡಿಕೊಳ್ಳುವ ಮುಂಚೆಯೇ ಕೆಲವೆಡೆ ವಿದ್ಯಾರ್ಥಿಗಳ ಕೈ ಸೇರಿದೆ ಎನ್ನಲಾಗಿದೆ. 

ಬೆಂಗಳೂರು(ಅ.01): ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅರ್ಧವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಸಾಮಾಜಿಕ ಜಾಲತಾಣದಲ್ಲಿ ಒಂದು ದಿನ ಮೊದಲೇ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಮೊದಲ ಬಾರಿಗೆ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನೂ ಮಂಡಳಿಯೇ ನೀಡಿದೆ. 

ಶಾಲೆಯ ಮುಖ್ಯೋಪಾಧ್ಯಾಯರ ಲಾಗಿನ್‌ಗೆ ಕಳುಹಿಸಿ ಅದನ್ನು ಪರೀಕ್ಷೆಯ ಹಿಂದಿನ ದಿನ ಡೌನ್‌ಲೋಡ್ ಮಾಡಿಕೊಂಡು ಅಗತ್ಯಾನುಸಾರ ಪ್ರಿಂಟ್ ಔಟ್ ತೆಗೆದು ಕೊಂಡು ಮರು ದಿನ ಪರೀಕ್ಷೆಗೆ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ, ಪರೀಕ್ಷೆ ಆರಂಭಕ್ಕೂ ಮೊದಲೇ ಪ್ರಶ್ನೆ ಪತ್ರಿಕೆಗಳು ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಎಚ್ಚೆತ್ತುಕೊಂಡಿದ್ದ ಮಂಡಳಿ ಪರೀಕ್ಷೆ ನಡೆಯುವ ದಿನ ಬೆಳಗ್ಗೆ 6 ಗಂಟೆಗೆ ಶಾಲಾ ಮುಖ್ಯೋ ಪಾಧ್ಯಾಯರ ಲಾಗಿನ್‌ಗೆ ಪ್ರಶ್ನೆ ಪತ್ರಿಕೆ ಕಳುಹಿಸಲಾಗುವುದು, ಅದೇ ದಿನ ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಹಂಚಬೇಕು ಎಂದು ಸೂಚಿಸಲಾಗಿತ್ತು. 

Latest Videos

SSLC ಮಧ್ಯವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಶಿಕ್ಷಣ ಇಲಾಖೆ ಹೊಸ ನಿಯಮಕ್ಕೆ ಆಕ್ರೋಶ

ಸೋಮವಾರ ಬೆಳಗ್ಗೆ 6 ಗಂಟೆಗೆ ಸಿಗಬೇಕಿದ್ದ ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಜಾಲತಾಣದಲ್ಲಿ ಹರಿದಾಡಿದೆ ಶಾಲೆಯವರು ಡೌನ್‌ಲೋಡ್ ಮಾಡಿಕೊಳ್ಳುವ ಮುಂಚೆಯೇ ಕೆಲವೆಡೆ ವಿದ್ಯಾರ್ಥಿಗಳ ಕೈ ಸೇರಿದೆ ಎನ್ನಲಾಗಿದೆ. 

ದೂರು ಬಂದಿಲ್ಲ- ಅಧಿಕಾರಿಗಳು: 

ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, 'ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಈವರೆಗೆ ಯಾವುದೇ ದೂರು ಬಂದಿಲ್ಲ. ಎಂದು ಮಂಡಳಿ ನಿರ್ದೇಶಕ (ಪರೀಕ್ಷೆಗಳು) ಎಚ್. ಎನ್. ಗೋಪಾಲಕೃಷ್ಣ ಹೇಳಿದ್ದಾರೆ.

click me!