ಜಿಲ್ಲೆ ಬ್ರಹ್ಮಾವರದ ಎಸ್ಎಮ್ಎಸ್ ಕಿರುಪರಿಕ್ಷೆಯ ಪ್ರಶ್ನೆ ಪತ್ರಿಕೆ ವೈರಲಾಗಿದೆ. ಕೇವಲ ಇಸ್ಲಾಂ ಮತ್ತು ಕ್ರಿಶ್ಚಿಯಾನಟಿ ಕುರಿತು ಮಕ್ಕಳಿಗೆ ಪ್ರಶ್ನೆ ಕೇಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕ್ರಿಶ್ಚಿಯನ್ ಆಡಳಿತ ಮಂಡಳಿಯ ಶಾಲೆಯಲ್ಲಿ ಧರ್ಮ ಶಿಕ್ಷಣ ನೀಡಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ನಿಜಕ್ಕೂ ಪ್ರಶ್ನೆ ಪತ್ರಿಕೆಯ ಗುಟ್ಟೇನು?
ಉಡುಪಿ (ಜು.13) : ಜಿಲ್ಲೆ ಬ್ರಹ್ಮಾವರದ ಎಸ್ಎಮ್ಎಸ್ ಕಿರುಪರಿಕ್ಷೆಯ ಪ್ರಶ್ನೆ ಪತ್ರಿಕೆ ವೈರಲಾಗಿದೆ. ಕೇವಲ ಇಸ್ಲಾಂ ಮತ್ತು ಕ್ರಿಶ್ಚಿಯಾನಟಿ ಕುರಿತು ಮಕ್ಕಳಿಗೆ ಪ್ರಶ್ನೆ ಕೇಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕ್ರಿಶ್ಚಿಯನ್ ಆಡಳಿತ ಮಂಡಳಿಯ ಶಾಲೆಯಲ್ಲಿ ಧರ್ಮ ಶಿಕ್ಷಣ ನೀಡಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ನಿಜಕ್ಕೂ ಪ್ರಶ್ನೆ ಪತ್ರಿಕೆಯ ಗುಟ್ಟೇನು?
ಬ್ರಹ್ಮಾವರದ ಎಸ್.ಎಮ್.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ (ರಾಜ್ಯ ಪಠ್ಯಕ್ರಮ) ನಡೆದ ಜೂನ್ ತಿಂಗಳ ಕಿರು ಪರೀಕ್ಷೆಯಲ್ಲಿ ಏಳನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಶಾಲಾಡಳಿತ ಮಂಡಳಿ ಗುರುವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.
undefined
ಉಡುಪಿ: 17 ರಿಂದ ಅಗ್ನಿಪಥ್ Rally, 6800 ಯುವಕರ ನೋಂದಣಿ!
ಈ ಬಗ್ಗೆ ಮಾತನಾಡಿದ ಎಸ್‌ಎಂಎಸ್‌ನ ಸಿಬಿಎಸ್‌ಸಿ ವಿಭಾಗದ ಪ್ರಾಂಶುಪಾಲರಾದ ಅಭಿಲಾಷ ಹಂದೆ ಮಾತನಾಡಿ, ಸಮಾಜ ವಿಜ್ಞಾನದ ಮೊದಲ ಪಾಠ "Major developments in the world ಮತ್ತು ಎರಡನೆಯ ಪಾಠ Beginning of the Mikleri Age - Renaissance ಆಗಿದ್ದು, ಅದರಲ್ಲಿ ಕಲಿಸ ಬೇಕಾಗಿದ್ದ ಪಠ್ಯಾಂಶಗಳು ಕ್ರಿಶ್ಚಿಯಾನಿಟಿ, ಇಸ್ಲಾಮ್, ಕ್ರುಸೇಡ್, ದ ಮಂಗೋಲ್ಸ್, ಟರ್ಕಿಸ್, ರಿನಸನ್ಸ್ ಆಗಿದೆ.
ಒಂದು ತಿಂಗಳಲ್ಲಿ ಈ ಎರಡು ಪಾಠಗಳನ್ನು ಮುಗಿಸಿದ ಶಿಕ್ಷಕರು, ಜಗತ್ತಿನ ಆಗುಹೋಗುಗಳ ಭಾಗವಾಗಿ ಬಂದಿದ್ದ ಈ ಪಠ್ಯಾಂಶಗಳನ್ನು ಆಕರವಾಗಿಟ್ಟುಕೊಂಡು, ಯಾವುದೇ ದುರುದ್ದೇಶ ಇಲ್ಲದೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಿದರು. ಪ್ರಶ್ನೆಗಳೆಲ್ಲವೂ ಈ ಪಠ್ಯಾಂಶಗಳ ಕುರಿತೇ ಇದೆ ಎಂಬುದನ್ನು ಎಲ್ಲರೂ ಗಮನಿಸಬಹುದು.
ಇದರ ಹಿನ್ನೆಲೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ, ಪ್ರಶ್ನೆ ಪತ್ರಿಕೆಯ ವಿಷಯಕ್ಕೂ, ಸಂಸ್ಥೆ ನಡೆಸುತ್ತಿರುವ ಆಡಳಿತ ಮಂಡಳಿಯ ಕೋಮಿಗೂ ಸಂಬಂಧ ಕಲ್ಪಿಸಿ, ನಮ್ಮ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣ ಕೊಡಲಾಗುತ್ತಿದೆ ಎಂಬ ಅರ್ಥ ಬರುವ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಯಿತು. ಈ ಸುದ್ದಿ ವಾಸ್ತವಕ್ಕೆ ದೂರವಾಗಿದ್ದು, ಇಲ್ಲಿ ಸತ್ಯಾಂಶವನ್ನು ತಿರುಚಲಾಗಿದೆ. ಅಷ್ಟೇಅಲ್ಲದೇ ಈ ಸುಳ್ಳು ಆಪಾದನೆಗಳಿಂದ, ನಮ್ಮ ಆಡಳಿತಕ್ಕೆ ಒಳಪಟ್ಟಿ SMS ( CBSE ಶಾಲೆ ಮತ್ತು SMS ( State Board) ಶಾಲೆಗಳ ತೇಜೋವಧೆ ಮಾಡಿ ನಮ್ಮ ಪೋಷಕರಲ್ಲಿ ಆತಂಕ ಮೂಡಿಸಲಾಗುತ್ತಿದೆ.
ಕಳೆದ ನೂರಾರು ವರ್ಷಗಳಿಂದ ಬ್ರಹ್ಮಾವರದಲ್ಲಿ ಶೈಕ್ಷಣಿಕ ಸೇವೆ ನಡೆಸುತ್ತಿರುವ ನಮ್ಮ ಸಂಸ್ಥೆಗಳ ಹಳ ವಿದ್ಯಾರ್ಥಿಗಳ ಸಂಖ್ಯೆಯ ಲಕ್ಷಕ್ಕೂ ಮಿಕ್ಕಿದೆ. ವಿವಿಧ ಧರ್ಮ, ವರ್ಗದ ಮಕ್ಕಳು ಇಲ್ಲಿ ಕಲಿಯುತ್ತಿದ್ದು, ಬೇರೆ ಬೇರ ವರ್ಗ, ಮತ, ಕೋಮಿನ ಐನೂರಕ್ಕೂ ಮಿಕ್ಕಿ ಸಿಬ್ಬಂದಿಗಳು ಇಲ್ಲಿ ದುಡಿಯುತ್ತಿದ್ದಾರೆ. ದೇಶದ ಸಂವಿಧಾನಕ್ಕೆ ಬದ್ಧರಾಗಿ ರಾಜ್ಯ / ಕೇಂದ್ರ ನಿಗದಿ ಪಡಿಸಿದ ಪಠ್ಯಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿ ತರಗತಿ ನಡೆಸಲಾಗುತ್ತದೆಯೇ ಹೊರತು ಯಾವ ಧಾರ್ಮಿಕ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತಿಲ್ಲ. ಎಲ್ಲ ಧರ್ಮದ ಮಕ್ಕಳಿಗೂ ಅವರವರ ಅಭಿವ್ಯಕ್ತಿಗೆ ಮುಕ್ತ ವಾತಾವರಣ ಕಲ್ಪಿಸಿದ್ದು, ಧರ್ಮನಿರಪೇಕ್ಷ ಕಾಸ್ಮೋಪೊಲಿಟಿನ್ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿದಿದ್ದೇವೆ.
ಇಲ್ಲಿ ಅನುದಿನವೂ ಯೋಗ, ಭರತನಾಟ್ಯ, ಯಕ್ಷಗಾನ ಮುಂತಾದ ಭಾರತೀಯ ಸಾಂಸ್ಕೃತಿಕ ಕಲೆಗಳಿಗೆ ಸಂಬಂಧ ಪಟ್ಟ ಚಟುವಟಿಕೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ನಾವು ಮಾಡುತ್ತಿದ್ದೇವೆ ಇಂತಹ ಹಿನ್ನೆಲೆಯುಳ್ಳ ನಮ್ಮ ಪ್ರತಿಷ್ಟಿತ ಸಂಸ್ಥೆಗಳ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ಅಪಪ್ರಚಾರ ಮಾಡಿ, ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವ ಈ ಪ್ರಸ್ತುತ ವಿದ್ಯಮಾನವನ್ನು ನಾವು ಪ್ರಬಲವಾಗಿ ಖಂಡಿಸುತ್ತವೆ ಎಂದರು.
NABARD: ಪಿಎಂ ಸ್ವನಿಧಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ
ಪತ್ರಿಕಾಗೋಷ್ಠಿಯಲ್ಲಿ ಓಎಸ್‌ಸಿ ಎಜುಕೇಶನಲ್ ಸೊಸೈಟಿ (ರಿ) ಪ್ರ.ಕಾರ್ಯದರ್ಶಿ ಅಲೆನ್ ರೋಹನ್, ರಾಜ್ಯ ಪಠ್ಯಕ್ರಮದ ಪ್ರಾಂಶುಪಾಲೆ ವತ್ಸಲಾ ಶೆಟ್ಟಿ, ಪಿಯು ಪ್ರಾಂಶುಪಾಲ ಐವನ್, ಪದವಿ ಕಾಲೇಜಿನ ಕಾರ್ಯದರ್ಶಿ ಐವನ್ ಡೊನಾಲ್ಟ್ ಉಪಸ್ಥಿತರಿದ್ದರು.