Ukraineನಿಂದ ಮರಳಿದ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಸಿದ್ದಗಂಗಾ ಮಠ ನೆರವು

By Suvarna News  |  First Published May 6, 2022, 4:54 PM IST

ಯುದ್ಧಪೀಡಿತ ಉಕ್ರೇನ್ ನಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಪ್ರಾಯೋಗಿಕ ಅಧ್ಯಯನ ಮಾಡಲು ಸಿದ್ದಗಂಗಾ ಮಠ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ  ಮುಂದೆ ಬಂದಿದೆ.


ತುಮಕೂರು (ಮೇ.6): ಯುದ್ಧಪೀಡಿತ ಉಕ್ರೇನ್ (Ukraine) ನಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆ ಮಧ್ಯೆ ಸಿದ್ದಗಂಗಾ ಮಠದ (Siddaganga Mutt) ವೈದ್ಯಕೀಯ ಕಾಲೇಜು (medical college) ಬೆಳಕಿನ ಆಶಾಕಿರಣವಾಗಿದೆ. ನಾಲ್ಕನೇ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಉಕ್ರೇನ್ ನ ಶಿಕ್ಷಣ ಸಂಸ್ಥೆಗಳಲ್ಲಿ ಆನ್ ಲೈನ್ ನಲ್ಲಿ ಓದುತ್ತಿರುವವರಿಗೆ ಕ್ಲಿನಿಕಲ್ ಪ್ರಾಯೋಗಿಕ ಅಧ್ಯಯನ ಮಾಡಲು ಸಿದ್ದಗಂಗಾ ಮಠ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (Siddaganga Hospital and Research Centre-SHRC)ಯಲ್ಲಿ ಅವಕಾಶ ನೀಡಲು ಮಠ ಮುಂದೆ ಬಂದಿದೆ.

2022-23ರ ಶೈಕ್ಷಣಿಕ ವರ್ಷದಿಂದ ತಮ್ಮ ಎಂಬಿಬಿಎಸ್ (MBBS) ಅಧ್ಯಯನ ಪ್ರಾರಂಭಿಸಿದ ವಿದ್ಯಾರ್ಥಿಗಳು ಮತ್ತು ಕಾಲೇಜುಗಳಿಗೆ ಇದರಿಂದ ಪ್ರಯೋಜನವಾಗಲಿದೆ. ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಇಂಟರ್ನಿಗಳಾಗಿ ಕೆಲಸ ಮಾಡಬಹುದು. ಇದು ಅಧಿಕೃತ ಕೋರ್ಸ್ ಅಲ್ಲ, ಪ್ರಯೋಗಾಲಯ ಮತ್ತು ಆಸ್ಪತ್ರೆಯಲ್ಲಿ ನಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಅವರು ಪಡೆಯುವ ತರಬೇತಿಗೆ ಪ್ರಮಾಣಪತ್ರವನ್ನು ನೀಡಬೇಕಾಗಿಲ್ಲ. ಉಕ್ರೇನ್‌ನಲ್ಲಿರುವ ವಿಶ್ವವಿದ್ಯಾಲಯಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ಧರಿಸಬೇಕು ಎಂದು ಎಸ್‌ಎಚ್‌ಆರ್‌ಸಿ ನಿರ್ದೇಶಕ ಡಾ.ಎಸ್.ಪರಮೇಶ್ ಹೇಳಿದ್ದಾರೆ.

Tap to resize

Latest Videos

ಮರ್ಯಾದೆಯಿಂದ ವಾಪಸ್ ಹೋಗಲೇ....PSIಗೆ ಮೂಡಿಗೆರೆ ಶಾಸಕನ ಅವಾಜ್!

ಮೇಲ್ನೋಟಕ್ಕೆ ಸಿದ್ದಗಂಗಾ ಮಠದ ಮುಖ್ಯಸ್ಥ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸೂಚನೆಗಳನ್ನು ಅನುಸರಿಸಿ ಕಾಲೇಜು ಕೈಗೊಂಡ ಉಪಕ್ರಮವು ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯವನ್ನು ನೀಡಿದೆ. ರಾಜ್ಯಾದ್ಯಂತ ಉಕ್ರೇನ್ ನಿಂದ ಬಂದಿರುವ  ಅನೇಕ ವೈದ್ಯಕೀಯ ವಿದ್ಯಾರ್ಥಿಗಳನ್ನು ವಿಚಾರಿಸಿದೆವು, ಬೇರೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದ ಕಾರಣ ಅವರು ತಮ್ಮದೇ ಆದ ಸೌಕರ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಸಿಬ್ಬಂದಿ ಕಾಂತರಾಜು ಹೇಳುತ್ತಾರೆ.

16 ವಿದ್ಯಾರ್ಥಿಗಳಲ್ಲಿ ಒಬ್ಬರಾದ ಗಣೇಶ್ ಯಾದವ್ ಅವರು ತಮಗೆ ದೊರೆತ ಸಹಾಯವು ಬ್ರಿಡ್ಜ್ ಕೋರ್ಸ್‌ನಂತೆ ಕೆಲಸ ಮಾಡುತ್ತಿದೆ ಎಂದು ಕಾಲೇಜಿಗೆ ಕೃತಜ್ಞತೆ ಹೇಳುತ್ತಾರೆ. ನಮ್ಮ ಮಾರ್ಗದರ್ಶಿಯಾಗಿ ಮೂರು ದಶಕಗಳ ಅನುಭವ ಹೊಂದಿರುವ ಡಾ.ಶಾಲಿನಿಯಂತಹ ಪರಿಣಿತ ಅಧ್ಯಾಪಕರನ್ನು ಹೊಂದಿದ್ದೇವೆ. ನಾವು ರೋಗಿಗಳೊಂದಿಗೆ ಸಂವಾದ ನಡೆಸಿದ್ದೇವೆ, ಪ್ರಯೋಗಾಲಯದಲ್ಲಿ ಕ್ಲಿನಿಕಲ್ ಅನುಭವವನ್ನು ಪಡೆದುಕೊಂಡಿದ್ದೇವೆ ಎಂದು ಮತ್ತೊಬ್ಬ ವಿದ್ಯಾರ್ಥಿ ಕುಶಿ ಹೇಳುತ್ತಾರೆ.

ರೈಲ್ವೇ ಪ್ರಯಾಣಿಕರಿಗೆ ಅನುಕೂಲಕ್ಕೆ 50 ಸಾವಿರಕ್ಕೂ ಹೆಚ್ಚು 'KARMA YOGIS' ನಿಯೋಜನೆ

ಮೇ 3ನೇ ವಾರದೊಳಗೆ SSLC ಫಲಿತಾಂಶ: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂವರ್ಕ್'ನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 3ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಹೋಂವರ್ಕ್'ನ್ನು ಸರ್ಕಾರ ಅನುಮತಿಸುವುದಿಲ್ಲ, ಆದರೆ, 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂವರ್ಕ್ ಕಡಿಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಮೇ ಎರಡನೇ ಅಥವಾ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ (  SSLC Result) ಬರಲಿದೆ ಎಂದು ತಿಳಿಸಿದ್ದಾರೆ.

ಸ್ಟಾಕ್ ಹೋಲ್ಡರ್ಸ್ ಗಳು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶಾಲಾಸಮವಸ್ತ್ರಕ್ಕೆ ವಿಧಿಸುತ್ತಿರುವ ವೆಚ್ಚ ಭಾರೀ ಮೊತ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸಮವಸ್ತ್ರಕ್ಕೆ ಮರು ಟೆಂಡರ್ ಕರೆಯಲಾಗುತ್ತದೆ ಎಂದಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಪರಿಸ್ಥಿತಿಯಿಂದಾಗಿ ಉಳಿದಿರುವ ಸ್ಟಾಕ್ ಗಳನ್ನು ಕಡಿಮೆ ಬೆಲೆಗೆ ನೀಡಲು ಬಯಸಿದ್ದರು. ಆದರೆ, ಇದೀಗ ಡೀಸೆಲ್ ದರ ಹೆಚ್ಚಳದಿಂದ ಸಾರಿಗೆ ವೆಚ್ಚ ಹೆಚ್ಚಾಗಿದ್ದು, ಇದನ್ನು ಪರಿಗಣಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಮವಸ್ತ್ರ ಸಂಬಂಧ ಇರುವ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುತ್ತದೆ ಎಂದು ನಾಗೇಶ್ ಅವರು ತಿಳಿಸಿದ್ದಾರೆ.

click me!