ಕೊಟ್ಟ ಮಾತಿನಂತೆ ನಡೆದುಕೊಂಡ ಮಣಿಪುರ ಸಚಿವ! ಆ ವಾಗ್ದಾನವೇನು?

By Suvarna NewsFirst Published May 6, 2022, 12:10 PM IST
Highlights

* ಶಾಲೆಯಲ್ಲಿ ಕಂಕಳುಲ್ಲಿ ತಂಗಿಯನ್ನುಕೂಡಿಕೊಂಡು ಕಲಿಯುತ್ತಿದ್ದ ಬಾಲಕಿ ಪಮೇಯ್ ಫೋಟೋ ವೈರಲ್
* ಪಮೇಯ್‌ಗೆ ಇಂಫಾಲ್‌ನಲ್ಲಿ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದ ಮಣಿಪುರದ ಸಚಿವ ಥೋಂಗಮ್
* ಕೊಟ್ಟ ಮಾತಿನಂತೆ ಪಮೇಯ್‌ಳನ್ನು ಇಂಫಾಲ್ ನಗರದ ಬೋರ್ಡಿಂಗ್ ಸ್ಕೂಲ್ ಸೇರಿಸಿದ ಸಚಿವ 

ಜನಪ್ರತಿನಿಧಿಗಳು ಭರವಸೆ ಕೊಡುವುದು ಸಾಮಾನ್ಯ.  ಅದನ್ನು ಈಡೇರಿಸುವುದು ಬಹಳ ಕಡಿಮೆ. ಕೊಟ್ಟ ಮಾತನ್ನು ಮರೆತೇ ಬಿಡುವುದು ಅವರ ಮಾಮೂಲಿ ಕಯ್ಯಾಲಿ. ಆದರೆ ಮಣಿಪುರ (Manipur)ದ ಸಚಿವರು (Minister) ಈ‌ ಮಾತಿಗೆ ತದ್ವಿರುದ್ಧ. ಕಳೆದ ತಿಂಗಳು ಕ್ಯಾಬಿನೆಟ್ ಸಚಿವ ಥೋಂಗಮ್ ಬಿಸ್ವಜಿತ್ ಸಿಂಗ್ (Thongam Biswajit Singh) ಮಾಡಿದ್ದ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ. ಪುಟ್ಟ ತಂಗಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ನಿತ್ಯ ಶಾಲೆಗೆ ಹೋಗುತ್ತಿದ್ದ ಮಣಿಪುರದ 10 ವರ್ಷದ ಮೈನಿಂಗ್‌ಸಿನ್ಲಿಯು ಪಮೇಯ್ (Meiningsinliu Pamei) ಅವಳಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಮಗುವನ್ನು ಬಾಲಕಿ ಶಾಲೆ (School)ಗೆ ಕರೆತರುವ ಫೋಟೋಗಳು ಸೋಷಿಯಲ್ ಮೀಡಿಯಾ (Social Media)ದಲ್ಲಿ ವೈರಲ್ (Viral) ಆಗುತ್ತಿದ್ದಂತೆ ಸಚಿವ ಥೋಂಗಮ್ ಬಿಸ್ವಜಿತ್ ಸಿಂಗ್, ಮೈನಿಂಗ್‌ಸಿನ್ಲಿಯು ಪಮೇಯ್ ನೆರವಿಗೆ ಧಾವಿಸೋದಾಗಿ ಹೇಳಿದ್ದರು. ಆಕೆಗೆ ಉಚಿತವಾಗಿ ಉನ್ನತ ಶಿಕ್ಷಣ (Eduaction) ಕೊಡಿಸುವ ಹೊಣೆಗಾರಿಕೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅಂದು ಕೊಟ್ಟ ಮಾತಿನಂತೆ ಸಚಿವರು ನಡೆದುಕೊಂಡಿದ್ದಾರೆ. ಮೈನಿಂಗ್‌ಸಿನ್ಲಿಯನ್ನು ಇಂಫಾಲ್‌ (Imphal)ನ ಬೋರ್ಡಿಂಗ್ ಶಾಲೆಯಾದ ಸ್ಲೋಪ್‌ಲ್ಯಾಂಡ್ ಪಬ್ಲಿಕ್ ಸ್ಕೂಲ್‌ (Slopeland Public School)ಗೆ ಸೇರಿಸಿದ್ದಾರೆ.

ಬಡತನದ ಬೇಗೆಯಲ್ಲಿ ಬೆಂದು ಗೆದ್ದು ಬಂದ ಆಟೋ ಚಾಲಕನ ಮಗನ ಕಥೆ

ಈ ವಿಚಾರವನ್ನು ಖುದ್ದು ಸಚಿವ ಬಿಸ್ವಜಿತ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ‌.  ಇಂಫಾಲ್‌ನ ಬೋರ್ಡಿಂಗ್ ಶಾಲೆ ಸ್ಲೋಪ್‌ಲ್ಯಾಂಡ್ ಪಬ್ಲಿಕ್ ಸ್ಕೂಲ್‌ಗೆ ಬಾಲಕಿ ಸೇರಿರುವ ಫೋಟೋಗಳನ್ನು ಶೇರ್ ಮಾಡಿ,  ಆಕೆಯ ಯಶಸ್ಸಿಗೆ ಶುಭ ಹಾರಆ್ದಾರೆ. #MeiningsinliuPamei ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಲು ನನ್ನೊಂದಿಗೆ ಸೇರಿ! ಭರವಸೆ ನೀಡಿದಂತೆ, ನಾನು ಅವಳ ಬೋರ್ಡಿಂಗ್ ಶಾಲೆಯನ್ನು ಇಂಫಾಲ್‌ನ ಸ್ಲೋಪ್‌ಲ್ಯಾಂಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದೇನೆ ಎಂದು ಸಿಂಗ್ ಬರೆದಿದ್ದಾರೆ. ಈ ಸುದ್ದಿಯಿಂದ ಸಂತಸಗೊಂಡಿರುವ ನೆಟಿಜನ್‌ಗಳು ಕೂಡ ಕಮೆಂಟ್ ಗಳ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.  ಟ್ವಿಟರ್ ಬಳಕೆದಾರರು ಈ ಮಣಿಪುರ ಸಚಿವರು ಕೈಗೊಂಡಿರುವ ಕಾರ್ಯವನ್ನು ತಮ್ಮ ಮುಕ್ತ ಕಂಠದಿಂದ ಹೊಗಳಿದ್ದಾರೆ. ಸಚಿವರ ಭರವಸೆಯನ್ನು ಈಡೇರಿಸಿದ್ದಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

 

Join me to wish good luck for her future endeavours!

As promised, I have arranged her boarding schooling in Slopeland Public School, Imphal.
I wish her to come off with flying colours. pic.twitter.com/EIn6qZpd0G

— Th.Biswajit Singh (@BiswajitThongam)

 

ಮೈನಿಂಗ್‌ಸಿನ್ಲಿ ಫೋಟೋ ವೈರಲ್ ಆಗ್ತಿದ್ದಂತೆ  ಸಚಿವ ಸಿಂಗ್,  ಕಳೆದ ತಿಂಗಳು ಆಕೆ ಮತ್ತು ಅವಳ ಕುಟುಂಬವನ್ನು ತನ್ನ ನಿವಾಸಕ್ಕೆ ಆಹ್ವಾನಿಸಿದ್ದರು. ಆಕೆ ಪದವಿ ಪಡೆಯುವವರೆಗೆ ಅವಳ ಶಿಕ್ಷಣದ ವೆಚ್ಚವನ್ನು ನೀಡುವುದಾಗಿ ಭರವಸೆ ನೀಡಿದ್ದರು.  ಪೋಷಕರು ಕೃಷಿ ಕೆಲಸಕ್ಕಾಗಿ ಹೊಲಗಳಿಗೆ ಹೋಗುತ್ತಿದ್ದರಿಂದ ಪುಟ್ಟ ಮಗುವನ್ನು ಮೈನಿಂಗ್‌ಸಿನ್ಲಿಯೇ ನೋಡಿಕೊಳ್ಳುತ್ತಿದ್ದಳು. ಮಗುವನ್ನು ತೊಟ್ಟಿಲಿಗೆ ಹಾಕಿ ತರಗತಿಯಲ್ಲಿ ಕೊಟ್ಟ ಟಿಪ್ಪಣಿಗಳನ್ನು ಬರೆಯುತ್ತಿದ್ದಳು. ಚಿಕ್ಕ ವಯಸ್ಸಿನಲ್ಲೇ ಬಾಲಕಿಯ ತಾಯಿ ಹೃದಯಕ್ಕೆ ಪ್ರತಿಯೊಬ್ಬರು ಕರಗಿದ್ದರು. ತಂಗಿ ಜೊತೆಗೆ ಶಾಲೆಯಲ್ಲಿ ಕಲಿಯುವ  ಫೋಟೋದಿಂದ ಪ್ರೇರೇಪಣೆಗೊಂಡಿದ್ದ  ಸಿಂಗ್, ಆಕೆಯ ಕುಟುಂಬವನ್ನು ಪತ್ತೆಹಚ್ಚಿ ಇಂಫಾಲ್‌ಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ  ಬಾಲಕಿಯನ್ನು ಪತ್ತೆ ಮಾಡಲಾಗಿದ್ದು, ಒಂದೇ ತಿಂಗಳಲ್ಲಿ ಸಚಿವರು ಬೋರ್ಡಿಂಗ್ ಶಾಲೆಗೆ  ಎಂಟ್ರಿ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. 

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕೂಡ ಬಾಲಕಿಯ ಫೋಟೋವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. “ಈ ಶಕ್ತಿಯುತ ಚಿತ್ರವು ನಮ್ಮ ಮಕ್ಕಳ, ವಿಶೇಷವಾಗಿ ಹುಡುಗಿಯರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಶಿಕ್ಷಣಕ್ಕಾಗಿ ತನ್ನ ಸಮರ್ಪಣೆ ಮತ್ತು ತನಗಾಗಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂಬ  ಮೈನಿಂಗ್‌ಸಿನ್ಲಿ ದಿಟ್ಟ ನಿರ್ಣಯ ಸಂಪೂರ್ಣವಾಗಿ ವಿಸ್ಮಯವಿದೆ. ಅವಳಿಗೆ ನನ್ನ ಆಶೀರ್ವಾದಗಳು" ಎಂದು ಬರೆದುಕೊಂಡಿದ್ದಾರೆ. 

ರಾಜಕಾರಣಿಗಳಿಗೆ ತಾವು ಕೊಟ್ಟಿರುವ ಭರವಸೆಗಳೇ ನೆನಪಿರುವುದಿಲ್ಲ. ಜತೆಗೆ ಜನರು ಕೂಡ ಅಂಥ ಭರವಸೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂಥದ್ದರಲ್ಲಿ ಮಣಿಪುರ ಶಿಕ್ಷಣ ಸಚಿವರು ತಾವು ನೀಡಿರುವ ವಾಗ್ದಾದಾನವನ್ನು ಪೂರೈಸುವ ಮೂಲಕ ತಾವೊಬ್ಬ ನುಡಿದಂತೆ ನಡೆಯುವ ರಾಜಕಾರಣಿ ಎಂಬುದನ್ನು ನಿರೂಪಿಸಿದ್ದಾರೆ. 

ಪಿಎಚ್‌ಡಿ ಅಭ್ಯರ್ಥಿಗಳಿಗೆ ಗೂಗಲ್ ಇಂಡಿಯಾ ಫೆಲೋಶಿಪ್!

click me!