ಮರು ಮೌಲ್ಯಮಾಪನ ಮಾಡ್ಸಿ ರಾಜ್ಯಕ್ಕೆ ಸೆಕೆಂಡ್ ಬಂದ SSLC ವಿದ್ಯಾರ್ಥಿನಿ: ಇದು ಕಾನ್ಫಿಡೆಂಟ್ ಅಂದ್ರೆ

By Suvarna News  |  First Published Sep 6, 2020, 6:26 PM IST

ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನದಲ್ಲಿ  ಬಂದ ಅಂಕಗಳಿಂದ ರಾಮನಗರದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್ ಬಂದಿದ್ದಾಳೆ. ಇದರ ಬೆನ್ನಲ್ಲೇ ಮತ್ತೋರ್ವ ವಿದ್ಯಾರ್ಥಿನಿ 625ಕ್ಕೆ 624 ಅಂಕಗಳಿಸಿ ರಾಜ್ಯಕ್ಕೆ ಸೆಕೆಂಡ್​​ ಬಂದಿದ್ದಾಳೆ. 


ಶಿವಮೊಗ್ಗ(ಸೆ.06): ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ ಬಂದ ಅಂಕಗಳಿಂದ ಶಿವಮೊಗ್ಗದ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.

ಶಿವಮೊಗ್ಗ ನಗರದ ಕಲ್ಲಹಳ್ಳಿ ಬಡಾವಣೆಯ ಪ್ರಿಯದರ್ಶಿನಿ ಶಾಲೆಯ  ಕಾವ್ಯ ಆರ್. ಮರು ಮೌಲ್ಯಮಾಪನದಿಂದ ರಾಜ್ಯಕ್ಕೆ ಸೆಕೆಂಡ್ ಬಂದ ವಿದ್ಯಾರ್ಥಿನಿ.  ಇತ್ತೀಚೆಗೆ ಪ್ರಕಟಗೊಂಡಿದ್ದ ಎಸ್​​ಎಸ್‌ಎಲ್​​ಸಿ ಫಲಿತಾಂಶದಲ್ಲಿ ಈಕೆಗೆ 625ಕ್ಕೆ 620 ಅಂಕಗಳು ಬಂದಿದ್ದವು. ಇಷ್ಟು ಬಂದಿದ್ದರೂ ಕಾವ್ಯಗೆ ಸಮಾಧಾನ ಆಗಿರಲಿಲ್ಲ. ಇನ್ನೂ ಅಂಕಗಳು ಬರಬೇಕೆಂಬ ಲೆಕ್ಕಾಚಾರ ಹಾಕಿ ಕೊನೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು.

Latest Videos

undefined

SSLC: ಇನ್ನೂ ಮಾರ್ಕ್ಸ್ ಬರಲೇಬೇಕೆಂದು ಮರು ಮೌಲ್ಯಮಾಪನ ಹಾಕಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್ 

ಇದೀಗ ಮರು ಮೌಲ್ಯಮಾಪನದ ರಿಸ್ಟಲ್ಟ್ ಬಂದಿದ್ದು, ಇದರಲ್ಲಿ ಹೆಚ್ಚುವರಿಯಾಗಿ 4 ಅಂಕಗಳು ಬಂದಿವೆ. ಇದರೊಂದಿಗೆ ಕಾವ್ಯ ಒಟ್ಟು 625ಕ್ಕೆ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯಾ ಸ್ಥಾನ ಪಡೆದುಕೊಂಡಳು.

ಹಿಂದಿ ಮತ್ತು ವಿಜ್ಞಾನ ತಲಾ 98 ಅಂಕಗಳನ್ನ ಪಡೆದಿದ್ದ ಕಾವ್ಯ. ಇವೆರಡು ವಿಷಯಗಳನ್ನ ಮರು ಮೌಲ್ಯಮಾಪನಕ್ಕೆ ಮನವಿ ಮಾಡಿಕೊಂಡಿದ್ದರು.  ಇದೀಗ  ಎರಡು ವಿಷಯಗಳಲ್ಲಿ ಒಂದೊಂದಕ್ಕೆ 100ಕ್ಕೆ 100 ಅಂಕಗಳ ಬಂದಿವೆ.  ಈ ಮೂಲಕ ಕಾವ್ಯಾ ಅಂದುಕೊಂಡಂತೆ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. 

ಇನ್ನು ರಾಮನಗರದ ಪ್ರಜ್ಞಾ ಎನ್ನುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಇದೇ ಮರು ಮೌಲ್ಯದಲ್ಲಿ ಬಂದ ಅಂಕಗಳಿಂದ ಒಟ್ಟು  625ಕ್ಕೆ 625 ಮಾರ್ಕ್ಸ್‌ಗಳಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ.

ಒಟ್ಟಿನಲ್ಲಿ ಅಂಕಗಳು ಇನ್ನೂ ಬಂದೇ ಬರುತ್ತವೆ ಎನ್ನುವ ಭರವಸೆಯಿಂದ ಮರು ಮೌಲ್ಯಮಾಪನಕ್ಕೆ ಹಾಕಿ ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಬಂದಿರುವುದು ನಿಜಕ್ಕೂ ಇವರ ಕಾನ್ಫಿಡೆಂಟ್‌ ಮೆಚ್ಚಲೇಬೇಕು.

click me!