ನ.16ರ ಬಳಿಕ ಮೂರು ರಾಜ್ಯಗಳಲ್ಲಿ ಶಾಲೆ ಪುನರಾರಂಭ..!

Suvarna News   | Asianet News
Published : Nov 04, 2020, 10:37 AM ISTUpdated : Nov 04, 2020, 11:42 AM IST
ನ.16ರ ಬಳಿಕ ಮೂರು ರಾಜ್ಯಗಳಲ್ಲಿ ಶಾಲೆ ಪುನರಾರಂಭ..!

ಸಾರಾಂಶ

ಮೂರು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯುವುದಕ್ಕೆ ತೀರ್ಮಾನ | ನವೆಂಬರ್ 16ರ ನಂತರ ಶಾಲೆ ಆರಂಭ | ಹೇಗೆ ನಡೆಯಲಿದೆ ತರಗತಿಗಳು ? ಇಲ್ಲಿ ಓದಿ ಡೀಟೆಲ್ಸ್

ನವದೆಹಲಿ(ನ.04): ಅಸ್ಸಾಂ, ಆಂಧ್ರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು ಶಾಲಾ ಕಾಲೇಜುಗಳು ಪುನಾರಂಭಿಸದ ಬೆನ್ನಲ್ಲೇ, ಇದೀಗ ಮತ್ತೆ ಮೂರು ರಾಜ್ಯಗಳು ಶಾಲೆಗಳನ್ನು ತೆರೆಯುವುದಕ್ಕೆ ತೀರ್ಮಾನ ಮಾಡಿವೆ.

"

ಹರ್ಯಾಣ, ಒಡಿಶಾ ಹಾಗೂ ತಮಿಳುನಾಡು ರಾಜ್ಯಗಳು ನ.16ರ ಬಳಿಕ ಶಾಲಾ ಕಾಲೇಜುಗಳನ್ನು ಆರಂಭಿಸುವುದಾಗಿ ಹೇಳಿವೆ. ದೇಶದಲ್ಲಿ ದೈನಂದಿನ ಸೋಂಕಿನ ಪ್ರಮಾಣ ಭಾರೀ ಮಟ್ಟದಲ್ಲಿ ಇಳಿಕೆಯಾಗುತ್ತಿರುವುದರಿಂದ ರಾಜ್ಯಗಳು ಈ ನಿರ್ಧಾರ ಕೈಗೊಂಡಿವೆ.

ಮಕ್ಕಳೆ, ಪೋಷಕರೇ ಸಿದ್ಧರಾಗಿ : ಸಚಿವರ ಸಭೆಯಲ್ಲಿ ಶಾಲೆ ಆರಂಭಕ್ಕೆ ಮುಹೂರ್ತ ಫಿಕ್ಸ್

ಒಡಿಶಾದಲ್ಲಿ 9-12ನೇ ತರಗತಿಗಳು, ತಮಿಳುನಾಡಲ್ಲಿ 10-12ನೇ ತರಗತಿಗಳು ಆರಂಭಿಸುವುದಾಗಿ ಹೇಳಿವೆ. ಹರ್ಯಾಣದಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟತೆಗಳಿಲ್ಲ. ಮೂರೂ ರಾಜ್ಯಗಳಲ್ಲೂ ಬಿಗಿ ಕೋವಿಡ್‌ ನಿಯಮಾವಳಿಗಳು ಅನ್ವಯವಾಗಲಿದೆ.

ರಾಜ್ಯದಲ್ಲಿ ಶಾಲೆ ಯಾವಾಗ ಆರಂಭ?: ಸಚಿವ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಉನ್ನತ ಸಭೆ!

ತಮಿಳುನಾಡಿನಲ್ಲಿ ಪಿಯುಸಿ ತರಗತಿಗಳು ನವೆಂಬರ್ 16ಕ್ಕೆ ಆರಂಭವಾಗಲಿದೆ. ಈ ಮೊದಲು ತಮಿಳುನಾಡು ಸರ್ಕಾರ ಭಾಗಶಃ ಶಾಲೆಗಳನ್ನು ಅ.01ರಿಂದ ತೆರೆಯುವ ನಿರ್ಧಾರ ಮಾಡಿತ್ತು. ಆದರೆ ನಂತರದಲ್ಲಿ ನಿರ್ಧಾರ ಬದಲಾಯಿಸಿತ್ತು. ಈಗಾಗಲೇ ಉತ್ತರಾಖಂಡದಲ್ಲಿ ಶಾಲೆ ಆರಂಭವಾಗಿ ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಟಿಸಿವ್ ದೃಢಪಟ್ಟಿದೆ. 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ