ರಾಜ್ಯಾದ್ಯಾಂತ ಶಾಲೆಗಳಲ್ಲಿ ತರಗತಿಗಳು ಆರಂಭವಾಗಲಿದೆ. ಬೇಸಿಗೆ ರಜೆ ಮುಕ್ತಾಯವಾದ ಹಿನ್ನೆಲೆಯಲ್ಲಿ ನಾಳೆಯಿಂದ 1ನೇ ತರಗತಿಯಿಂದ 10ನೇ ತರಗತಿಯ ಆರಂಭವಾಗಲಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.15): ರಾಜ್ಯಾದ್ಯಾಂತ (Karnataka) ಶಾಲೆಗಳಲ್ಲಿ (Schools) ತರಗತಿಗಳು ಆರಂಭವಾಗಲಿದೆ. ಬೇಸಿಗೆ ರಜೆ (Summer Holiday) ಮುಕ್ತಾಯವಾದ ಹಿನ್ನೆಲೆಯಲ್ಲಿ ನಾಳೆಯಿಂದ 1ನೇ ತರಗತಿಯಿಂದ 10ನೇ ತರಗತಿಯ ಆರಂಭವಾಗಲಿದೆ. ಜಿಲ್ಲಾದ್ಯಂತ 1,47,081 ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲಿದ್ದು, ಶಾಲೆಗಳಲ್ಲಿ ಹಬ್ಬದ ವಾತವರಣ ನಿರ್ಮಾಣಗೊಳ್ಳುತ್ತಿದೆ. ರಜೆಯಿಂದ ಮಂಕು ಕವಿದಿದ್ದ ಶಾಲಾ ಆವರಣಗಳಲ್ಲಿ ಮಕ್ಕಳ ಕಲರವ ಶುರುವಾಗಲಿದೆ.
undefined
ಬಲೂನ್ ಕಟ್ಟಿ ಶಾಲೆಗಳಿಗೆ ಶೃಂಗಾರ: ಬೇಸಿಗೆ ರಜೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಆಗಿತ್ತು. ಇದೀಗ ನಾಳೆಯಿಂದ ಶಾಲೆಯ ತರಗತಿಗಳು ಆರಂಭವಾಗುತ್ತಿದ್ದು, ಅದಕ್ಕಾಗಿ ಶಾಲೆಗಳನ್ನು ಶೃಂಗಾರ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಯಲಗುಡಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗೆ ಬಲೂನ್ ಕಟ್ಟಿ ಶೃಂಗಾರ ಮಾಡಲಾಗಿದೆ. ರಜೆಯ ಖುಷಿಯಲ್ಲಿದ್ದ ವಿದ್ಯಾರ್ಥಿಗಳು ಸಮವಸ್ತ್ರ ತೊಟ್ಟು, ಬ್ಯಾಗ್‌ಗಳನ್ನು ಹೆಗಲಿಗೇರಿಸಿಕೊಂಡು ಶಾಲೆಗಳಿಗೆ ಆಗಮಿಸಲಿದ್ದಾರೆ. ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಕಾರಣದಿಂದ 2 ವರ್ಷಗಳಿಂದ ವಿದ್ಯಾರ್ಥಿಗಳು ಆಟ ಪಾಠದಿಂದ ವಂಚಿತರಾಗಿದ್ದರು.
ಖಾಕಿಯೊಳಗಿನ ಮಾನವೀಯತೆ, ಇದು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಸ್ಟೋರಿ
ಮೂರನೇ ಅಲೆ ಅಷ್ಟೇನು ಬಾಧಿಸದಿದ್ದರಿಂದ 2021ರಲ್ಲಿ ಮೊದಲು ಎಸ್ಸೆಸ್ಸೆಲ್ಸಿ ತರಗತಿಯನ್ನು ಆರಂಭಿಸಲಾಯಿತು. ನಂತರ ಹಂತ ಹಂತವಾಗಿ 1 ರಿಂದ 9ನೇ ತರಗತಿವರೆಗೂ ಆನ್‌ಲೈನ್ ಪಾಠಕ್ಕೆ ತಿಲಾಂಜಲಿ ಹಾಡಿ ಆಫ್‌ಲೈನ್ ತರಗತಿಗಳನ್ನು ಆರಂಭಿಸಲಾಗಿತ್ತು. 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಏ.14ರಿಂದ ರಜೆ ಘೋಷಣೆ ಮಾಡಲಾಗಿತ್ತು. ಮೇ. 16 ರಿಂದ 1ರಿಂದ 10ನೇ ತರಗತಿ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದ್ದು, ಅದರಂತೆ ಸೋಮವಾರದಿಂದ ವಿದ್ಯಾರ್ಥಿಗಳು ಶಾಲೆಯತ್ತಾ ಮುಖ ಮಾಡಲಿದ್ದಾರೆ. ಸುಮಾರು 45 ದಿನಗಳ ಬೇಸಿಗೆ ರಜೆ ಮುಗಿಸಿದ ವಿದ್ಯಾರ್ಥಿಗಳು ಪುಸ್ತಕ ಮತ್ತು ಬ್ಯಾಗಿನೊಂದಿಗೆ ಶಾಲೆಗಳಿಗೆ ಮುಖ ಮಾಡಲಿದ್ದಾರೆ. ಸಾಲಾಗಿ ನಿಂತು ಕೈ ಮುಗಿದು ಪ್ರಾರ್ಥನೆ ಸಲ್ಲಿಸಿ, ತರಗತಿಗಳಿಗೆ ತೆರಳಲಿದ್ದಾರೆ.
ಶೃಂಗಾರಗೊಳ್ಳುತ್ತಿರುವ ಶಾಲೆಗಳು: ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ತಳಿರು ತೋರಣಗಳಿಂದ ಶಾಲೆಯನ್ನು ಅಲಂಕರಿಸಿ, ಶಾಲೆಯ ಪ್ರಾರಂಭೋತ್ಸವ ಎಂಬ ಬ್ಯಾನರನ್ನು ಹಾಕಿ ಕೆಲವೆಡೆ ಶಿಕ್ಷಕರು ಸಿಹಿ ತಿನ್ನಿಸಿ, ಗುಲಾಬಿನೀಡಿ, ಮತ್ತೆ ಕೆಲವು ಶಾಲೆಗಳಲ್ಲಿ ಮಕ್ಕಳ ಮೇಲೆ ಪುಷ್ಪ ವೃಷ್ಟಿ ಹರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಶಾಲೆಗಳ ಆರಂಭದ ಹಿನ್ನಲೆಯಲ್ಲಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿದೆ. ಸಕಲ ಸಿದ್ಧತೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗಳು ತಯಾರಿ ನಡೆಸುತ್ತಿದ್ದು ಶಾಲೆಗಳಲ್ಲಿ ಹಬ್ಬದ ವಾತವರಣ ಸೃಷ್ಟಿಸಲಾಗುತ್ತಿದೆ.
ಚಿಕ್ಕಮಗಳೂರು: ಎರಡು ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಕುಂಕುಮ ಜಾತ್ರೆ !
ತುಮಕೂರಿನಲ್ಲಿ ‘ಶಾಲಾರಂಭ’ಕ್ಕೆ ಇಂದು ಬೊಮ್ಮಾಯಿ ಚಾಲನೆ: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ‘ಕಲಿಕಾ ಚೇತರಿಕೆ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೇ 16ರಂದು ಮಧ್ಯಾಹ್ನ 12.30ಕ್ಕೆ ತುಮಕೂರಿನ ಎಂಪ್ರೆಸ್ ಪಬ್ಲಿಕ್ ಶಾಲೆಯಲ್ಲಿ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಸಂಸದರಾದ ಜಿ.ಎಸ್.ಬಸವರಾಜು, ಡಿ.ಕೆ. ಸುರೇಶ್ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.