Koppalaದಲ್ಲಿ ಬಿಇಓ ವಿರುದ್ಧ ಶಿಕ್ಷಕನ ಮೌನ ಪ್ರತಿಭಟನೆ

By Suvarna News  |  First Published Jun 10, 2022, 5:40 PM IST

ಕೊಪ್ಪಳ ಜಿಲ್ಲೆ ಇದು ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆ.‌ ಈ‌ ಜಿಲ್ಲೆ ಶೈಕ್ಷಣಿಕವಾಗಿಯೂ ಸಹ ಹಿಂದುಳಿದ ಜಿಲ್ಲೆಯಾಗಿದೆ.‌ ಇಂತಹ ಹಿಂದುಳಿದ ಜಿಲ್ಲೆಯಾದ ಕೊಪ್ಪಳದ ಬಿಇಓ ಕಚೇರಿ ಎದುರು ಬಿಇಓ ವಿರುದ್ಧವೇ ಶಿಕ್ಷಕನೊರ್ವ ಪ್ರತಿಭಟನೆ ನಡೆಸುತ್ತಿದ್ದಾನೆ.


ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಜೂ.10): ಸಾಮಾನ್ಯವಾಗಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಊರಲ್ಲಿ ತಮ್ಮ ಇಲಾಖೆಯ ಮೇಲಾಧಿಕಾರಿ ಬಿಇಓ ವಿರುದ್ಧವೇ, ಶಿಕ್ಷಕನೊಬ್ಬ ಮೌನ ಪ್ರತಿಭಟನೆ ನಡೆಸುತ್ತಿದ್ದಾನೆ.‌ ಕೊಪ್ಪಳ ಜಿಲ್ಲೆ ಇದು ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆ.‌ ಈ‌ ಜಿಲ್ಲೆ ಶೈಕ್ಷಣಕವಾಗಿಯೂ ಸಹ ಹಿಂದುಳಿದ ಜಿಲ್ಲೆಯಾಗಿದೆ.‌ಇಂತಹ ಹಿಂದುಳಿದ ಜಿಲ್ಲೆಯಾದ ಕೊಪ್ಪಳದ ಬಿಇಓ ಕಚೇರಿ ಎದುರು ಬಿಇಓ ವಿರುದ್ಧವೇ ಶಿಕ್ಷಕನೊರ್ವ ಪ್ರತಿಭಟನೆ ನಡೆಸುತ್ತಿದ್ದಾನೆ.

Tap to resize

Latest Videos

ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕ ಯಾರು?
ಬೀರಪ್ಪ ಅಂಡಗಿ ಅಂದರೆ ಸಾಕು ಇಡೀ ರಾಜ್ಯದಲ್ಲಿ ಶಿಕ್ಷಕರ ಹಾಗೂ ನೌಕರರ ವಲಯದಲ್ಲಿ ಚಿರಪರಿಚಿತ ಹೆಸರು. ಸದ್ಯ ವೀಕಲಚೇತನರ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಬೀರಪ್ಪ ಅಂಡಗಿ, ಈ ಮುಂಚೆ ಎನ್ ಪಿ ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕೊಪ್ಪಳ‌ ನಗರದ ಎಂ ಎಚ್ ಪಿ ಎಸ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬೀರಪ್ಪ ಅಂಡಗಿ, ಇದೀಗ ತಮ್ಮದೇ ಇಲಾಖೆಯ ಬಿಇಓ ಉಮೇಶ್ ಪೂಜಾರ್ ವಿರುದ್ಧ ಬಿಇಓ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಿಂದ ಕಣಕ್ಕೆ; BT LALITHA NAIK

ಯಾವ ಕಾರಣಕ್ಕೆ ಪ್ರತಿಭಟನೆ: ಇನ್ನು ಶಿಕ್ಷಕ ಬೀರಪ್ಪ ಅಂಡಗಿ ನಗರದ ಸಿಪಿಎಸ್ ಶಾಲೆಯಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಬಿಸಿಯೂಟ ಯೋಜನೆಯಲ್ಲಿ ಬೀರಪ್ಪ ಅಂಡಗಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ ಹೋರಾಟಗಾರ ಬಸವರಾಜ ಶೀಲವಂತರ ದೂರು‌ ನೀಡಿದ್ದರು. ಈ ದೂರು ಆಧರಿಸಿ ಬಿಇಓ ಉಮೇಶ್ ಪೂಜಾರಿ ಬೀರಪ್ಪ ಅಂಡಗಿ ವಿರುದ್ಧ ತನಿಖಾಧಿಕಾರಿಗಳನ್ನು ನೇಮಿಸಿ, ತನಿಖೆಗೆ ಆದೇಶಿಸಿದ್ದರು.

ಈ ತನಿಖಾ ತಂಡ ಈಗಾಗಲೇ ಬೀರಪ್ಪ ಅಂಡಗಿ ಆರೋಪದ ಪ್ರಕರಣದ ಕುರಿತು ತನಿಖೆ ನಡೆಸಿ 4 ತಿಂಗಳ ಹಿಂದೆಯೇವರದಿ ನೀಡಿದೆ. ತನ್ನ ಮೇಲಿನ ಆರೋಪದ ಕುರಿತಾದ ತನಿಖೆಯ ವರದಿಯನ್ನು ನೀಡುವಂತೆ ಬೀರಪ್ಪ ಅಂಡಗಿ ನಾಲ್ಕು ತಿಂಗಳ ಹಿಂದೆಯೇ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದಾರೆ. ಆದರೆ ಮಾಹಿತಿ ಕೇಳಿ ನಾಲ್ಕು ತಿಂಗಳಾದರೂ ಸಹ ಬಿಇಓ ಉಮೇಶ್ ಪೂಜಾರ್, ಇಲ್ಲಿಯವರೆಗೂ ಮಾಹಿತಿ ನೀಡಿಯೇ ಇಲ್ಲವಂತೆ. ಇದರಿಂದಾಗಿ  ಮಾಹಿತಿ‌ ಬಿಇಓ ಉಮೇಶ್ ಪೂಜಾರ್ ವಿರುದ್ಧ ಬೀರಪ್ಪ ಅಂಡಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳೂರಿನ ಮಳಲಿ ಮಸೀದಿ ವಿವಾದ, ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್

ನಾನು ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ: ಇನ್ನು ನಾನೊಬ್ಬ ಸಾಮಾನ್ಯ ಶಿಕ್ಷಕನಾಗಿದ್ದರೆ ನನ್ನ ಮೇಲಿ‌ನ ಆರೋಪಗಳ ನಗ್ಗೆ ನಾನು ತೆಲೆಕೆಡಸಿಕೊಳ್ಳುತ್ತಿದ್ದಿಲ್ಲ.‌ಆದರೆ ನಾನೊಬ್ಬ ಜವಾಬ್ದಾರಿಯುತ ಸ್ಥಾಪನದಲ್ಲಿದ್ದು, ಪ್ರತಿನಿತ್ಯ ನನಗೆ ನೂರಾರು ಜನ ಶಿಕ್ಷಕರು,ನೌಕರರು ನನ್ನ ಮೇಲಿನ ಆರೋಪದ ಕುರಿತಾದ  ತನಿಖೆಯ ಬಗ್ಗೆ ಕೇಳುತ್ತಾರೆ. ಇದರಿಂದಾಗಿ ಸಹಜವಾಗಿಯೇ ನನಗೆ ಮಾನಸಿಕ‌ವಾಗಿ ಹಿಂಸೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ನನ್ನ ಮೇಲಿನ ಆರೋಪದ ಕುರಿತು ಸ್ಪಷ್ಟವಾಗಿ ತಿಳಿಯಬೇಕೆಂದರೆ ತನಿಖಾ ವರದಿ ಬಹಿರಂಗಗೊಳ್ಳಬೇಕು ಹೀಗಾಗಿ ನನಗೆ ತನಿಖಾ ವರದಿಯ ಮಾಹಿತಿ ನೀಡಬೇಕು ಜೊತೆಗೆ ನಾನು ತಪ್ಪು ಮಾಡಿದ್ದರೆ ನನ್ನ ಮೇಲೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಲಿ ಅಂತಾರೆ ಬೀರಪ್ಪ ಅಂಡಗಿ.

ಇನ್ನು ಬೀರಪ್ಪ ಅಂಡಗಿ ಪ್ರತಿಭಟನೆಗೆ ಕುಳಿತಿರುವ ಸುದ್ದಿ ತಿಳಿದು ಬಿಇಓ ಉಮೇಶ್ ಪೂಜಾರ್ ತಮ್ಮ ಕಚೇರಿಯತ್ತ ಸುಳಿಯಲೇ ಇಲ್ಲ.‌ ಶಿಕ್ಷಕ‌ ಬೀರಪ್ಪ ಅಂಡಗಿ  ಮೇಲಿನ ಆರೋಪದ ಕುರಿತು ಬಿಇಓ ಉಮೇಶ್ ಪೂಜಾರ್ ತನಿಖಾ ವರದಿ ನೀಡದಿರವುದು ಯಾತಕ್ಕೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

click me!