ಜಂಕ್ ಫುಡ್ ತಿನ್ನಬೇಡಿ ಅಂತ ಪಾಠ ಮಾಡಲು ಹೋಗಿ ಟೀಚರ್ಸ್ ಎಡವಟ್ಟು! ಮಕ್ಕಳನ್ನು ಹೆದರಿಸಿದ ಶಿಕ್ಷಕರಿಗೆ ನೆಟಿಜನ್ ಕ್ಲಾಸ್ | ವಿಡಿಯೋ

Published : Aug 21, 2026, 01:39 PM IST
School Junk Food Prank Backfires Leaving Kids Traumatized Netizens Furious

ಸಾರಾಂಶ

ಶಾಲೆಯೊಂದರಲ್ಲಿ ಶಿಕ್ಷಕರು ಮಕ್ಕಳಿಗೆ ಜಂಕ್ ಫುಡ್‌ನ ಕೆಟ್ಟ ಪರಿಣಾಮಗಳ ಬಗ್ಗೆ ಪಾಠ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಚಿಪ್ಸ್, ಲಾಲಿಪಾಪ್ ತಿನ್ನಿಸಿ, ನಂತರ ಹೊಟ್ಟೆಯಲ್ಲಿ ಹುಳ ಇದೆ ಎಂದು ನಕಲಿ ಸ್ಕ್ಯಾನ್ ತೋರಿಸಿದ್ದಾರೆ. ಶುರುಮಾಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

ಮಕ್ಕಳಿಗೆ ಪಾಠ ಮಾಡೋಕೆ ಟೀಚರ್‌ಗಳು ಏನೆಲ್ಲಾ ಕಸರತ್ತು ಮಾಡ್ತಾರೆ. ಚಿತ್ರ ಬಿಡಿಸೋದು, ಕಥೆ ಹೇಳೋದು... ಹೀಗೆ ನಾನಾ ತಂತ್ರಗಳನ್ನು ಬಳಸ್ತಾರೆ. ಆದ್ರೆ ದೇಶದ ಈ ಶಾಲೆಯೊಂದು ಇದೇ ರೀತಿ ಕ್ರಿಯೇಟಿವ್ ಆಗಿ ಯೋಚನೆ ಮಾಡೋಕೆ ಹೋಗಿ ಎಡವಟ್ಟು ಮಾಡಿಕೊಂಡಿದೆ. ಮಕ್ಕಳಿಗೆ ಪಾಠ ಕಲಿಸೋ ಬದ್ಲು ಹೆದರುವಂತೆ ಮಾಡಿದೆ. ಹೌದು, ನೀವು ಓದಿದ್ದು ನಿಜ.

ಟೀಚರ್‌ಗಳ ತಮಾಷೆಯ ಪ್ರಾಂಕ್ ಉಲ್ಟಾ!

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಮೊದಲು ಲಾಲಿಪಾಪ್, ಚಿಪ್ಸ್‌ನಂತಹ ಜಂಕ್ ಫುಡ್‌ಗಳನ್ನು ಕೊಡ್ತಾರೆ. ಅದಾದ್ಮೇಲೆ ಮಕ್ಕಳನ್ನು ಒಂದೊಂದಾಗಿ ಕರೆದು ಹೊಟ್ಟೆಯ ಸ್ಕ್ಯಾನ್ ಮಾಡ್ತಾರೆ. ಆ ಸ್ಕ್ಯಾನ್‌ನಲ್ಲಿ ಹೊಟ್ಟೆಯೊಳಗೆ ಒಂದು ದೊಡ್ಡ ಹುಳ ಕುಳಿತಿರೋದು ಕಾಣುತ್ತೆ. ಈ ತಿಂಡಿಗಳನ್ನೆಲ್ಲಾ ತಿನ್ನುತ್ತಿರುವ ಹಾಗೆ ಒಂದು ಚಿತ್ರ ಕಾಣಿಸುತ್ತೆ. ಜಂಕ್ ಫುಡ್ ತಿಂದರೆ ಹೊಟ್ಟೆಯಲ್ಲಿ ಹುಳ, ಬ್ಯಾಕ್ಟೀರಿಯಾ ಬರುತ್ತೆ ಅಂತ ಮಕ್ಕಳಿಗೆ ತೋರಿಸೋದೇ ಇದರ ಉದ್ದೇಶವಾಗಿತ್ತು. ಆದ್ರೆ ತಮಾಷೆಗೆ ಮಾಡಿದ ಈ ಪ್ರಯೋಗ ಉಲ್ಟಾ ಹೊಡೆದಿದೆ. ತಮ್ಮ ಹೊಟ್ಟೆಯಲ್ಲಿ 'ನಕಲಿ ಹುಳ' ಇರೋದನ್ನು ನೋಡಿ ಮಕ್ಕಳು ಕಿರುಚಿಕೊಂಡು ಗೋಳಾಡಲು ಶುರುಮಾಡಿದ್ದಾರೆ.

ಈ ವಿಡಿಯೋವನ್ನು ಶೇರ್ ಮಾಡಿದ 'VIRAL CHASKA' ಅನ್ನೋ ಪೇಜ್ ಕ್ಯಾಪ್ಶನ್‌ನಲ್ಲಿ ಹೀಗೆ ಬರೆದುಕೊಂಡಿದೆ: 'ನಕಲಿ ಹೊಟ್ಟೆ ಸ್ಕ್ಯಾನ್: ಜಂಕ್ ಫುಡ್‌ನ ಅಪಾಯಗಳ ಬಗ್ಗೆ ಮಕ್ಕಳಿಗೆ ಕಲಿಸಲು ಟೀಚರ್‌ಗಳ ತಮಾಷೆಯ ಪ್ರಾಂಕ್! ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ರೂಢಿಸಲು ಶಿಕ್ಷಕರು ಮಾಡಿದ ಈ ಕ್ರಿಯೇಟಿವ್ ಐಡಿಯಾದ ವಿಡಿಯೋ ವೈರಲ್ ಆಗಿದೆ. ಮಕ್ಕಳಿಗೆ ಚಿಪ್ಸ್, ವೇಫರ್ಸ್, ಲಾಲಿಪಾಪ್ ತಿನ್ನಿಸಿದ ನಂತರ ಲ್ಯಾಪ್‌ಟಾಪ್ ಸ್ಕ್ರೀನ್ ಬಳಸಿ ನಕಲಿ ಹೊಟ್ಟೆ ಸ್ಕ್ಯಾನ್ ಮಾಡಿದ್ದಾರೆ. ಇದರಲ್ಲಿ ಜಂಕ್ ಫುಡ್‌ನಿಂದ ಹುಳ ಬಂದಿದೆ ಎಂದು ಅನಿಮೇಟೆಡ್ 'ಹುಳ'ವನ್ನು ತೋರಿಸಿದ್ದಾರೆ. ಮಕ್ಕಳ ಅಚ್ಚರಿಯ ಪ್ರತಿಕ್ರಿಯೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಹೊಸ ಬೋಧನಾ ವಿಧಾನಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ

ವಿಡಿಯೋ ಇಲ್ಲಿದೆ ನೋಡಿ!

ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ?

ಒಬ್ಬ ಬಳಕೆದಾರರು, 'ಮೊದ್ಲು ನೀವ್ಯಾಕೆ ಸ್ಕೂಲ್‌ನಲ್ಲಿ ಜಂಕ್ ಫುಡ್ ಕೊಡ್ತೀರಿ?' ಅಂತ ಪ್ರಶ್ನಿಸಿದ್ದಾರೆ. ಇನ್ನೊಬ್ಬರು, 'ಉದ್ದೇಶ ಒಳ್ಳೆಯದೇ ಇರಬಹುದು, ಆದರೆ ಮಕ್ಕಳನ್ನು ಈ ರೀತಿ ಹಿಂಸಿಸುವುದು ಸರಿ ಅಲ್ಲ' ಎಂದು ಬರೆದಿದ್ದಾರೆ. ಮತ್ತೊಂದು ಕಾಮೆಂಟ್ ಹೀಗಿದೆ ' ಸೋಮಾರಿಗಳಾದಾಗ ನೀವು ಮಕ್ಕಳನ್ನು ಶಿಸ್ತುಬದ್ಧವಾಗಿಡಲು ಭಯವನ್ನು ಬಳಸುತ್ತೀರಿ. ನಿಮ್ಮಲ್ಲಿ ಎಷ್ಟು ಜನ ಟೀಚರ್‌ಗಳು ಆರೋಗ್ಯಕರ ಆಹಾರವನ್ನೇ ತಿನ್ನುತ್ತೀರಿ? ಮಕ್ಕಳಿಗೆ ಮೊದಲು ಜಂಕ್ ಫುಡ್ ಪರಿಚಯಿಸುವುದೇ ನೀವು. ಬಾಲ್ಯದಲ್ಲೇ ಮಕ್ಕಳಿಗೆ ಮಾನಸಿಕ ಆಘಾತ (trauma) ನೀಡುವ ಕೆಟ್ಟ ದಾರಿ ಇದು. ಹೋದ ತಲೆಮಾರಿನ ಟೀಚರ್‌ಗಳು ಹೊಡೆಯುತ್ತಿದ್ದ ಶಿಕ್ಷೆಗಿಂತ ಇದು ಕೆಟ್ಟದಾಗಿದೆ. ಉದಾಹರಣೆಯಾಗಿ ಬದುಕಿ ತೋರಿಸಿ'

ಇನ್ನೊಬ್ಬರು, 'ಈ ರೀತಿ ಹೆದರಿಸುವುದು ಮಕ್ಕಳಿಗೆ ಕಲಿಸಲು ಉತ್ತಮ ಮಾರ್ಗವಲ್ಲ. ನೀವು ಅವರಿಗೆ ಮಾನಸಿಕ ಆಘಾತ ನೀಡುತ್ತಿದ್ದೀರಿ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು' ಎಂದು ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

₹1 ಕೋಟಿ ಪ್ರಶ್ನೆಗೆ ಸರಿಯಾದ ಉತ್ತರ ಕಣ್ಣ ಮುಂದೆಯೇ ಇತ್ತು, ಆದರೂ KBCಯಿಂದ ಹೊರನಡೆದ IIT ಟಾಪರ್
ಮಕ್ಕಳಿಗೆ ನೇರವಾಗಿ ಅಆಇಈ, ABCD ಕಲಿಸಬೇಡಿ.. ಬದಲಿಗೆ ಈ ರೀತಿ ಪ್ರಾರಂಭಿಸಿದ್ರೆ ಬೇಗ ಕಲಿಯುತ್ತಾರೆ ಎಂದ ಮಕ್ಕಳ ತಜ್ಞರು