ಶಾಲೆ-ಕಾಲೇಜು ರೀ ಓಪನ್ ಡೇಟ್ ಫಿಕ್ಸ್ - ಗೈಡ್ ಲೈನ್ಸ್ ಇಲ್ಲಿದೆ

By Suvarna NewsFirst Published Sep 18, 2020, 2:47 PM IST
Highlights

ಕೊರೋನಾ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದ್ದು ಇದೀಗ ಕೊಂಚವೇ ಚೇತರಿಕೆ ಹಾದಿಯಲ್ಲಿದೆ. ಇದೀಗ ಶಾಲಾ ಕಾಲೇಜು ಮತ್ತೆ ತೆರೆಯಲು ಗೈಡ್‌ಲೈನ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು (ಸೆ.18): ಶಾಲೆ - ಕಾಲೇಜು ಆರಂಭಕ್ಕೆ ಇದೀಗ ಗ್ರೀನ್ ಸಿಗ್ನಲ್ ನೀಡಲಾಗಿದೆ.

9ನೇ ತರಗತಿಯಿಂದ 12ನೇ ತರಗತಿವರೆಗೆ ಸೆಪ್ಟೆಂಬರ್ 21 ರಿಂದ ಶಾಲಾ - ಕಾಲೇಜು ಆರಂಭಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಗೈಡ್ ಲೈನ್ ನೀಡಿದೆ. 

ಶಾಲೆಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿರಬೇಕು. ಥರ್ಮಲ್ ಸ್ಕ್ಯಾನರ್ ಹಾಗೂ ಶೌಚಾಲಯದ ಶುಚಿತ್ವ ಕಾಪಾಡಬೇಕು ಎಂದು ಸೂಚನೆ ನೀಡಲಾಗಿದೆ. 

ಶೀಘ್ರದಲ್ಲೇ ನಡೆಯಲಿದೆ ಉಪ​ನ್ಯಾ​ಸ​ಕರ ನೇಮಕ ..

ಪ್ರತೀ ಎರಡು ದಿನಕ್ಕೆ ಒಮ್ಮೆ ತರಗತಿ ಕೊಠಡಿಯಲ್ಲಿ ಸ್ಯಾನಿಟೈಸ್ ಮಾಡಬೇಕು. ಶಾಲಾ - ಕಾಲೇಜು ಸಿಬ್ಬಂದು ಮಾಸ್ಕ್ ಹಾಗೂ ಗ್ಲೌಸ್ ಧರಿಸಬೇಕು ಎಂದು ಸೂಚನೆ ನೀಡಿದ್ದಾರೆ. 

ಕೊಠಡಿಯಲ್ಲಿ  ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರದಲ್ಲೇ ಕೂರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆರೋಗ್ಯದ ಮೇಲೂ ನಿಗಾ ಇಡಬೇಕು ಹೀಗೆಂದು ಸೂಚನೆ ನೀಡಲಾಗಿದೆ. 

ಮಕ್ಕಳು ಶಾಲೆಗೆ ಬರಲು ಪೋಷಕರ ಒಪ್ಪಿಗೆ ಪತ್ರ ಇರಲೇಬೇಕು ಎಂದು ಸೂಚನೆ ನೀಡಿದೆ. ಈ ಬಗ್ಗೆ ಸದ್ಯದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ಕೊರೋನಾ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯೇ ಬುಡಮೇಲಾಗಿದ್ದು, ಶಾಲೆ-ಕಾಲೇಜುಗಳು ಮುಚ್ಚಿ 6 ತಿಂಗಳುಗಳೇ ಕಳೆದಿವೆ. ಇದೀಗ ಮತ್ತೆ ಓಪನ್ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

"

click me!