ಸೆ. 21ರಿಂದ ಶಾಲೆ ಆರಂಭವಾಗ್ತಾವಾ..? ಎಲ್ಲಾ ಗೊಂದಲಗಳಿಗೆ ತೆರೆ

By Suvarna NewsFirst Published Sep 18, 2020, 2:34 PM IST
Highlights

ಕೊರೋನಾ ಭೀತಿ ಹಿನ್ನಲೆಯಲ್ಲಿ ಬಾಗಿಲಾಕಿರುವ ಶಾಲಾ ಪುನರಾರಂಭಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರು, (ಸೆ.18):  ಇದೇ. ಸೆಪ್ಟೆಂಬರ್ 21ರಿಂದ ಶಾಲಾ-ಕಾಲೇಜು ಆರಂಭವಾಗುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್,  ಸೆ. 21 ರಂದು ಶಾಲೆ ಆರಂಭವಾಗಿವೆ. ಆದ್ರೆ, ತರಗತಿ ಪ್ರಾರಂಭ ಇಲ್ಲ ಎಂದು ಹೇಳಿದರು. 

ಹಂತ ಹಂತವಾಗಿ ಶಾಲೆ, ಕಾಲೇಜು ಓಪನ್

ಸೆ. 21 ರಿಂದ ಶಾಲೆ ಆರಂಭವಾಗಲಿದ್ದು, ತರಗತಿ ಆರಂಭ ಆಗಲ್ಲ. ಬದಲಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದ್ದು, ಸೆ. 30 ರೊಳಗೆ  1-10 ನೇತರಗತಿ ವಿದ್ಯಾರ್ಥಿಗಳ ದಾಖಲಾತಿ ಮುಗಿಯಬೇಕು. ಕೇಂದ್ರದ ಸರ್ಕಾರ ಅನುಮತಿ ನೀಡುವವರಿಗೂ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಶುಲ್ಕದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಕೇವಲ ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆಗಳು ಪಡೆಯಬೇಕು. ಆಗೊಮ್ಮೆ ಸಮಸ್ಯೆ ಆದರೆ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ. ಪೋಷಕರು ಈ ಬಗ್ಗೆ ಅವರಿಗೆ ದೂರು ನೀಡಬಹುದು ಎಂದರು.

click me!