ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸಿಲಬಸ್ , ಶುಲ್ಕ ಬಗ್ಗೆ ಸುರೇಶ್ ಕುಮಾರ್ ಮಹತ್ವದ ಹೇಳಿಕೆ

By Suvarna News  |  First Published Jan 12, 2021, 3:46 PM IST

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ-ಕಲೇಜುಗಳ ಸಿಲಬಸ್ ಸೇರಿದಂತೆ ಶುಲ್ಕು ಬಗ್ಗೆ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.


ಚಾಮರಾಜನಗರ, (ಜ.12): ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಶೇಕಡ 30ರಷ್ಟು ಕಡಿತ ಮಾಡಲಾಗುವುದು. ಈ ಬಗ್ಗೆ ಇಂದು (ಮಂಗಳವಾರ) ಸಂಜೆ ಶಿಕ್ಷಣ ಆಯುಕ್ತರಿಂದ ಬಗ್ಗೆ ಮಾಹಿತಿ ಬಿಡುಗಡೆ‌ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಬಳಿಕ ಚಾಮರಾಜನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಜನವರಿ 15 ರ ನಂತರ ತಜ್ಞರ ಅಭಿಪ್ರಾಯ ಪಡೆಯಲಾಗುವುದು. ತಜ್ಞರ ಮಾಹಿತಿ ಆಧರಿಸಿ ಶಾಲಾ ಕಾಲೇಜುಗಳ ಶುಲ್ಕ ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Tap to resize

Latest Videos

undefined

SSLC, PUC ಪರೀಕ್ಷೆಗೆ ಮುಹೂರ್ತ ಫಿಕ್ಸ್..!

ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳು ಶೇಕಡ 30ರಷ್ಟು ಶುಲ್ಕ ಖಡಿತಗೊಳಿಸಲು ಮುಂದೆ ಬಂದಿವೆ. ಶುಲ್ಕ ಹೆಚ್ಚು ಕಡಿತಗೊಳಿಸಿದರೆ ಶಿಕ್ಷಕರು, ಉಪನ್ಯಾಸಕರ ವೇತನಕ್ಕೂ ತೊಂದರೆ ಆಗಲಿದೆ. ಇತ್ತ ಪೂರ್ತಿ ಶುಲ್ಕ ತುಂಬಲು ಪೋಷಕರಿಗೆ ಹೊರೆ ಆಗಲಿದೆ. ಶಿಕ್ಷಣ ಸಂಸ್ಥೆ ಮತ್ತು ಪೋಷಕರನ್ನು ಗಮನದಲ್ಲಿ ಇಟ್ಟು ಕೊಂಡು ಶುಲ್ಕ ನಿಗದಿ ಮಾಡಲಾಗುವುದು ಎಂದು ಹೇಳಿದರು.

1ನೇ ತರಗತಿಯಿಂದ ಮಾಮೂಲಿ ತರಗತಿ ಆರಂಭಿಸುವ ಕುರಿತು ಜ. 15ರ ನಂತರ ತಜ್ಞರು ನೀಡುವ ವರದಿ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

click me!