2026-27ರ ಆರ್‌ಟಿಇ ಪ್ರವೇಶಕ್ಕೆ ವೇಳಾಪಟ್ಟಿ ಪ್ರಕಟ: ಪೋಷಕರೇ, ಹೊಸ ದಿನಾಂಕ ಗಮನಿಸಿ!

Kannadaprabha News   | Kannada Prabha
Published : Mar 14, 2026, 06:42 AM IST
RTE Admissions 2026

ಸಾರಾಂಶ

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2026-27ನೇ ಸಾಲಿನ ಉಚಿತ ಸೀಟುಗಳ ಹಂಚಿಕೆಗೆ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 9 ರಿಂದ ಮೇ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮೇ 16 ರಂದು ಆನ್‌ಲೈನ್ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.

- ಏ.9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು (ಮಾ.14): ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2026-27ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ ಸೀಟುಗಳ ಹಂಚಿಕೆಗೆ ನಿಗದಿಪಡಿಸಿದ್ದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಷ್ಕರಿಸಿ ಏ.9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.

ಆರ್‌ಟಿಸಿ ಸೀಟು ಪ್ರಕಟಣೆ ಯಾವಾಗ?

ಅರ್ಹ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಒಂದನೇ ತರಗತಿಯಲ್ಲಿ ಲಭ್ಯವಿರುವ ಶೇ.25ರಷ್ಟು ಆರ್‌ಟಿಸಿ ಸೀಟುಗಳನ್ನು ಏ.6ರಂದು ಪ್ರಕಟಿಸಲಾಗುವುದು. ಏ.7 ಹಾಗೂ 8ರಂದು ಆನ್‌ಲೈನ್‌ನಲ್ಲಿ ಪ್ರಯೋಗಾರ್ಥ ಅರ್ಜಿ ಸಲ್ಲಿಕೆ, ಏ.9ರಿಂದ ಮೇ 7ರವರೆಗೆ ನೈಜ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇರಲಿದೆ ಎಂದು ತಿಳಿಸಲಾಗಿದೆ.

ಮೇ 16ರಂದು ಆನ್‌ಲೈನ್ ಲಾಟರಿ ಮೂಲಕ ಹಂಚಿಕೆ

ಮೇ 12ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಿದೆ. ಮೇ 16ರಂದು ಆನ್‌ಲೈನ್ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯಾಗಲಿದೆ. ಸೀಟು ಪಡೆದವರು ಜೂ.1ರೊಳಗಾಗಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಬೇಕು. ಜೂ.5ರಂದು ಎರಡನೇ ಸುತ್ತಿನ ಸೀಟು ಹಂಚಿಕೆಯಾಗಲಿದ್ದು, ಇವರಿಗೆ ಜೂ.15ರವರೆಗೆ ಆಯಾ ಶಾಲೆಗಳಿಗೆ ದಾಖಲಾಗುವಂತೆ ತಿಳಿಸಲಾಗಿದೆ.

PREV
Read more Articles on
click me!

Recommended Stories

Priyanka ಹೆಸರು ತಂದ ಫಜೀತಿ! ಊರೆಲ್ಲಾ ಸಿಹಿ ಹಂಚಿದ ಮೇಲೆ ಗೊತ್ತಾಯ್ತು, UPSCನಲ್ಲಿ ಪಾಸಾಗಿದ್ದು ಡ್ರೈವರ್ ಮಗಳಲ್ಲ
ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಸಚಿವ ಮಧು ಬಂಗಾರಪ್ಪ