ದೇಶದ ಟಾಪ್‌ 10 ಖಾಸಗಿ ವಿವಿಗಳಲ್ಲಿ ರೇವಾಗೆ ಸ್ಥಾನ

Kannadaprabha News   | Asianet News
Published : Mar 20, 2021, 09:07 AM IST
ದೇಶದ ಟಾಪ್‌ 10 ಖಾಸಗಿ ವಿವಿಗಳಲ್ಲಿ ರೇವಾಗೆ ಸ್ಥಾನ

ಸಾರಾಂಶ

ಕುಲಾಧಿಕಪತಿ ಶ್ಯಾಮರಾಜು ಸಂತಸ| ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ| ಸಮಗ್ರ ಶಿಕ್ಷಣ ವಿಧಾನ, ಉದ್ಯಮ ಸಂಬಂಧಿತ ಪಠ್ಯಕ್ರಮ, ಡಿಜಿಟಲ್‌ ತರಗತಿ ಕೊಠಡಿಗಳು, ವ್ಯಾಪಾರ ಪ್ರಯೋಗಾಲಯ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಆಧುನಿಕ ತಂತ್ರಜ್ಞಾನ ಬೋಧನೆ ಅಳವಡಿಸಿಕೊಂಡಿರುವುದು ವಿದ್ಯಾರ್ಥಿಗಳ ಸಾಧನೆಗೆ ದಾರಿಮಾಡಿಕೊಟ್ಟಿದೆ| 

ಬೆಂಗಳೂರು(ಮಾ.20):  ಗುಣಮಟ್ಟದ ಶಿಕ್ಷಣದಿಂದ ರೇವಾ ವಿಶ್ವವಿದ್ಯಾಲಯವು ದೇಶದ ಟಾಪ್‌ 10 ಖಾಸಗಿ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದಕ್ಕಾಗಿ ವಿವಿಗೆ ಶ್ರೇಯಾಂಕಗಳು, ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ ಎಂದು ವಿವಿ ಕುಲಾಧಿಪತಿ ಡಾ. ಪಿ.ಶ್ಯಾಮರಾಜು ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ರೇವಾ ಸ್ಕೂಲ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಅಧ್ಯಯನ’ ವಿಭಾಗದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳ ಮೇಲೆ ಪರಮಾಧಿಕಾರಾಸ್ತ್ರ ಎಚ್ಚರಿಕೆ!

ಶೈಕ್ಷಣಿಕ ರಂಗದಲ್ಲಿ ವಿವಿಯು ಅಳವಡಿಸಿಕೊಂಡಿರುವ ಇಚ್ಛಾಶಕ್ತಿ, ಧೈರ್ಯ, ಬದ್ಧತೆ, ಉತ್ಸಾಹ, ಸಮಯೋಚಿತ ತೀರ್ಪುಗಳು ವಿವಿಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಮಗ್ರ ಶಿಕ್ಷಣ ವಿಧಾನ, ಉದ್ಯಮ ಸಂಬಂಧಿತ ಪಠ್ಯಕ್ರಮ, ಡಿಜಿಟಲ್‌ ತರಗತಿ ಕೊಠಡಿಗಳು, ವ್ಯಾಪಾರ ಪ್ರಯೋಗಾಲಯ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಆಧುನಿಕ ತಂತ್ರಜ್ಞಾನ ಬೋಧನೆಯನ್ನು ಅಳವಡಿಸಿಕೊಂಡಿರುವುದು ವಿದ್ಯಾರ್ಥಿಗಳ ಸಾಧನೆಗೆ ದಾರಿಮಾಡಿಕೊಟ್ಟಿದೆ ಎಂದರು.

ಇದೇ ವೇಳೆ 2004ರಿಂದ ಈ ವರೆಗೆ ಸಂಜಯನಗರ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡಿರುವ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಅಧ್ಯಯನ ವಿಭಾಗದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ, ನವೋದ್ಯಮ, ಮಾರುಕಟ್ಟೆ, ಹಣಕಾಸು, ಸಂಶೋಧನೆ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಲಪತಿ ಡಾ. ಎನ್‌.ಧನಂಜಯ, ಕುಲಸಚಿವ ಡಾ. ರಮೇಶ್‌, ವಿಭಾಗದ ಮುಖ್ಯಸ್ಥರಾದ ಡಾ. ಶುಭಾ ಸೇರಿದಂತೆ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.
 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ