ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದ 4 ತಿಂಗಳಿನಿಂದ ಬಂದ್ ಆಗಿದ್ದ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಆದ್ರೆ, ತೀರ್ಮಾನವನ್ನು ವಿದ್ಯಾರ್ಥಿಗಳಿಗೆ ಬಿಟ್ಟಿದೆ.
ಹೈದರಾಬಾದ್, (ಸೆ.20): ರಾಜ್ಯದಲ್ಲಿ ನಾಳೆಯಿಂದ ಅಂದ್ರೆ ಸೆ.21ರಿಂದ ಭಾಗಶಃ ಶಾಲೆಗಳನ್ನು ತೆರೆಯಲು ಆಂಧ್ರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.
ಆದ್ರೆ.. ವಿದ್ಯಾರ್ಥಿಗಳು ದೈಹಿಕ ಅಂತರ ಕಾಪಾಡಿಕೊಂಡು ತರಗತಿಗೆ ಹಾಜರಾಗಬಹುದು. ಇಲ್ಲವೇ ಆನ್ ಲೈನ್ ತರಗತಿಗೂ ಹಾಜರಾಗಬಹುದಾದಂತ ಅವಕಾಶವನ್ನು ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದೆ.
ಶಾಲಾ-ಕಾಲೇಜು ಆರಂಭದ ಬಗ್ಗೆ ಮಹತ್ವದ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ
ಹಂತ ಹಂತವಾಗಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ 9ರಿಂದ 12ನೇ ತರಗತಿಗಳನ್ನು ಆರಂಭಿಸಲು ಸೂಚಿಸಿದೆ.
ಜೊತೆಗೆ ವಿದ್ಯಾರ್ಥಿಗಳು ಖುದ್ದಾಗಿ ಶಾಲೆಯ ತರಗತಿಗೆ ಹಾಜರಾಗಬಹುದು, ಇಲ್ಲವೇ ಆನ್ ಲೈನ್ ತರಗತಿಗೂ ಮನೆಯಲ್ಲಿಯೇ ಕುಳಿತು ಕೇಳಲು ಅವಕಾಶ ನೀಡಿದೆ.
ಇನ್ನು ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ದಿನೇ-ದಿನೇ ಏರಿಕೆಯಾಗುತ್ತಿದೆ. ಇದರಿಂದ ಸೆಪ್ಟೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಯಾವುದೇ ಶಾಲೆ ಪ್ರಾರಂಭಿಸಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.