ಇದು ವಿಮಾನವಲ್ಲ, ರಫೇಲ್‌ ಮಾದರಿ ಮಕ್ಕಳಾಟದ ಜಾರುಬಂಡಿ!

By Kannadaprabha News  |  First Published May 22, 2023, 8:18 AM IST

ಶಾಲೆಗೆ ‘ವಾಯುಸೇನೆಯ ವಿಮಾನ’ವನ್ನು ನೋಡಲು ಸ್ಥಳೀಯರು ಹಾಗು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಆದರೆ ಇದು ವಿಮಾನವಲ್ಲ ಇದೊಂದು ರಫೇಲ್‌ ವಿಮಾನದ ಮಾದರಿ. ಹತ್ತಿರ ಬಂದು ಹಿಂಬದಿಯಲ್ಲಿ ನೋಡಿದರೆ ಇದೊಂದು ಮಕ್ಕಳಾಟದ ಜಾರು ಬಂಡಿ!


ರಾಂ ಅಜೆಕಾರು ಕಾರ್ಕಳ

ಕಾರ್ಕಳ (ಮೇ.22) : ಶಾಲೆಗೆ ‘ವಾಯುಸೇನೆಯ ವಿಮಾನ’ವನ್ನು ನೋಡಲು ಸ್ಥಳೀಯರು ಹಾಗು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಆದರೆ ಇದು ವಿಮಾನವಲ್ಲ ಇದೊಂದು ರಫೇಲ್‌ ವಿಮಾನದ ಮಾದರಿ. ಹತ್ತಿರ ಬಂದು ಹಿಂಬದಿಯಲ್ಲಿ ನೋಡಿದರೆ ಇದೊಂದು ಮಕ್ಕಳಾಟದ ಜಾರು ಬಂಡಿ!

Tap to resize

Latest Videos

undefined

ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಐಸಿಎಸ್‌ಇ ಬೋರ್ಡ್‌ನ ಮಾನ್ಯತೆಯ ಲೂರ್ಡ್‌ ಚರ್ಚ್ ಶಾಲೆಯ ಮೈದಾನದಲ್ಲಿ ಈ ರಫೇಲ್‌ ಮಾದರಿಯ ಜಾರು ಬಂಡಿಯನ್ನು ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳ ಮನಗೆದ್ದಿದೆ. ಇದು 1-10ನೇ ತರಗತಿ ವರೆಗಿನ ಆಂಗ್ಲ ಮಾಧ್ಯಮ ಶಾಲೆಯಾಗಿದ್ದು ವಿದ್ಯಾರ್ಥಿಗಳು ಬಲು ಖುಷಿಯಿಂದ ತಾ ಮುಂದು ತಾ ಮುಂದು ಎಂದು ಸರತಿ ಸಾಲಿನಲ್ಲಿ ಕ್ಯೂ ನಿಂತು ಆಟವಾಡುತ್ತಾ ಖುಷಿ ಪಡುತ್ತಾರೆ.

ಮಂಗಳೂರು ವಿಮಾನ ದುರಂತ ಕಹಿ ನೆನಪಿಗೆ 13 ವರ್ಷ !

ಕುವೈತ್‌ನಲ್ಲಿ ವಾಸವಾಗಿರುವ ಕೌಡೂರು ಮೂಲದ ಉದ್ಯಮಿ ಲಾರೆನ್ಸ್‌ ಸಲ್ದಾನಾ ಈ ಪ್ರತಿಕೃತಿ ನಿರ್ಮಿಸಲು ಮೂಲ ಕಾರಣ. ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರವಲ್ಲದೆ ದೇಶದ ಸೇನೆಯ ಬಗ್ಗೆ ಜಾಗೃತಿ ಗೌರವ ಹೆಚ್ಚಿಸುವ ಸಲುವಾಗಿ ಆಟೋಟಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ತಿಳಿದ ಲಾರೆನ್ಸ್‌ ಸಲ್ಡಾನ ರಫೆಲ್‌ ಮಾದರಿಯನ್ನು ನಿರ್ಮಿಸಲು ಪಣತೊಟ್ಟರು. ಸುಮಾರು ನಾಲ್ಕು ಲಕ್ಷ ರು. ವೆಚ್ಚದಲ್ಲಿ ಸ್ಥಳೀಯ ನುರಿತ ಕೆಲಸಗಾರಿಂದ ರಫೆಲ್‌ ಮಾದರಿ ನಿರ್ಮಾಣ ಮಾಡಲಾಯಿತು. ಇದರ ಜೊತೆಗೆ ಆನೆ, ಜಿರಾಫೆ, ಎತ್ತಿನ ಗಾಡಿ ನಿರ್ಮಾಣ ಮಾಡುವ ಮೂಲಕ ಪ್ರಾಣಿಗಳ ಮಾಹಿತಿ ಯನ್ನು ತಿಳಿಸಿಕೊಡಲಾಗುತ್ತಿದೆ.

ಹಿಂಬದಿಯಲಿರುವ ಜಾರು ಬಂಡಿ ಸುಮಾರು ಸುಮಾರು ಹತ್ತು ಅಡಿ ಎತ್ತರವಿದ್ದು, ಅದಕ್ಕೆ ಅಂಟಿಕೊಂಡಂತಿರುವ ರಫೆಲ್‌ ಪ್ರತಿಕೃತಿ ಸುಮಾರು ಮೂವತ್ತು ಅಡಿ ಉದ್ದ, 20 ಅಡಿ ಅಗಲವಿದೆ. ಒಳಭಾಗದಲ್ಲಿ ಸುಮಾರು 20 ವಿದ್ಯಾರ್ಥಿಗಳು ಕುಳಿತು ಕೊಳ್ಳ ಲಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮೊಮ್ಮಗನಿಗೆ ಶಾಲಾ ಪ್ರಮಾಣಪತ್ರ ನೀಡಿದ ಸಿಎಂ ಸಿದ್ದರಾಮಯ್ಯ

ಸೆಲ್ಫಿ ಸ್ಪಾಟ್‌: ಈ ವಿಮಾನ ರಫೇಲ್‌ ಯುದ್ಧ ವಿಮಾನದ ಮಾದರಿ ಆಕರ್ಷಣೀಯ ಕೇಂದ್ರವಾಗಿದೆ. ನಿತ್ಯ ಹಲವರು ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದಾರೆ.

ಮಕ್ಕಳಿಗೆ ಕೇವಲ ಶಿಕ್ಷಣ ಜೊತೆ ಪಠ್ಯೇತರ ಚಟುವಟಿಕೆ ಅಗತ್ಯವಿದೆ. ಮಕ್ಕಳ ಖುಷಿ ನಡುವೆ ನಾವೆಲ್ಲ ಹರ್ಷಗೊಳ್ಳುತ್ತೆವೆ. ದಾನಿಗಳು ಸಹಕಾರದಿಂದ ರಫೇಲ್‌ ಮಾದರಿ ನಿರ್ಮಾಣಗೊಂಡಿದೆ.

- ವಿಶಾಲ್‌ ಲೋಬೊ, ಧರ್ಮಗುರು, ಲೂಡ್‌್ಸ ಚಚ್‌ರ್‍ ಕಣಂಜಾರು.

click me!