ಆಂಧ್ರ ಆಯ್ತು.. ಕಾಲೇಜು ಆರಂಭಕ್ಕೆ ಡೇಟ್ ಫಿಕ್ಸ್, ಕೆಲ ಕಂಡಿಶನ್!

By Suvarna NewsFirst Published Nov 6, 2020, 12:19 AM IST
Highlights

ನವೆಂಬರ್ ಹದಿನಾರಿಂದ ಕಾಲೇಜು ಆರಂಭ/ ಪಂಜಾಬ್ ಸರ್ಕಾರದ ನಿರ್ಧಾರ/ ಕಂಟೈನ್ ಮೆಂಟ್ ಝೋನ್ ಕಾಲೇಜುಗಳು ಓಪನ್ ಇಲ್ಲ/ ಆಂಧ್ರದ ನಂತರ ಪಂಜಾಬ್ ಸರದಿ

ಪಂಜಾಬ್ (05) ಕೊರೋನಾ ನಂತರ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ ಎಂದರೆ ಅದು ಶಾಲಾ ಕಾಲೇಜು ತೆರೆಯುವುದು. 

ಪಂಜಾಬ್ ನಲ್ಲಿ ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ನವೆಂಬರ್ 16 ರಿಂದ ರಾಜ್ಯದಲ್ಲಿ ಕಾಲೇಜು ಮತ್ತು ಯುನಿರ್ವಸಿಟಿ ತೆರೆಯಲಿವೆ. ಕಂಟೈನ್ ಮೆಂಟ್ ಝೋನ್ ಹೊರಗಿನ  ಕಾಲೇಜುಗಳು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಎಚ್ಚರಿಕೆ, ಶಾಲೆ ಆರಂಭವಾದರೂ ಇವಿಷ್ಟನ್ನು ನೆನಪಿಡಿ

ಮಾರ್ಚ್  24  ರಿಂದ ಕೊರೋನಾ ಕಾರಣಕ್ಕೆ ಶಾಲಾ ಕಾಲೇಜುಗಳು ಬಂದ್ ಆಗಿವೆ. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಅಡಿಯಲ್ಲಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ನವೆಂಬರ್ 9 ರಿಂದಲೇ ಆರಂಭವಾಗಲಿವೆ.

ಸರ್ಕಾರ ಯಾವೆಲ್ಲ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತಾಗಿ ವರದಿ ತರಿಸಿಕೊಂಡಿದೆ. ಆಂಧ್ರಪ್ರದೇಶದಲ್ಲಿ ಶಾಲೆ ಆರಂಭವಾಗಿದ್ದು ಕೆಲ ಮಕ್ಕಳಿಗೆ ಕೊರೋನಾ ತಗುಲಿರುವುದು ವರದಿಯಾಗಿತ್ತು. ಕರ್ನಾಟಕದಲ್ಲಿಯೂ ಡಿಸೆಂಬರ್ ಆರಂಭಕ್ಕೆ ಶಾಲಾ ಕಾಲೇಜುಗಳು ತೆರೆಯುತ್ತವೆ ಎಂದು ಹೇಳಲಾಗಿದ್ದು ಶಿಕ್ಷಣ ಸಚಿವರು ಈಗಾಗಲೇ ಹಲವು ಸಾರಿ ಸಭೆ ನಡೆಸಿದ್ದಾರೆ. 

 

click me!