ಶಾಲೆ ಆರಂಭದ ಎರಡೇ ದಿನಕ್ಕೆ 262 ವಿದ್ಯಾರ್ಥಿಗಳು, 160 ಶಿಕ್ಷಕರಿಗೆ ಕೊರೋನಾ

Published : Nov 05, 2020, 06:07 PM IST
ಶಾಲೆ ಆರಂಭದ ಎರಡೇ ದಿನಕ್ಕೆ 262 ವಿದ್ಯಾರ್ಥಿಗಳು, 160 ಶಿಕ್ಷಕರಿಗೆ ಕೊರೋನಾ

ಸಾರಾಂಶ

ಆಂಧ್ರಪ್ರದೇಶದಲ್ಲಿ ಶಾಲಾ ಕಾಲೇಜು ಆರಂಭ/ ಪರಿಣಾಮ  262 ವಿದ್ಯಾರ್ಥಿಗಳು ಮತ್ತು ಸುಮಾರು 160 ಶಿಕ್ಷಕರು ಕೊರೋನಾ ಪಾಸಿಟಿವ್/ ಶಾಲೆಗೆ  ಮಕ್ಕಳು ಹಾಜಾರಾದ ಲೆಕ್ಕದಲ್ಲಿ ಇದು ದೊಡ್ಡ ಸಂಖ್ಯೆ ಅಲ್ಲ

ಅಮರಾವತಿ (ನ. 05) ರಾಜ್ಯದಲ್ಲಿಯೂ ಶಾಲೆ ಆರಂಭದ ಮಾತು ಕೇಳಿ ಬರುತ್ತಿದೆ.  ಆಂಧ್ರಪ್ರದೇಶದಲ್ಲಿ  9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 2 ರಂದು ಶಾಲೆಗಳನ್ನು ಪುನರಾರಂಭ ಮಾಡಲಾಗಿದೆ.

ಪರಿಣಾಮ  262 ವಿದ್ಯಾರ್ಥಿಗಳು ಮತ್ತು ಸುಮಾರು 160 ಶಿಕ್ಷಕರು ಕೊರೋನಾ ಪಾಸಿಟಿವ್ ಆಗಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳೆ ಮಾಹಿತಿ ನೀಡಿದ್ದಾರೆ.

ಶಾಲಾ ಶಿಕ್ಷಣ ಆಯುಕ್ತ ಚಿನ್ನಾ ವೀರಭದ್ರುಡು ಮಾತನಾಡಿ, ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಈ ಅಂಕಿ ಅಂಶವು ಆತಂಕಕಾರಿಯಲ್ಲ, ಆದರೆ ಪ್ರತಿ ಸಂಸ್ಥೆಯಲ್ಲಿ COVID-19 ಸುರಕ್ಷತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಶಾಳೆ ಆರಂಭ ಯಾವಾಗ? ಸುಳಿವು

ನವೆಂಬರ್ 4 ರಂದು  ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದಾರೆ. 262 ಪಾಸಿಟಿವ್ ಪ್ರಕರಣಗಳು ನಡೆದಿವೆ. ಇದು ಶೇಕಡಾ 0.1 ಕೂಡ ಅಲ್ಲ. ಶಾಲೆಗಳಿಗೆ ಹಾಜರಾಗಿದ್ದರಿಂದ ಅವುಗಳು ಪರಿಣಾಮ ಬೀರಿವೆ ಎಂದು ಹೇಳುವುದು ಸರಿಯಲ್ಲ. ಪ್ರತಿ ಶಾಲಾ ಕೊಠಡಿಯಲ್ಲಿ ಕೇವಲ 15 ಅಥವಾ 16 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಇಲಾಖೆ ಒದಗಿಸಿದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 9 ಮತ್ತು 10 ನೇ ತರಗತಿಗೆ 9.75 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ 3.93 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ, 1.11 ಲಕ್ಷ ಶಿಕ್ಷಕರಲ್ಲಿ, 99,000 ಸಾವಿರಕ್ಕೂ ಹೆಚ್ಚು ಮಂದಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ಹಾಜರಾಗಿದ್ದಾರೆ ಎಂದು ತಿಳಿಸಿದೆ.

1.11 ಲಕ್ಷ ಶಿಕ್ಷಕರಲ್ಲಿ ಸುಮಾರು 160 ಶಿಕ್ಷಕರಿಗೆ ಕೊರೋನಾ ತಗುಲಿದೆ.  ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೀವ ನಮಗೆ ಮುಖ್ಯ ಎಂದು ವೀರಭದ್ರುಡು ಹೇಳಿದರು.

ಸಾಮಾಜಿಕ ಅಂತರ, ಸಕಲ ಸುರಕ್ಷತಾ ಕ್ರಮ, ದಿನ ಬಿಟ್ಟು ದಿನ, ಕ್ಲಾಸ್ ವಿಭಾಘ ಹೀಗೆ ಹಲವು ಕ್ರಮಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಆಗುತ್ತಿದೆ ಎಂಧು ತಿಳಸಿದರು.


 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ