Private Schools Association: ಸರ್ಕಾರಕ್ಕೆ ‌ಬಿಸಿ ಮುಟ್ಟಿಸಲು ಮುಂದಾದ ಖಾಸಗಿ ಶಾಲಾ ಒಕ್ಕೂಟ

By Suvarna NewsFirst Published Dec 12, 2021, 6:56 PM IST
Highlights

* ಸರ್ಕಾರಕ್ಕೆ ‌ಬಿಸಿ ಮುಟ್ಟಿಸಲು ಮುಂದಾದ ಖಾಸಗಿ ಶಾಲಾ ಒಕ್ಕೂಟ
* ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲು ನಿರ್ಧಾರ
* ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

ಬೆಂಗಳೂರು, (ಡಿ.12): ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿದ ಖಾಸಗಿ ಶಾಲಾ ಒಕ್ಕೂಟ ರುಪ್ಸಾ (Private Schools Association Rupsa), ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಹೌದು...ನಾಳೆಯಿಂದ(ಡಿ.13) ಪ್ರಾರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ (Belagavi Winter Session)ಮುತ್ತಿಗೆ ಹಾಕಲು ಖಾಸಗಿ ಶಾಲಾ ಒಕ್ಕೂಟ ರುಪ್ಸಾ ದೃಢ ನಿರ್ಧಾರಕೈಗೊಂಡಿದೆ. ಇಂದು(ಡಿ.12) ಬೆಂಗಳೂರಿನಲ್ಲಿ ಸಭೆಯಲ್ಲಿ  ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. 

Private Schools Association: ಸಿಡಿದೆದ್ದ ಖಾಸಗಿ ಶಾಲಾ ಒಕ್ಕೂಟ, ಸರ್ಕಾರಕ್ಕೆ ಡೆಡ್‌ಲೈನ್

ಸಭೆ ಬಳಿಕ ಖಾಸಗಿ ಶಾಲಾ ಒಕ್ಕೂಟ ರುಪ್ಸಾ  ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು,ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನ ಈಡೇರಿಸಬೇಕು. ಬೆಳಗಾವಿ(Belagavi) ಪ್ರತಿಭಟನೆಯಲ್ಲಿ(Protest) ಸುಮಾರು 10 ಸಾವಿರ ಶಿಕ್ಷಕರು(Teachers) , ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ಮಾಧ್ಯಮ ಶಾಲೆಗಳಿಗೆ(Kannaa Schools) ಅನುದಾನ ಬಿಡುಗಡೆ ‌ಮಾಡಬೇಕು. ಮಾನ್ಯತೆ ನವೀಕರಣ ವಿಚಾರದಲ್ಲಿ ಸರ್ಕಾರ ಸಡಲಿಕೆ ಮಾಡಬೇಕು. ಕೋವಿಡ್ ಪ್ಯಾಕೇಜ್(Covid package) ಶಿಕ್ಷಕರಿಗೆ ‌ಇನ್ನೂ ಸಿಕ್ಕಿಲ್ಲ. ಕೇವಲ 1000 ಸಾವಿರ ಶಿಕ್ಷಕರಿಗೆ ಮಾತ್ರ‌ ಪರಿಹಾರ ಸಿಕ್ಕಿದೆ. ಆದ್ರೆ ಉಳಿದ 4 ಲಕ್ಷ ನೌಕಕರರಿಗೆ ಪರಿಹಾರ ಸಿಕ್ಕಿಲ್ಲ. ನಾವು ಭೀಕ್ಷೆ ಕೇಳುತ್ತಿದ್ದೇವೆ ಅಂತ ಸರ್ಕಾರ ತಿಳಿದುಕೊಂಡಿದೆ. ಆರ್.ಟಿ.ಇ ಬಾಕಿ ಹಣ ಬಿಡುಗಡೆ ‌ಮಾಡಿಲ್ಲ. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನ ಈಡೇರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಂತರ ಶಾಲೆಗಳನ್ನ ಬಂದ್ ಮಾಡಲು ನಿರ್ಧಾರ ಮಾಡಲಾಗುವುದು ಎಂದು ಎಚ್ಚರಿಸಿದರು,

ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಭೆ ನಡೆಸಿದ್ದೇವೆ. ಶಾಲೆಗಳಲ್ಲಿ ಒಮಿಕ್ರಾನ್ ವೈರಸ್ ಆತಂಕ ಹಿನ್ನೆಲೆ ಶಾಲೆಗಳಲ್ಲಿ ‌ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದೇವೆ ಎಂದರು.

10 ಸಾವಿರ ಶಾಲೆಗಳು ಮಾನ್ಯತೆ ನವೀಕರಣ ಅಡಿಯಲ್ಲಿ ಬರುತ್ತೆ. ಆದ್ರೆ, ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಇದುವರೆಗೂ ಮಾನ್ಯತೆ ನವೀಕರಣ ಆಗಿಲ್ಲ. ಇಲಾಖೆ 61 ದಾಖಲೆಗಳು ಕೇಳಿದೆ. ಇದರಲ್ಲಿ 61 ದಾಖಲೆಗಳು 6 ದಿನದಲ್ಲಿ ಸಲ್ಲಿಕೆ ಮಾಡಲು ಸಾಧ್ಯವಿಲ್ಲ. ನಾವು ಮಕ್ಕಳಿಗೆ ಪಾಠ ಬೇಕು ಅಥವಾ ಇವರಿಗೆ ದಾಖಲೆಗಳನ್ನ ಒದಗಿಸಿಕೊಂಡ ಕೂರಬೇಕಾ? ದಾಖಲೆಗಳ ಕ್ರೂಢೀಕರಣ ಸಂದರ್ಭದಲ್ಲಿ ಅಧಿಕಾರಿಗಳು ಲಂಚಕೆ ಬೇಡಿಕೆ ಇಡುತ್ತಿದ್ದಾರೆ. ಶಾಲೆಗಳ ನವೀಕರಣದ ನಿಂಬಂದೆನಗಳನ್ನ ಭ್ರಷ್ಟಾಚಾರಕ್ಕೆ ಪರಿವರ್ತನೆ ಮಾಡಿಕೊಂಡಿದ್ದಾರೆ.ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಕೋಡದಕ್ಕೆ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಖಾಸಗಿ ಶಾಲೆಗಳಿಗೆ ಪ್ರತೇಕ ಮಾರ್ಗಸೂಚಿಗೆ ಮನವಿ
ತಮಗೆ ಪ್ರತ್ಯೇಕ ಕೊರೋನಾ ಮಾರ್ಗಸೂಚಿ(Coronavirus Guidelines) ಪ್ರಕಟಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ (Private School Organization) ಒತ್ತಾಯಿಸುತ್ತಿದೆ.  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್​ಗೆ (BC Nagesh) ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿತ್ತು.

ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮಾರ್ಗಸೂಚಿ ಪಾಲಿಸ್ತಿಲ್ಲ. ಕೋಚಿಂಗ್ ಸೆಂಟರ್, ಟ್ಯುಟೋರಿಯಲ್​ಗಳು ಪಾಲಿಸುತ್ತಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿ. ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ ಮನವಿ ಮಾಡಿದ್ದಾರೆ.

click me!