ಪರೀಕ್ಷೆ ಇಲ್ಲದೆ ಪಾಸ್‌ : ಗೊಂದಲ ನಿವಾರಿಸಲು ಮನವಿ

By Kannadaprabha News  |  First Published May 15, 2021, 7:11 AM IST
  • ಒಂದರಿಂದ 9ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡದೇ ಮುಂದಿನ ತರಗತಿಗೆ ಬಡ್ತಿ
  • ಗೊಂದಲ ನಿವಾರಿಸುವಂತೆ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ(ರುಪ್ಸಾ) ಶಿಕ್ಷಣ ಇಲಾಖೆಗೆ ಒತ್ತಾಯ
  •  ಮಕ್ಕಳ ಮೌಲ್ಯಾಂಕನ ಫಲಿತಾಂಶವನ್ನು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲು ಸೂಚನೆ

ಬೆಂಗಳೂರು (ಮೇ.15): ಒಂದರಿಂದ 9ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡದೇ ಮುಂದಿನ ತರಗತಿಗೆ ಬಡ್ತಿ ನೀಡುವ ವಿಚಾರದಲ್ಲಿನ ಗೊಂದಲಗಳನ್ನು ನಿವಾರಿಸುವಂತೆ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ(ರುಪ್ಸಾ) ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದೆ.

 ಮಕ್ಕಳ ಮೌಲ್ಯಾಂಕನ ಫಲಿತಾಂಶವನ್ನು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ. 

Tap to resize

Latest Videos

undefined

ಕೊರೋನಾ ಆತಂಕ; SSLC ಪರೀಕ್ಷೆ ಮುಂದಕ್ಕೆ ಹಾಕಿದ ಸರ್ಕಾರ ..

ಆದರೆ, ಬಹುತೇಕ ವಿದ್ಯಾರ್ಥಿಗಳು ಭೌತಿಕವಾಗಿಯೂ ಶಾಲೆಗೆ ಬಂದಿಲ್ಲ, ಆನ್‌ಲೈನ್‌ ತರಗತಿಗೆ ಭಾಗಿ ಆಗಿಲ್ಲ ಅಂತಹ ವಿದ್ಯಾರ್ಥಿಗಳನ್ನು ಏನು ಮಾಡಬೇಕು? ಇವುಗಳ ಬಗ್ಗೆ ಸ್ಪಷ್ಟತೆಯೇ ಇಲ್ಲದೆ, ಮಕ್ಕಳನ್ನು ಪಾಸ್‌ ಮಾಡುವುದು ಹೇಗೆ, ಶೇ.80 ಪಾಲಕರು ಇನ್ನೂ ಪ್ರವೇಶ ಶುಲ್ಕ ಪಾವತಿಸಿಲ್ಲ. ಈ ಶುಲ್ಕವನ್ನು ಯಾರು ಪಾವತಿಸಬೇಕು? ಗೊಂದಲ ಸ್ಪಷ್ಟಪಡಿಸುವಂತೆ ಸಂಘದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ಸಚಿವ ಸುರೇಶ್‌ ಕುಮಾರ್‌ಗೆ ಪತ್ರ ಬರೆದಿದ್ದಾರೆ.

ಶೇ.30 ವಿದ್ಯಾರ್ಥಿಗಳು ದಾಖಲಾತಿಯನ್ನೇ ಪಡೆದಿಲ್ಲ , ಅವರನ್ನು ಏನು ಮಾಡುವುದು ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಎಲ್ಲ ಗೊಂದಲಗಳನ್ನು ಬಗೆಹರಿಸದ ಹೊರತು ಹಾಗೂ ಮೇ 24ರವರೆಗೆ ಸೆಮಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮಕ್ಕಳ ಮೌಲ್ಯಾಂಕನ ಪರೀಕ್ಷಾ ಫಲಿತಾಂಶವನ್ನು ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!