ವಾಕ್ ಇನ್ ಆಕ್ಸಿಜನ್ ಕೆಫೆ ಸ್ಥಾಪಿಸಿದ ದಿಲ್ಲಿಯ ಖಾಸಗಿ ಶಾಲೆ

By Suvarna News  |  First Published May 14, 2021, 1:40 PM IST

ದೇಶದ ಕರ್ನಾಟಕ, ದಿಲ್ಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್‌ನಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಕೋವಿಡ್ 2ನೇ ಅಲೆ ವೇಳೆ ಆಕ್ಸಿಜನ್‌ ಕೊರತೆ ಎದರಾಗುತ್ತಿರುವುದ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯ ಖಾಸಗಿ ಶಾಲೆಯೊಂದು ವಿನೂತನ ಪ್ರಯತ್ನ ಮಾಡಿದ್ದು, ವಾಕ್ ಇನ್ ಆಕ್ಸಿಜನ್ ಕೆಫೆಗಳನ್ನು ತನ್ನ ಶಾಲಾವರಣದಲ್ಲಿ ಆರಂಭಿಸಿ, ಮೆಚ್ಚುಗೆ ಗಳಿಸಿದೆ.


ದೇಶಾದ್ಯಂತ ಕೊರೊನಾ ಆರ್ಭಟ ತಾರಕಕ್ಕೇರಿದೆ. ಸೋಂಕಿಗೆ ತುತ್ತಾದವರು ಉಸಿರಾಟ ಸಮಸ್ಯೆಯಿಂದ ಬಳಲಿ ಕೊನೆಗೇ ಆಕ್ಸಿಜನ್ ಸಿಗದೇ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಾಗ್ತಾನೆ ಇದೆ. ಆಯಾ ರಾಜ್ಯಗಳು, ತಮ್ಮದೇ ಆದ ರೀತಿಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್ ವ್ಯವಸ್ಥೆಗೆ ಮಾಡಿಕೊಳ್ತಿವೆ. ಆಕ್ಸಿಜನ್ ಪ್ಲಾಂಟ್ ನಿರ್ಮಿಸಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವುದು, ಆಕ್ಸಿಜನ್ ಬಸ್ ಅಥವಾ ವೀಲ್ ಆನ್ ದಿ ಆಕ್ಸಿಜನ್‌ನಂತಹ ವಿನೂತನ ಯೋಜನೆಗಳನ್ನ ಜಾರಿಗೆ ತಂದಿವೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದಿದ್ರೂ ತಾತ್ಕಾಲಿಕವಾಗಿ ಇಂಥ ವ್ಯವಸ್ಥೆ ಮೂಲಕ ಆಕ್ಸಿಜನ್ ಪೂರೈಸುವುದು ಸರ್ಕಾರದ ಉದ್ದೇಶ. ರೋಗಿಗಳಿಗೆ ಉಸಿರಾಟ ಏರುಪೇರಾದ್ರೆ ಆಕ್ಸಿಜನ್ ಬಸ್‌ನಲ್ಲೇ ಕೆಲ ಗಂಟೆಗಳ ಕಾಲ ಆಕ್ಸಿಜನ್ ಪೂರೈಸಲಾಗ್ತಿದೆ..ಇಂಥದ್ದೇ ಒಂದು ವಿಶೇಷ ಯೋಜನೆ ದೆಹಲಿಯಲ್ಲಿ ಜಾರಿಗೆ ಬಂದಿದೆ.

ಲಸಿಕೆ ಹಾಕಿಸಿಕೊಂಡಿದ್ದೀರಾ? CoWinನಿಂದ ವಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್

Latest Videos

undefined

ಖಾಸಗಿ ಶಾಲೆಯೊಂದು ಆಕ್ಸಿಜನ್ ಬಸ್ ಮಾದರಿಯಲ್ಲೇ ವಾಕ್ಇನ್ ಆಕ್ಸಿಜನ್ ಕೆಫೆಗಳನ್ನ ಸ್ಥಾಪಿಸಿದೆ. ಅಲ್ಲಿ ಕೊರೊನಾ ವೈರಸ್ ರೋಗಿಗಳು ಕೆಲವು ಗಂಟೆಗಳ ಕಾಲ ಕುಳಿತುಕೊಳ್ಳಬಹುದು, ಆಮ್ಲಜನಕವನ್ನು ಪಡೆಯಬಹುದು. ಅವರ ಸ್ಥಿತಿ ಸುಧಾರಿಸಿದ ನಂತರವೇ ಮನೆಗೆ ಹಿಂತಿರುಗಬಹುದು ಅಂತಾರೆ ಆ ಸಂಸ್ಥೆಯ ಡೀನ್. ಅಂದಹಾಗೇ ಇವರದ್ದು ಕೋವಿಡ್ ಕೇರ್ ಸೆಂಟರ್ ಕೂಡ ಇದೆ. ಒಂದು ವೇಳೆ ವೈದ್ಯರೇನಾದ್ರೂ, ಗಂಭೀರ ಲಕ್ಷಣಗಳಿರೋ ರೋಗಿಯನ್ನ ಕೋವಿಡ್ ಸೆಂಟರ್‌ಗೆ ಸೇರಿಸಲು ಸೂಚಿಸಿದ್ರೆ ಇಲ್ಲೇ ದಾಖಲಾಗಬಹುದಂತೆ.

ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಇತ್ತೀಚೆಗಷ್ಟೇ ತೆರೆಯಲಾಗಿದೆ. ಅದರ ಸಭಾಂಗಣ ಮತ್ತು ತರಗತಿ ಕೊಠಡಿಗಳನ್ನು 100 ಹಾಸಿಗೆಗಳ ಸೌಲಭ್ಯವನ್ನಾಗಿ ಪರಿವರ್ತಿಸುವ ಮೂಲಕ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಆರೈಕೆ ಮಾಡಲಾಗ್ತಿದೆ. ಈ ತಿಂಗಳ ಆರಂಭದಲ್ಲಿ ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಸೋತ ಶಾಲೆಯ ಸ್ಥಾಪಕ ಹಾಗೂ ವಿಲಿಯಮ್ಸ್ ಅವರ ತಂದೆಗೆ ಗೌರವ ಸೂಚಕವಾಗಿ ಈ ಕೇಂದ್ರವನ್ನು 'ದಿ ವಿಜಯ್ ವಿಲಿಯಮ್ಸ್ ಕೋವಿಡ್ ಕೇರ್ ಸೆಂಟರ್' ಎಂದು ಹೆಸರಿಸಲಾಗಿದೆ.

ಗೂಗಲ್ ಮ್ಯಾಪ್ಸ್‌ನಲ್ಲೇ ಲಭ್ಯ ಬೆಡ್, ಆಮ್ಲಜನಕ ಲೊಕೇಷನ್ ಮಾಹಿತಿ!

ಇದೀಗ ಸೋಂಕಿತರಿಗಾಗೇ ಆಕ್ಸಿಜನ್ ಕೆಫೆಗಳನ್ನ ಪ್ರಾರಂಭಿಸಲಾಗಿದೆ. ಶಾಲೆಯ ನಾಲ್ಕು ತರಗತಿ ಕೊಠಡಿಗಳನ್ನು 'ಆಕ್ಸಿಜನ್ ಕೆಫೆಗಳಾಗಿ' ಪರಿವರ್ತಿಸಲಾಗಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಸಿಲಿಂಡರ್‌ಗಳನ್ನು ಇಲ್ಲಿ ಇರಿಸಲಾಗಿದೆ. "ಇಲ್ಲಿಗೆ ಬರುವ ರೋಗಿಗಳು ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಆಕ್ಸಿಜನ್ ಕೆಫೆಯಲ್ಲಿ ಅವರು ಕುಳಿತುಕೊಂಡು ಕೆಲವು ಗಂಟೆಗಳ ಕಾಲ ಆಕ್ಸಿಜನ್ ಪಡೆಯುತ್ತಾರೆ. ಈ ವೇಳೆ ವೈದ್ಯರು ಅವರ ಮೇಲ್ವಿಚಾರಣೆ ಮಾಡುತ್ತಾರೆ. ಬಳಿಕ ಅವರ ಆಮ್ಲಜನಕದ ಮಟ್ಟವು ಸುಧಾರಿಸಿದ ಕೂಡಲೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಇಲ್ಲಿಂದ ಹೊರಟು ಹೋಗುತ್ತಾರೆ ಅಂತಾರೆ ವಿಲಿಯಮ್ಸ್.

ಆಮ್ಲಜನಕ ಅಗತ್ಯವಿರುವ ಸಾಕಷ್ಟು ರೋಗಿಗಳು ಇಲ್ಲಿಗೆ ಬರುತ್ತಾರೆ. ಒಳಗೆ ಹೋಗಿ ಆಕ್ಸಿಜನ್ ಪಡೆಯತ್ತಾರೆ. ಮೃದು ರೋಗಲಕ್ಷಣಗಳನ್ನ ನಿವಾರಿಸಲು ಆಕ್ಸಿಜನ್ ಕೆಫೆ ಸಹಾಯವಾಗಲಿದೆ. ಒಂದು ವೇಳೆ   ವೈದ್ಯರಿಗೆ ರೋಗಲಕ್ಷಣಗಳು ತೀವ್ರವಾಗಿ ಕಂಡುಬಂದರೆ, ಕೂಡಲೇ ಅವರನ್ನು ಮೇಲಿನ ಮಹಡಿಯಲ್ಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.. ಅಲ್ಲಿ ರೋಗಿಗಳನ್ನು ವೈದ್ಯರು 24X7 ಮೇಲ್ವಿಚಾರಣೆ ಮಾಡುತ್ತಾರಂತೆ,

CoWIN ಮೂಲಕ ಲಸಿಕೆ ಪಡೆಯಲು 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಕಡ್ಡಾಯ

ಕೋವಿಡ್ ರೋಗಿಗಳಿಗೆ ಸೌಲಭ್ಯಗಳನ್ನು ಸ್ಥಾಪಿಸಲು ಎಲ್ಲಾ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಶಾಲೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಈಗಾಗಲೇ ಹಲವು ಶಾಲೆಗಳಲ್ಲಿ ಇಂಥ ವ್ಯವಸ್ಥೆ ರೂಪಿಸಲು ಚಿಂತನೆ ನಡೆದಿದೆ.  ಹಲವು ಶಾಲೆಗಳ ಆಡಳಿತ ಮಂಡಳಿಯವರು ಬಂದು ಈ ವ್ಯವಸ್ಥೆಯನ್ನ ನೋಡಿಕೊಂಡು ಹೋಗಿದ್ದಾರೆ. ಅವರಲ್ಲಿ ಕೆಲವರು ನಮ್ಮೊಂದಿಗೆ ಕೆಲಸ ಮಾಡಲು ಸ್ವಯಂಸೇವಕರನ್ನು ಕೆಲವು ದಿನಗಳವರೆಗೆ ಕಳುಹಿಸಿದ್ದಾರೆ. ಯಾರಾದರೂ ಸ್ವಯಂಸೇವಕರನ್ನು ಕಳುಹಿಸಬಹುದು, ಇದರಿಂದ ಅವರಿಗೂ ಸ್ವಲ್ಪ ಪರಿಣಿತಿ ಸಿಕ್ಕಂತಾಗುತ್ತೆ ಅಂತಾರೆ ವಿಲಿಯಮ್ಸ್.

click me!