ಶೌಚಾಲಯದ ಕನ್ನಡಿಯಿಂದ ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ಅಚ್ಚರಿ ತಂದ ಪ್ರಿನ್ಸಿಪಾಲ್ ಕಾರಣ

Published : Mar 04, 2025, 08:47 PM ISTUpdated : Mar 04, 2025, 08:55 PM IST
ಶೌಚಾಲಯದ ಕನ್ನಡಿಯಿಂದ ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ಅಚ್ಚರಿ ತಂದ ಪ್ರಿನ್ಸಿಪಾಲ್ ಕಾರಣ

ಸಾರಾಂಶ

ಶಾಲೆಗಳ ಶೌಚಾಲಯದಲ್ಲಿ ಫಿಕ್ಸ್ ಮಾಡಿರುವ ಕನ್ನಡಿ ತೆಗೆಯಲು ಪ್ರಿನ್ಸಿಪಲ್ ಆದೇಶ ನೀಡಿದ್ದಾರೆ. ಈ ಆದೇಶ ಅಷ್ಟಾಗಿ ಗಮನ ಸೆಳೆದಿಲ್ಲ. ಆದರೆ ಇದಕ್ಕೆ ಕೊಟ್ಟ  ಕಾರಣ ಇದೀಗ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಶಾಲಾ ಶೌಚಾಲಯದ ಕನ್ನಡಿ ತೆಗೆಯಲು ಆದೇಶ ಕೊಟ್ಟಿರುವುದೇಕೆ?  

ಲಂಡನ್(ಮಾ.04) ಶೌಚಾಲಯದಲ್ಲಿ ಮಿರರ್ ಸಾಮಾನ್ಯವಾಗಿ ಇಟ್ಟಿರುತ್ತಾರೆ. ಕಾರಣ ಕೈತೊಳೆಯುವ ಜಾಗದಲ್ಲಿ ಕನ್ನಡಿ ಫಿಕ್ಸ್ ಮಾಡಿರುತ್ತಾರೆ. ಬಹುತೇಕ ಎಲ್ಲಾ ಶೌಚಾಲಯದಲ್ಲಿ ಕನ್ನಡಿ ಇಟ್ಟಿರುತ್ತಾರೆ. ಶಾಲಾ ಕಾಲೇಜುಗಳ ಶೌಚಾಲಯದಲ್ಲಿ ಕನ್ನಡಿ ಇದ್ದೇ ಇರುತ್ತೆ. ಇದೀಗ ಪ್ರಿನ್ಸಿಪಾಲ್ ಆದೇಶವೊಂದು ಭಾರಿ ಚರ್ಚೆಯಾಗುತ್ತಿದೆ. ಕಾರಣ ಶಾಲೆಗಳ ಶೌಚಾಲಯದಲ್ಲಿರುವ ಕನ್ನಡಿಯನ್ನು ತೆಗೆಯವಂತೆ ಆದೇಶ ನೀಡಿದ್ದಾರೆ. ಶೌಚಾಲಯದಲ್ಲಿ ಕನ್ನಡಿ ಇಟ್ಟಿರುವ ಕಾರಣ ಮಕ್ಕಳು ತರಗತಿಗೆ ಹಾಜರಾಗುತ್ತಿಲ್ಲ ಎಂದು ಪ್ರಿನ್ಸಿಪಾಲ್ ಕಾರಣ ನೀಡಿದ್ದಾರೆ.

ಶಾಲಾ ಶೌಚಾಲಯದಲ್ಲಿನ ಕನ್ನಡಿಯಿಂದ ತರಗತಿಗೆ ಮಾತ್ರವಲ್ಲ, ಇತರ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ ಎಂದು ಪ್ರಿನ್ಸಿಪಾಲ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಇಂಗ್ಲೆಂಡ್‌ನಲ್ಲಿ. ಪ್ರಿನ್ಸಿಪಲ್ ನೀಡಿದ ಕಾರಣ ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾರಣ ಇದರ ಹಿಂದೆ ಲಾಜಿಕ್ ಇದೆ. ಶಾಲೆಯ ಶೌಚಾಲಯದಿಂದ ಕನ್ನಡಿ ತೆಗೆಯಲು ಸೂಚಿಸಿದ ಹಿಂದೆ ಕಳೆದ ಕೆಲ ವರ್ಷಗಳ ಅಧ್ಯಯನ ಪರಿಶೀಲನೆ, ದೂರು, ದುಮ್ಮಾನಗಳು ಸೇರಿವೆ.

ಶಾಲಾ ಶೌಚಾಲಯದಲ್ಲಿ ಕನ್ನಡಿಯಿಂದ ಮಕ್ಕಳು ಹೆಚ್ಚಿನ ಸಮಯವನ್ನು ಈ ಕನ್ನಡಿ ಮುಂದೆ ಕಳೆಯುತ್ತಿದ್ದಾರೆ. ಕೂದಲು ಸರಿ ಮಾಡುವುದು, ಡ್ರೆಸ್, ಮೇಕ್ಅಪ್, ಮಾತುಕತೆ ಎಲ್ಲವೂ ಈ ಕನ್ನಡಿ ಮುಂದೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ವಿಳಂಬ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಗುಂಪು ಗುಂಪಾಗಿ ವಿದ್ಯಾರ್ಥಿಗಳು ಕನ್ನಡಿ ಮುಂದೆ ಕಾಲ ಕಳೆಯುತ್ತಿದ್ದಾರೆ. ಇದರಿಂದ ಇತರ ವಿದ್ಯಾರ್ಥಿಗಳಿಗೆ ಶೌಚಾಲಯ ಬಳಕೆ ಮಾಡಲು ಸಮಸ್ಯೆಯಾಗುತ್ತಿದೆ. ಗುಂಪು ಗುಂಪಾಗಿ ವಿದ್ಯಾರ್ಥಿಗಳು ಕನ್ನಡಿ ಮುಂದೆ ನಿಂತು ಹೆಚ್ಚಿನ ಸಮಯ ಕಳೆಯುತ್ತಿರುವ ಕಾರಣ ಹಲವು ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋಗಲು ಹೆದರುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಕನ್ನಡಿಯೇ ಕಾರಣವಾಗಿದೆ. ಹೀಗಾಗಿ ಈ ಕನ್ನಡಿಯನ್ನು ಶೌಚಾಲಯಿಂದ ತೆಗೆಯಲು ಆದೇಶ ನೀಡಿದ್ದಾರೆ.

ಯಾವುದೇ ವಿದ್ಯಾರ್ಥಿಗ ಕನ್ನಡಿ ಅವಶ್ಯಕತೆ ಬಂದರೆ ಶಾಲೆಯ ರೆಸೆಪ್ಶನ್ ಆವರಣದಲ್ಲಿ ಇಡಲಾಗಿದೆ. ಆದರೆ ಎಲ್ಲರಿಗೂ ಕಾಣುವಂತೆ ಅಲ್ಲ. ಇಲ್ಲಿ ಸಿಬ್ಬಂದಿಗಳನ್ನು ಕೇಳಿ ಕೆಲ ಕ್ಷಣಕ್ಕೆ ಕನ್ನಡಿ ಪಡೆಯಬಹುದು. ಇದು ಸೂಕ್ತ ಕಾರಣಗಳಿಗಾಗಿ ಮಾತ್ರ ಲಭ್ಯವಿದೆ ಎಂದು ಪ್ರಿನ್ಸಿಪಾಲ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.  ಮನೆಯಿಂದ ಎಲ್ಲಾ ಮಕ್ಕಳು ಕನ್ನಡಿ ನೋಡಿಕೊಂಡು ಬರುತ್ತಾರೆ. ಹೀಗಿರುವಾಗ ಮತ್ತೆ ಶೌಚಾಲಯದಲ್ಲಿ ಕನ್ನಡಿಯ ಅಗತ್ಯವಿಲ್ಲ ಎಂದಿದ್ದಾರೆ. 

ಈ ಕುರಿತು ಹಲವು ಪೋಷಕರು ಬೆಂಬಲ ಸೂಚಿಸಿದ್ದಾರೆ. ಕಾರಣ ಹಲವು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಶೌಚಾಲಯ ಬಳಕೆಯಲ್ಲಿ ಆಗುತ್ತಿರುವ ಅನಾನುಕೂಲ ಕುರಿತು ಹೇಳಿಕೊಂಡಿದ್ದರು. ಹೀಗಾಗಿ ಇದು ಸರಿಯಾದ ನಿರ್ಧಾರ ಎಂದಿದ್ದಾರೆ. ಪ್ರಿನ್ಸಿಪಾಲ್ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ