ಸೆಮಿ ಲಾಕ್‌ಡೌನ್‌: ಆರ್‌ಟಿಇ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ

Kannadaprabha News   | Asianet News
Published : May 16, 2021, 10:39 AM IST
ಸೆಮಿ ಲಾಕ್‌ಡೌನ್‌: ಆರ್‌ಟಿಇ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ

ಸಾರಾಂಶ

* ಪರಿಷ್ಕೃತ ವೇಳಾಪಟ್ಟಿ ಮುಂದಿನ ದಿನಗಳಲ್ಲಿ ಬಿಡುಗಡೆ  * ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 11,925 ಅರ್ಜಿಗಳು ಸಲ್ಲಿಕೆ * ಕರ್ನಾಟಕದಲ್ಲಿ ಸೆಮಿ ಲಾಕ್‌ಡೌನ್‌ ಜಾರಿ   

ಬೆಂಗಳೂರು(ಮೇ.16): ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 2021-22ನೇ ಸಾಲಿನಲ್ಲಿ ಲಭ್ಯವಿರುವ ಸೀಟುಗಳ ಪ್ರವೇಶ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಮುಂದೂಡಿದೆ.

ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಪ್ರವೇಶ ಪ್ರಕ್ರಿಯೆ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ. 

ಪರೀಕ್ಷೆ ಇಲ್ಲದೆ ಪಾಸ್‌ : ಗೊಂದಲ ನಿವಾರಿಸಲು ಮನವಿ

ಆರ್‌ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆಯು ಏ.20 ಕೊನೆಯ ದಿನ ನಿಗದಿ ಮಾಡಿತ್ತು. ಏ.30ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಮೇ 7ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಬೇಕಾಗಿತ್ತು. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 11,925 ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಬಾರಿ ಆರ್‌ಟಿಇ ಸೀಟಿಗೆ ಸಲ್ಲಿಕೆಯಾಗಿದ್ದು ಅರ್ಜಿಗಳ ನೈಜತೆಯನ್ನು ಅಧಿಕಾರಿಗಳ ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
 

PREV
click me!

Recommended Stories

ಮುಂದಿನ ಶೈಕ್ಷಣಿಕ ವರ್ಷದಿಂದ ಗಣಿತ ಪರೀಕ್ಷಾ ಪದ್ಧತಿ ಬದಲಾವಣೆ ಬಹುತೇಕ ಫಿಕ್ಸ್, ವರದಿ ಕೊಡಲು ಶಿಕ್ಷಣ ಸಚಿವರ ಸೂಚನೆ
ಪ್ರಶ್ನೆಪತ್ರಿಕೆ ಸೋರಿಕೆ, ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಿಪರೇಟರಿ–2, 3 ಪರೀಕ್ಷೆಗೆ ಖಡಕ್ ರೂಲ್ಸ್!