Chamarajanagar: ಪಡ್ನಾ-ಲಿಖ್ನಾ ಅಭಿಯಾನದಲ್ಲಿ ಭಾರೀ ಗೋಲ್‌ಮಾಲ್

By Kannadaprabha News  |  First Published Mar 27, 2022, 10:35 PM IST

* ಮೂಲ ಸಾಕ್ಷರತಾ ಪರೀಕ್ಷೆಯಲ್ಲಿ ಭಾರೀ ಅಕ್ರಮ 
* ಅನಕ್ಷರಸ್ಥರ ಬದಲು ಪರೀಕ್ಷೆ ಬರೆದ ಶಾಲಾ ಮಕ್ಕಳು 
* ಕೇಂದ್ರ ಪುರಸ್ಜೃತ ಪಡ್ನಾ ಲಿಖ್ನಾ ಅಭಿಯಾನದಲ್ಲಿ ಭಾರೀ ಗೋಲ್ ಮಾಲ್ 
* ಕೆಲವು ಪರೀಕ್ಷಾ ಕೇಂದ್ರಗಳಿಗೆ ಇನ್ನೂ ಪ್ರಶ್ನೆ ಪತ್ರಿಕೆಯೇ ತಲುಪಿಲ್ಲ 


ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮಾ.27): ಅಲ್ಲಿ ಅಕ್ಷರ ಕಲಿತ ವಯಸ್ಕರು ಪರೀಕ್ಷೆ ಬರೆಯಬೇಕಿತ್ತು.ಸಾಕ್ಷರತೆ ಹೆಚ್ಚಳಕ್ಕೆ ಕೇಂದ್ರ ಪುರಸ್ಕೃತ ಪಡ್ನಾ ಲಿಖ್ನಾ ಅಭಿಯಾನದಡಿ ಅಕ್ಷರಾಭ್ಯಾಸ ಮಾಡಿದ ಸಾಕ್ಷರರು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ ಅಲ್ಲಿ ಅವರ ಬದಲು ಶಾಲಾ ಮಕ್ಕಳನ್ನು ಕರೆತಂದು ಪರೀಕ್ಷೆ ಬರೆಸುವ ಮೂಲಕ ಭಾರೀ ಗೋಲ್‌ಮಾಲ್ ಎಸಗಲಾಗಿದೆ. ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ  ಪಡ್ನಾ ಲಿಖ್ನಾ ಅಭಿಯಾನ ನಡೆಸಲಾಗಿದೆ. ಈ ಅಭಿಯಾನದಡಿ ಅಕ್ಷರಭ್ಯಾಸ ಮಾಡಿದವರಿಗೆ ಅವರ ಕಲಿಕಾ ಸಾಮರ್ಥ್ಯ ಅರಿಯಲು ಇಂದು ದೇಶಾದ್ಯಂತ  ಕಲಿಕಾ ಸಾಧನಾ ಪರೀಕ್ಷೆ ನಡೆಸಲಾಗಿದೆ. 

Tap to resize

Latest Videos

undefined

ಅದರಂತೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದು ಜಿಲ್ಲೆಯ 130 ಗ್ರಾಮ ಪಂಚಾಯತಿ ಗಳ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಆದರೆ ಜಿಲ್ಲೆಯ ಬಹುತೇಕ ಕಡೆಗೆ ಅಕ್ಷರಾಭ್ಯಾಸ ಮಾಡಿಸಲಾದ ಅನಕ್ಷರಸ್ಥರ ಬದಲು ಅವರ ಶಾಲಾ ಮಕ್ಕಳನ್ನು ಕರೆತಂದು ಪರೀಕ್ಷೆ ಬರೆಸಲಾಗಿದೆ. ಅಕ್ಷರ ಕಲಿಸದೇ ಇದ್ದರೂ ಕಲಿಸಲಾಗಿದೆ ಎಂದು ದಾಖಲೆ ಸೃಷ್ಟಿಸಿ ಅವರ ಹೆಸರಿನಲ್ಲಿ ಪರೀಕ್ಷೆ ಬರೆಸಲಾಗಿದೆ‌. ಒಲ್ಲದ ಮನಸ್ಸಿನಿಂದಲೇ ಶಿಕ್ಷಕರು ಈ ಪರೀಕ್ಷೆ ನಡೆಸಿದ್ದಾರೆ. ಚಾಮರಾಜನಗರ ತಾಲೋಕಿನ ಮರಿಯಾಲ ಸರ್ಕಾರಿ ಹಿರಿಯ ಕ್ರಾಥತ ಶಾಲೆಯಲ್ಲಿ ಶಾಲಾ ಮಕ್ಕಳೆ ಪರೀಕ್ಷೆ ಬರೆಯುವಾಗ ಮಾಧ್ಯಮಗಳ ಕ್ಯಾಮಾರ ಕಣ್ಣಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದೆ ಅಕ್ರಮಗಳಿಗೆ ಸಾಕ್ಷಿಯಾಗಿದೆ. 

Chamarajanagara ಉರುಕಾತೇಶ್ವರಿ ಜಾತ್ರೆಯಲ್ಲಿ ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ

ಕ್ಯಾಮೆರಾ ಕಂಡೊಡನೆ ಮಕ್ಕಳು ಎದ್ದೆನೋ ಬಿದ್ದೆನೋ ಎಂಬಂತೆ ಓಡಿಹೋಗಿದ್ದಾರೆ. ಮತ್ತೆ ಕೆಲವು ಕಡೆ ವಿದ್ಯಾವಂತ ಯುವಕರಿಂದ ಪರೀಕ್ಷೆ ಬರೆಸಲಾಗಿದೆ. ಮತ್ತೆ ಕೆಲವು ಪರೀಕ್ಷಾ ಕೇಂದ್ರಗಳಿಗೆ ಮದ್ಯಾಹ್ನವಾದರೂ ಪ್ರಶ್ನೆ ಪತ್ರಿಕೆಗಳನ್ನೇ  ಸರಬರಾಜು ಮಾಡದಿರುವುದು ಕಂಡು ಬಂದಿದೆ. ಲೋಕ ಶಿಕ್ಷಣ ನಿರ್ದೇಶನಾಲಯ ಕೇಂದ್ರ ಪುರಸ್ಜೃತ ಪಡ್ನಾ ಲಿಖ್ನಾ ಅಭಿಯಾನದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಡೆದ ಪಡ್ನಾ ಲಿಖ್ನಾ ಅಭಿಯಾನದಡಿ 30048 ಮಂದಿಯನ್ಮು ಅಕ್ಷರಸ್ಥರನ್ನಾಗಿ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ  ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. 

Chamarajanagar Udyoga Mela 2022: ಬರದ ತಾಲ್ಲೂಕಿನಲ್ಲಿ ಬೃಹತ್ ಉದ್ಯೋಗ ಮೇಳ

ಅನಕ್ಷರಸ್ಥರಿಗೆ ತರಬೇತಿ ನೀಡಲು ಜಿಲ್ಲೆಯಾದ್ಯಂತ ನೂರಾರು ಪ್ರೇರಕರು ಹಾಗು ಸ್ವಯಂ ಸೇವಕರನ್ಮು ನೇಮಿಸಿಕೊಳ್ಳಲಾಗಿದ್ದು, ಅವರಿಗೆ ಮೂರು ತಿಂಗಳಾದರೂ ಗೌರವಧನ ನೀಡದೆ  ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಭಾರೀ ಗೋಲ್ ಮಾಲ್  ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಡೀ ರಾಜ್ಯದಲ್ಲಿ ಇಂತಹ ಅಕ್ರಮ ನಡೆಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿ ಬಂದಿದೆ.

click me!