ಅಕ್ಟೋಬರ್‌ ಅಂತ್ಯದೊಳಗೆ ಬೈಜೂಸ್‌ನಿಂದ 3500 ಉದ್ಯೋಗಿಗಳ ಕಡಿತ!

Published : Sep 28, 2023, 07:57 AM IST
ಅಕ್ಟೋಬರ್‌ ಅಂತ್ಯದೊಳಗೆ ಬೈಜೂಸ್‌ನಿಂದ 3500 ಉದ್ಯೋಗಿಗಳ ಕಡಿತ!

ಸಾರಾಂಶ

ಆನ್‌ಲೈನ್‌ ಶಿಕ್ಷಣ ಕ್ಷೇತ್ರದ ದೈತ್ಯ ಬೈಜೂಸ್‌ ಅಕ್ಟೋಬರ್‌ ಅಂತ್ಯದೊಳಗೆ ಮತ್ತೆ 3500 ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ನವದೆಹಲಿ: ಆನ್‌ಲೈನ್‌ ಶಿಕ್ಷಣ ಕ್ಷೇತ್ರದ ದೈತ್ಯ ಬೈಜೂಸ್‌ ಅಕ್ಟೋಬರ್‌ ಅಂತ್ಯದೊಳಗೆ ಮತ್ತೆ 3500 ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೈಜೂಸ್‌, ಸಂಸ್ಥೆಯನ್ನು ಪುನರ್‌ ರಚಿಸುತ್ತಿದ್ದು, ಅದರ ಭಾಗವಾಗಿ ಸಿಬ್ಬಂದಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ ಸಮಯದಲ್ಲಿ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಸಂಸ್ಥೆ ಭಾರೀ ಪ್ರಮಾಣದ ಸಿಬ್ಬಂದಿ ನೇಮಕ ಮಾಡಿತ್ತು. ಆದರೆ ಕೋವಿಡ್‌ ನಂತರ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸಿಬ್ಬಂದಿ ತೆಗೆಯಲು ಕಂಪನಿ ಮುಂದಾಗಿದೆ. ಈವರೆಗೂ ಕಂಪನಿ 2500ಕ್ಕೂ ಉದ್ಯೋಗಿಗಳನ್ನು ತೆಗೆದು ಹಾಕಿದೆ.

ಎಜುಟೆಕ್ ಕಂಪನಿ ಬೈಜೂಸ್ ಈಗಾಗಲೇ ಅಕ್ಟೋಬರ್ 2022 ರಿಂದ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಾ ಬಂದಿದೆ. ಕಳೆದವಾರ ಸಂಸ್ಥೆಯ ಹೊಸ ಸಿಇಒ ಆಗಿ ಅರ್ಜುನ್ ಮೋಹನ್  ಅವರ ನೇಮಕಗೊಂಡಿದ್ದರು ಅದರ ಬೆನ್ನಲ್ಲೇ ಈಗ ಉದ್ಯೋಗ ಕಡಿತದ ಸುದ್ದಿ ಹೊರಬಿದ್ದಿದೆ. ಮೋಹನ್ ಈ ಬಗ್ಗೆ ಸಂಸ್ಥೆಯ ಉದ್ಯೋಗಿಗಳಿಗೆ ಕಡಿತದ ಬಗ್ಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಟೆಕ್ಕ್ರಂಚ್ ಪ್ರಕಾರ ಬೈಜೂಸ್ ಕಂಪೆನಿಯನ್ನು ಮರುಸಂಘಟನೆ ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಹೊಸ CEO ನಿರ್ದೇಶನದ ಅಡಿಯಲ್ಲಿ ಮರುಸಂಘಟನೆಗೆ ಕೆಲವು ನಿಯಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ಬೈಜೂಸ್ ತನ್ನ ಅಂಗಸಂಸ್ಥೆಗಳ ಪುನರ್‌ ರಚನೆಗೆ ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ರಾಜೀನಾಮೆ ನೀಡದಿದ್ದರೆ ವೇತನ ಸ್ಥಗಿತ, ಬೈಜುಸ್ ಬೆದರಿಕೆಗೆ ಕುಗ್ಗಿ ಹೋದ ಮಹಿಳಾ ಉದ್ಯೋಗಿ!

ಆಪರೇಟಿಂಗ್ ರಚನೆಗಳನ್ನು ಸರಳೀಕರಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉತ್ತಮ ಆರ್ಥಿಕ ಹರಿವಿನ ನಿರ್ವಹಣೆಗಾಗಿ ನಾವು ವ್ಯವಹಾರ ಪುನರ್ರಚನೆಯ ಅಂತಿಮ ಹಂತದಲ್ಲಿರುತ್ತೇವೆ, ಬೈಜೂಸ್‌ನ ಹೊಸ  ಭಾರತದ ಸಿಇಒ ಅರ್ಜುನ್ ಮೋಹನ್ ಮುಂದಿನ ಕೆಲವು ವಾರಗಳಲ್ಲಿ ಈ ಪುಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಸುಧಾರಿತ ಮತ್ತು ಸುಸ್ಥಿರ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ ಎಂದ ಬೈಜೂಸ್ ವಕ್ತಾರರು ತಿಳಿಸಿದ್ದಾರೆ.

ಇ.ಡಿ ದಾಳಿ, ಆರ್ಥಿಕ ಸಂಕಷ್ಟ, ದುಬೈನಲ್ಲಿ ಹೂಡಿಕೆದಾರರ ಮುಂದೆ ಕಣ್ಣೀರಿಟ್ಟ ಬೈಜೂಸ್‌ ರವೀಂದ್ರನ್‌!

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ