ಸವಣೂರು: ಎಸ್ಸೆಸ್ಸೆಲ್ಸಿ 98ನೇ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನೆ, ಶಿಕ್ಷಕರಿಗೆ ನೆನಪಿನ ಕಾಣಿಕೆ

By Gowthami K  |  First Published Jun 19, 2023, 6:31 PM IST

ಸವಣೂರು ಪ್ರತಿಷ್ಠಿತ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ 1997-98ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ ‘ರಜತ ಮಹೋತ್ಸವ’ ನಿಮಿತ್ತ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.


ಹಾವೇರಿ (ಜೂ.19): ಸವಣೂರು ಪಟ್ಟಣದ ಪ್ರತಿಷ್ಠಿತ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ 1997-98ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ ‘ರಜತ ಮಹೋತ್ಸವ’ ನಿಮಿತ್ತ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವು ಭಾನುವಾರ ಅದ್ಧೂರಿಯಾಗಿ ಜರುಗಿತು. ಬೇರೆ ಬೇರೆ ಕಡೆ ಸೇವೆ ಸಲ್ಲಿಸುತ್ತಿರುವ, ನಿವೃತ್ತಿಯಾಗಿರುವ ಹಾಗೂ ಸದ್ಯ ಸಂಸ್ಥೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವಿಶೇಷ ಆಮಂತ್ರಣ ನೀಡಿದ 98ನೇ ಸಾಲಿನ ವಿದ್ಯಾರ್ಥಿಗಳು, ಸೇವೆ ಸಲ್ಲಿಸಿದ್ದ ಸಂಸ್ಥೆಯಲ್ಲಿಯೇ ಶಿಕ್ಷಕರಿಗೆ ಗೌರವ ಸಲ್ಲಿಸಿರುವ ಶಿಷ್ಯರ ಕಾರ್ಯಕ್ಕೆ ಗುರು ವೃಂದವು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.

11ನೇ ವಯಸ್ಸಿನಲ್ಲಿ ಮದುವೆ, 20ರ ವೇಳೆಗೆ ತಂದೆಯಾದ ವ್ಯಕ್ತಿ ನೀಟ್‌ ಪರೀಕ್ಷೆ ಪಾಸ್‌ ಆಗಿ ವೈದ್ಯನಾಗಲು

Tap to resize

Latest Videos

undefined

ನೆಚ್ಚಿನ ಶಿಕ್ಷಕರಿಗೆ ಪುಷ್ಪ ನೀಡಿ ಸ್ವಾಗತಿದ ವಿದ್ಯಾರ್ಥಿಗಳ ತಂಡ ಶಿಕ್ಷಕರಿಗೆ ನೆನಪಿನ ಕಾಣಿಕೆಯೊಂದಿಗೆ ಫಲ-ಪುಷ್ಪ ನೀಡಿ ಗೌರವ ಸಮರ್ಪಿಸಿದರು. ಶಿಕ್ಷಕರು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನೆನಪುಗಳನ್ನು ಮೆಲುಕು ಹಾಕಿದರೇ, ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳನ್ನು ಎಳೆ ಎಳೆಯಾಗಿ ನೆನೆದು ಖುಷಿ ಹಂಚಿಕೊಂಡರು. ಕಾರ್ಯಕ್ರಮದ ನಂತರ ಭೋಜನ ಸವಿದು ರಜತ ಮಹೋತ್ಸವ ಸಂಪನ್ನಗೊಳಿಸಿದರು.

ಕಾಗೆ ಕಾಲಿನಂತಿರುವ ಮಕ್ಕಳ ಅಕ್ಷರನ ಮಣಿ ಪೋಣಿಸಿದಂತೆ ಮಾಡೋದು ಹೇಗೆ?

ಈ ಸಂದರ್ಭದಲ್ಲಿ 98ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಲ್ಲಿಸುತ್ತಿರುವ ಗುರು ವೃಂದ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

click me!