ರಾಜ್ಯದ 95 ಡಿಗ್ರಿ ಕಾಲೇಜು ಪ್ರಾಂಶುಪಾಲರಿಗೆ ನೋಟಿಸ್‌

By Kannadaprabha NewsFirst Published Sep 7, 2020, 9:37 AM IST
Highlights

ರಾಜ್ಯದ 95 ಪದವಿ ಕಾಲೇಜುಗಳ ಪ್ರಾಂಶು ಪಲಾರಿಗೆ ನೋಟಿಸ್ ನೀಡಲಾಗಿದೆ. ಗೌರವಧನ ಪಾವತಿ ಸಂಬಂಧ  ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬೆಂಗಳೂರು (ಸೆ.07) : 2019-20ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿರುವ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿ ಬಿಡುಗಡೆ ಮಾಡಿರುವ ಸಂಬಂಧ ವರದಿ ಸಲ್ಲಿಸದ 95 ಪ್ರಾಂಶುಪಾಲರಿಗೆ ಕಾಲೇಜು ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ. 

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ವಿವಿಧ 95 ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್‌ ನೀಡಿದ್ದು, ನೋಟಿಸ್‌ ತಲುಪಿದ ಮೂರು ದಿನದೊಳಗೆ ವಿವರಣೆ ನೀಡಬೇಕು. ಒಂದು ವೇಳೆ ವಿವರಣೆ ನೀಡದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ ...

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 95 ಕಾಲೇಜಿನ ಪ್ರಾಂಶುಪಾಲರು ಈವರೆಗೆ ವರದಿ ನೀಡಿಲ್ಲ. ಅಲ್ಲದೆ, ಬಿಡುಗಡೆ ಮಾಡಿದ್ದ ಪೈಕಿ 61.52 ಲಕ್ಷ ರು. ಅನುದಾನ ವೆಚ್ಚವಾಗದೆ ಉಳಿದಿದೆ. ಹೀಗಾಗಿ, ನೋಟಿಸ್‌ ತಲುಪಿದ ಕೂಡಲೇ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ 2019ರ ಡಿಸೆಂಬರ್‌ನಿಂದ ಮಾಚ್‌ರ್‍ 23ರ ವರೆಗಿನ ವೇತನ ನೀಡುವಂತೆ ಸೂಚಿಸಿ ಅನುದಾನ ಬಿಡುಗಡೆ ಮಾಡಲಾಗಿತ್ತು. ನಂತರ ಅನುದಾನ ಬಳಕೆ ಮಾಡಕೊಂಡ ಬಗ್ಗೆ ಇಲಾಖೆಗೆ ವರದಿ ನೀಡುವಂತೆಯೂ ಸೂಚಿಸಲಾಗಿತ್ತು. ಆದರೆ,

click me!