'ರಾಜ್ಯದಲ್ಲಿ 60 ವಿವಿಗಳಿವೆ ಇನ್ನಷ್ಟು ವಿಶ್ವವಿದ್ಯಾಲಯ ಸ್ಥಾಪನೆ ಬೇಡ'

By Kannadaprabha NewsFirst Published Mar 15, 2021, 9:42 AM IST
Highlights

ಹೊಸ ವಿವಿ ಬೇಡ, ಹಳೇ ವಿವಿಗಳನ್ನೇ ಬಲಪಡಿಸಿ: ಮಾಜಿ ವೀಸಿಗಳ ಮನವಿ| ಅಗತ್ಯ ಮೂಲಸೌಕರ್ಯ, ಹಣಕಾಸು ಸೌಲಭ್ಯ, ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ವಿವಿಗಳು| ಸರ್ಕಾರ ಹೊಸ ವಿವಿಗಳನ್ನು ಸ್ಥಾಪಿಸುವ ಯೋಜನೆ ಬಿಟ್ಟು ಇರುವ ವಿವಿಗಳನ್ನು ಸರ್ವರೀತಿಯಲ್ಲೂ ಬಲಗೊಳಿಸಲು ಕ್ರಮ ಕೈಗೊಳ್ಳಬೇಕು| 

ಬೆಂಗಳೂರು(ಮಾ.15): ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಯೋಚನೆ ಬಿಟ್ಟು ಇರುವ ಎಲ್ಲ ವಿಶ್ವವಿದ್ಯಾಲಯಗಳಿಗೆ ಉತ್ತಮ ಆರ್ಥಿಕ ನೆರವು ನೀಡಿ ಶೈಕ್ಷಣಿಕ, ಆಡಳಿತಾತ್ಮಕವಾಗಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಮನವಿ ಮಾಡಿದೆ. 

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯ ಕಾರ್ಯದರ್ಶಿ ಪ್ರೊ.ಎನ್‌.ಆರ್‌.ಶ್ರೀನಿವಾಸ್‌ಗೌಡ, ರಾಜ್ಯದಲ್ಲಿ ಈಗಾಗಲೇ 32 ರಾಜ್ಯ ವಿಶ್ವವಿದ್ಯಾಲಯಗಳು, 14 ಡೀಮ್ಡ್‌ ವಿವಿಗಳು, 17 ಖಾಸಗಿ ವಿವಿಗಳು, ಒಂದು ಮುಕ್ತ ವಿವಿ ಮತ್ತು ಕೇಂದ್ರದ ಕೆಲವು ವಿಶ್ವವಿದ್ಯಾಲಯಗಳಿವೆ. ಅಗತ್ಯ ಮೂಲಸೌಕರ್ಯ, ಹಣಕಾಸು ಸೌಲಭ್ಯ, ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಹಾಗಾಗಿ ಸರ್ಕಾರ ಹೊಸ ವಿವಿಗಳನ್ನು ಸ್ಥಾಪಿಸುವ ಯೋಜನೆ ಬಿಟ್ಟು ಇರುವ ವಿವಿಗಳನ್ನು ಸರ್ವರೀತಿಯಲ್ಲೂ ಬಲಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

‘ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು’

ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಮಾನವ ಸಂಪನ್ಮೂಲ ಸೃಷ್ಟಿಯ ಕೇಂದ್ರಗಳಾಗಿರುವ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಅಗತ್ಯ ಮೂಲಸೌಕರ್ಯ, ಹಣಕಾಸು ಸೌಲಭ್ಯ, ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಇವು ಕೇವಲ ಅತಿಥಿ ಉಪನ್ಯಾಸಕರಿಂದ ನಡೆಯುತ್ತಿರುವ ಬೋಧನಾ ಅಂಗಡಿಗಳಾಗಿ ಮಾರ್ಪಟ್ಟಿವೆ. ಯಾವುದೇ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿಲ್ಲ. ಹಾಗಾಗಿ ಸರ್ಕಾರ ಹೊಸ ವಿವಿಗಳನ್ನು ಸ್ಥಾಪಿಸುವ ಯೋಜನೆ ಬಿಟ್ಟು ಇರುವ ವಿವಿಗಳನ್ನು ಸರ್ವರೀತಿಯಲ್ಲೂ ಬಲಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
 

click me!