Mysuru University Cosmos planetarium: ರಾಜ್ಯದ ಪ್ರಥಮ ಕಾಸ್ಮಾಸ್ ಕೇಂದ್ರಕ್ಕೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ

By Suvarna News  |  First Published Mar 6, 2022, 7:47 PM IST

ಮೈಸೂರಿನಲ್ಲಿ ರಾಜ್ಯದ ಪ್ರಥಮ ಕಾಸ್ಮಾಸ್ ಕೇಂದ್ರ  ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕೇಂದ್ರ ಸ್ಥಾಪನೆ.


ಮೈಸೂರು (ಮಾ.6): ಮೈಸೂರು ವಿಶ್ವವಿದ್ಯಾನಿಲಯ (Mysore University) ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸಹಯೋಗದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಲಾಗುತ್ತಿರುವ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ  ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ (Finance Minister Nirmala Sitharaman) ಇಂದು ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತ ವಿಶ್ವಗುರುವಾಗಲು ಇದೊಂದು ಮಹತ್ವದ ಹೆಜ್ಜೆ. ಮೈಸೂರು ವಿಶ್ವವಿದ್ಯಾಲಯ 3 ಎಕರೆ ಜಾಗ ನೀಡಿದ್ದು, ಈ ಕೇಂದ್ರದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ ಪ್ಲಾನಿಟೋರಿಯಂನ್ನು ( planetarium) ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸ್ಥಾಪಿಸಲಿದೆ.  ಯುವ ವಿಜ್ಞಾನಿಗಳು ಹೆಚ್ಚಾಗಿ ಬರಬೇಕಿದೆ. ಅದರಲ್ಲಿ ಯುವತಿಯರ ಸಂಖ್ಯೆಯೂ ಗಣನೀಯವಾಗಿರಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು.

Tap to resize

Latest Videos

 

Smt lays the foundation stone of a state-of-the-art planetarium in Mysore University's Chamundi Hill Campus. The FM has allocated Rs 2 crore of her MPLADS funds as seed fund for the Cosmology Education and Research-training Center (COSMOS) project. pic.twitter.com/iyj7jmsnfl

— NSitharamanOffice (@nsitharamanoffc)

ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!

ಮಾಹಿತಿ ಸಂಗ್ರಹ ಮಾಡೋದು ಮುಖ್ಯವಲ್ಲ. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದು ಮುಖ್ಯ. ವಿಜ್ಞಾನ ದಿನದಿನಕ್ಕೂ ಬೆಳೆಯುತ್ತಿದೆ. ದೆಹಲಿಯಲ್ಲಿ ಕುಳಿತು ಲಡಾಕ್​ನಲ್ಲಿ ಆಗಸವನ್ನು ನೋಡಬಹುದು. ಮೈಸೂರಿನಲ್ಲಿ ಕುಳಿತು ದೆಹಲಿಯ ಆಗಸ ನೋಡಬಹುದು. ಅಷ್ಟರ ಮಟ್ಟಿಗೆ ಖಗೋಳ ವಿಜ್ಞಾನ ಬೆಳೆದಿದೆ.

 

Smt was involved in the ideation of setting up of the Digistar 7 planetarium to foster the study of astronomy and cosmology. The planetarium will encourage research on gravitational waves, string theory, dark matter, dark energy, and mega data analysis. pic.twitter.com/amejFf0GcE

— NSitharamanOffice (@nsitharamanoffc)

ಈಗ ಮೈಸೂರಿನಲ್ಲೂ ಕಾಸ್ಮೋಸ್ ಕೇಂದ್ರ ಶುರುವಾಗುತ್ತಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಖಗೋಳ ಭೌತಶಾಸ್ತ್ರದ ಅಧ್ಯಯನಕ್ಕೆ ಇದು ಸಹಕಾರಿ ಆಗಲಿದೆ. ವಿದ್ಯಾರ್ಥಿಗಳು, ಅದರಲ್ಲೂ ಮಹಿಳೆಯರು ವೈಜ್ಞಾನಿಕ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂದು ನಿರ್ಮಾಲಾ ಸೀತರಾಮನ್ ಹೇಳಿದರು.

 

Department of Science and Technology and Department of Atomic Energy will jointly support the establishment of the COSMOS-1. The total estimated cost of the project is Rs 81 crore. pic.twitter.com/wTLYBxMiS4

— NSitharamanOffice (@nsitharamanoffc)

ಸಂಸದ ಪ್ರತಾಪ ಸಿಂಹ, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯ ರಾಘವನ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

UGC Draft Guidelines : ಯುಜಿಸಿ ಕಾಯಿದೆಗೆ ತಿದ್ದುಪಡಿ, ಶಿಕ್ಷಣ ಸಂಸ್ಥೆಗಳಿಗೆ ಶೇ.40 ಆನ್‌ಲೈನ್ ಕೋರ್ಸ್

click me!