ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ರೂಲ್ಸ್ ತರುತ್ತಿದ್ದೆನು; ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್

By Sathish Kumar KHFirst Published Mar 25, 2024, 7:34 PM IST
Highlights

ನಾನು ಇನ್ನೊಂದು ವರ್ಷ ಶಿಕ್ಷಣ ಸಚಿವನಾಗಿದ್ರೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ನಿಯಮ ಜಾರಿಗೆ ತರುತ್ತಿದ್ದೆನು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದ್ದಾರೆ.

ಚಾಮರಾಜನಗರ (ಮಾ.25): ನಾನು ಇನ್ನೊಂದು ವರ್ಷ ಶಿಕ್ಷಣ ಸಚಿವನಾಗಿದ್ರೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ನಿಯಮ ಜಾರಿಗೆ ತರುತ್ತಿದ್ದೆನು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳ ಪರೀಕ್ಷಾ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿ ಮಕ್ಕಳಿಗೆ ಭಯ ಪಡಿಸುತ್ತದೆ. ಇದು ತಪ್ಪು. ನಮ್ಮ ಮಕ್ಕಳು ಪರೀಕ್ಷೆಗೇ ಭಯ ಪಡುವಾಗ ಸಿಸಿ ಕ್ಯಾಮರಾ ಹಾಕಿ ಮತ್ತಷ್ಟು ಭಯ ಪಡಿಸಲಾಗುತ್ತಿದೆ. ನಾನು ಇನ್ನೊಂದು ವರ್ಷ ಶಿಕ್ಷಣ ಮಂತ್ರಿ ಆಗಿದ್ದರೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ನಿಯಮ ಜಾರಿಗೆ ತರುತ್ತಿದ್ದೆನು ಎಂದು ತಿಳಿಸಿದರು.

ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಶಿಕ್ಷಣ ಇಲಾಖೆಯಿಮದ ಎಸ್.ಎಸ್ ಎಲ್.ಸಿ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಯಾಕೆ, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕಳ್ಳರಾ? ಮಕ್ಕಳು ಕಾಪಿ ಹೊಡೆಯುತ್ತಾರೆ ಎಂದು ಪ್ರತಿ ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಹಾಕಿದ್ದಾರೆ. ಹಾಗಾದರೆ ಕಾಪಿ ಹೊಡೆಯುವುದು ಮಹಾ ಅಪರಾಧವೇ? ಈಗ ತಾನೇ 16 ವರ್ಷದ ಹಂತದಲ್ಲಿರುವ ಎಸ್‌ಎಸ್‌ಎಲ್‌ಸಿ ಮಕ್ಕಳಲ್ಲಿ ಮೊದಲೇ ಪರೀಕ್ಷಾ ಭಯ ಇರುತ್ತದೆ. ಅಂಥದ್ದರಲ್ಲಿ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಹಾಕಿ  ಮಕ್ಕಳಲ್ಲಿ ಮತ್ತಷ್ಟು ಭಯ ಹುಟ್ಟು ಹಾಕಲಾಗಿದೆ ಎಂದು ಕಿಡಿಕಾರಿದರು.

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 8.69 ಲಕ್ಷ ವಿದ್ಯಾರ್ಥಿಗಳ ನೋಂದಣಿ, ಆಲ್‌ ದಿ ಬೆಸ್ಟ್‌!

ಮುಂದುರೆದು, ಮಕ್ಕಳು ಕಾಪಿ ಹೊಡೆದು ಪರೀಕ್ಷೆ ಬರಯುವುದರಲ್ಲಿ ತಪ್ಪೇನಿಲ್ಲ. ನಾನೇದಾದರೂ ಇನ್ನೊಂದು ವರ್ಷ ಶಿಕ್ಷಣ ಸಚಿವನಾಗಿ ಮುಂದುವರಿದಿದ್ದರೆ, ಪುಸ್ತಕವನ್ನು ಕೊಟ್ಟು ಪರೀಕ್ಷೆ ಬರೆಸುವ ಹೊಸ ಪದ್ದತಿಯನ್ನು ಜಾರಿಗೆ ತರುತ್ತಿದ್ದೆನು. ಮಕ್ಕಳು ಪರೀಕ್ಷಾ ಕೇಂದ್ರಗಳಲ್ಲಿಯೇ ಪುಸ್ತಕವನ್ನು ತೆರೆದು ಯಾವ ಪೇಜ್‌ನಲ್ಲಿದೆ ಎಂದು ಹುಡುಕಿ ಬರೆಯಲು ಅವಕಾಶ ಕೊಡುತ್ತಿದ್ದೆನು. ಇದರಿಂದ ಮಕ್ಕಳಲ್ಲಿ ಪ್ರಶ್ನೆಗಳಿಗೆ ಪಠ್ಯ ಪುಸ್ತಕಗಳಲ್ಲಿ ಉತ್ತರವೆಲ್ಲಿದೆ ಎಂದು ಹುಡುಕಿ ಬರೆಯುವ ಚಾಕಚಕ್ಯತೆ  ಬೆಳೆಯುತ್ತಿತ್ತು ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಸುದೀರ್ಘ ವಿಚಾರಣೆ ಬಳಿಕ 5,8,9, ನೇ ತರಗತಿಗಳ ಬೋರ್ಡ್ ಎಕ್ಸಾಂ ನಡೆಸಲು ಹೈಕೋರ್ಟ್ ಒಪ್ಪಿಗೆ

ಮೊದಲ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯಯಾಗಿದೆ. ಇದರ ಬೆನ್ನಲ್ಲಿಯೇ ಮಧ್ಯಾಹ್ನ 2 ಗಂಟೆಯಿಂದ 5,8,9 ನೇ ತರಗತಿ ಬೋರ್ಡ್ ಎಕ್ಸಾಂ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನ್ಯಾಯಾಲಯದ ತಡೆಯಿಂದಾಗಿ ಸದರಿ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಳು ಅರ್ಧಕ್ಕೆ ನಿಂತಿದ್ದವು. ಆದರೆ, ಇಂದಿನಿಂದ ಮತ್ತೆ ಬೋರ್ಡ್ ಪರೀಕ್ಷೆಗಳನ್ನು ಆರಂಭಿಸಲಾಗಿದೆ. ಈಗಾಗಲೇ ಶಿಕ್ಷಣ ಇಲಾಖೆಯು 5,8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಷಯಗಳ ಪರೀಕ್ಷೆಗಳನ್ನ ಮುಗಿಸಿದೆ. ಈಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬೆಳಗ್ಗೆ ಪರೀಕ್ಷೆ ಬರೆದರೆ ಮಧ್ಯಾಹ್ನ ಈ ಕೆಳ ಹಂತದ ವಿದ್ಯಾರ್ಥಿಗಗಳು ಬೋರ್ಡ್‌ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡಲಾಗಿದೆ. 

click me!