NEET UG Result 2023 Announced: ನೀಟ್ ಯುಜಿ ಫಲಿತಾಂಶ ಪ್ರಕಟ, ಟಾಪರ್ಸ್ ಲಿಸ್ಟ್ ಇಲ್ಲಿದೆ

By Gowthami KFirst Published Jun 13, 2023, 10:19 PM IST
Highlights

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ -ನೀಟ್ ಯುಜಿ 2023 ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ https://neet.nta.nic.in/ ನಲ್ಲಿ ವೀಕ್ಷಿಸಬಹುದು. ಕರ್ನಾಟಕದ  ಧ್ರುವ ಅಡ್ವಾಣಿ ಟಾಪ್‌ 5ನೇ ರ್ಯಾಂಕ್ ಪಡೆದಿದ್ದಾರೆ. 

ನವದೆಹಲಿ (ಜೂ.13): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)  ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2023 ಅನ್ನು ಘೋಷಿಸಿದೆ. NEET UG 2023 ಫಲಿತಾಂಶವನ್ನು ಅಧಿಕೃತ ವೆಬ್‌ತಾಣ https://neet.nta.nic.in/ನಲ್ಲಿ ಅಥವಾ https://ntaresults.nic.in/NTARESULTS_CMS/Page/Page?PageId=6&LangId=P  ನೋಡಬಹುದು. ಕಳೆದ ಮೇ 7 ರಂದು ಭಾರತದ ಹೊರಗಿನ 14 ನಗರಗಳು ಸೇರಿದಂತೆ ದೇಶಾದ್ಯಂತ 499 ನಗರಗಳಲ್ಲಿನ 4,097 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೂನ್ 4 ರಂದು ತಾತ್ಕಾಲಿಕ ಕೀ ಉತ್ತರ  ಬಿಡುಗಡೆಗೊಳಿಸಿತ್ತು. ಜೂನ್ 6 ರವರೆಗೆ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿತ್ತು.   ವರದಿಗಳ ಪ್ರಕಾರ, 20 ಲಕ್ಷ ಅಭ್ಯರ್ಥಿಗಳು MBBS, BDS ಮತ್ತು ಇತರ ಸಂಬಂಧಿತ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ NEET UG 2023 ಪರೀಕ್ಷೆಯನ್ನು ಈ ಬಾರಿ ಬರೆದಿದ್ದಾರೆ.

NTA ಅಖಿಲ ಭಾರತ ಟಾಪರ್‌ಗಳ ಹೆಸರುಗಳು, ಅವರು ಗಳಿಸಿದ ಅಂಕಗಳು ಮತ್ತು ವರ್ಗವಾರು ಕಟ್-ಆಫ್ ಅಂಕಗಳನ್ನು NEET ಫಲಿತಾಂಶಗಳೊಂದಿಗೆ ಪ್ರಕಟಿಸಿದೆ. NEET UG 2023 ರ ಟಾಪ್ 50 ಅಭ್ಯರ್ಥಿಗಳ ಮೆರಿಟ್ ಪಟ್ಟಿಯಲ್ಲಿ, ನಲವತ್ತು ಪುರುಷ ಅಭ್ಯರ್ಥಿಗಳು ಮತ್ತು ಹತ್ತು ಮಹಿಳಾ ಅಭ್ಯರ್ಥಿಗಳು ಸ್ಥಾನಗಿಟ್ಟಿಸಿಕೊಂಡಿದ್ದಾರೆ. ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ 720 ಅಂಕಗಳೊಂದಿಗೆ ಜಂಟಿ ಟಾಪರ್‌ಗಳಾಗಿದ್ದಾರೆ. ಕರ್ನಾಟಕದ  ಧ್ರುವ ಅಡ್ವಾಣಿ ಟಾಪ್‌ 5 ನೇ ಸ್ಥಾನ ಪಡೆದಿದ್ದಾರೆ.  ಮಹಿಳಾ ಅಭ್ಯರ್ಥಿಗಳಲ್ಲಿ ಪಂಜಾಬ್‌ನ ಪ್ರಾಂಜಲ್ ಅಗರ್ವಾಲ್ (AIR 4) 715 ಅಂಕಗಳೊಂದಿಗೆ ಮಹಿಳಾ ಟಾಪರ್ ಮತ್ತು  ಆಶಿಕಾ ಅಗರ್ವಾಲ್ (AIR 11) 5ನೇ ರ್ಯಾಂಕ್ ಪಡೆದು ಲಿಸ್ಟ್ ನಲ್ಲಿ  4 ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಸ್ಥಾನ ಪಡೆದವರಲ್ಲಿ 4 ಮಂದಿ ತಮಿಳುನಾಡಿನ ವಿದ್ಯಾರ್ಥಿಗಳು ಎಂಬುದು ವಿಶೇಷವಾಗಿದೆ.

Latest Videos

9 ವರ್ಷದ ಒಳಗೆ ಎಂಬಿಬಿಎಸ್‌ ಪರೀಕ್ಷೆಉತ್ತೀರ್ಣರಾಗಬೇಕು: ವೈದ್ಯಕೀಯ ಆಯೋಗ

ಹತ್ತು ಪುರುಷ ಟಾಪರ್ಸ್ ಲಿಸ್ಟ್ ಇಲ್ಲಿದೆ 
1. ಪ್ರಭಂಜನ್ ಜೆ
2. ಬೋರಾ ವರುಣ್ ಚಕ್ರವರ್ತಿ
3. ಕೌಸ್ತವ್ ಬೌರಿ
4. ಧ್ರುವ ಅಡ್ವಾಣಿ
5. ಸೂರ್ಯ ಸಿದ್ಧಾರ್ಥ್ ಎನ್
6. ಶ್ರೀನಿಕೇತ್ ರವಿ
7. ಸ್ವಯಂ ಶಕ್ತಿ ತ್ರಿಪಾಠಿ
8. ವರುಣ್ ಎಸ್
9. ಪಾರ್ತ್ ಖಂಡೇಲ್ವಾಲ್
10. ಸಾಯನ್ ಪ್ರಧಾನ್

ಬಾಗಲಕೋಟೆ ಬಡ ವಿದ್ಯಾರ್ಥಿ ಸಿಎ ಅಧ್ಯಯನಕ್ಕೆ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಸಹಾಯ ಹಸ್ತ

ಹತ್ತು ಮಹಿಳಾ ಟಾಪರ್ಸ್ ಲಿಸ್ಟ್ ಇಲ್ಲಿದೆ 
1. ಪ್ರಾಂಜಲ್ ಅಗರ್ವಾಲ್
2. ಆಶಿಕಾ ಅಗರ್ವಾಲ್
3. ಆರ್ಯ ಆರ್ ಎಸ್
4. ಮೀಮಾಂಸಾ ಮೌನ್
5. ಸುಮೇಘ ಸಿನ್ಹಾ
6. ಕಣಿ ಯಸಶ್ರೀ
7. ಬರೀರಾ ಅಲಿ
8. ರಿದ್ಧಿ ವಾಜರಿಂಗ್ಕರ್
9. ಕವಲಕುಂಟ್ಲ ಪ್ರಣತಿ ರೆಡ್ಡಿ
10. ಜಾಗೃತಿ ಬೊಡೆದ್ದುಲ

ರಾಜ್ಯಗಳ ಪೈಕಿ, ಉತ್ತರ ಪ್ರದೇಶವು ಅತಿ ಹೆಚ್ಚು ಅರ್ಹ ಅಭ್ಯರ್ಥಿಗಳೊಂದಿಗೆ ಮುಂಚೂಣಿಯಲ್ಲಿದೆ. ಅಂದರೆ 1.39 ಲಕ್ಷ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ 1.31 ಲಕ್ಷ ಮತ್ತು ರಾಜಸ್ಥಾನ 1 ಲಕ್ಷಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
click me!