NEET-UG Re-Exam 2026: ನಾಳೆ ರಾಜ್ಯಾದ್ಯಂತ ನೀಟ್ ಮರು ಪರೀಕ್ಷೆ, ಈ ನಿಯಮ ಉಲ್ಲಂಘಿಸಿದರೆ ಪ್ರವೇಶವಿಲ್ಲ!

Published : Jun 20, 2026, 11:53 AM IST
 NEET UG Re exam NTA Guidelines in karnataka

ಸಾರಾಂಶ

NEET-ಆG Re-Exam 2026: ನಾಳೆ ಭಾನುವಾರ ಕರ್ನಾಟಕದಲ್ಲಿ ನಡೆಯಲಿರುವ ನೀಟ್ ಮರು ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.  ಪರೀಕ್ಷೆಯ ಸಮಯ, ಕಡ್ಡಾಯ ಡ್ರೆಸ್ ಕೋಡ್, ಅನುಮತಿಸಲಾದ ಮತ್ತು ನಿಷೇಧಿತ ವಸ್ತುಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ

ಬೆಂಗಳೂರು (ಜೂ.20): ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಭಾನುವಾರ ರಾಷ್ಟ್ರಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಕರ್ನಾಟಕದಲ್ಲೂ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ದೇಶದಾದ್ಯಂತ ಈಗಾಗಲೇ 16 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಲ್‌ ಟಿಕೆಟ್‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ.

ಯಾವಾಗ ನೀಟ್ ಪರೀಕ್ಷೆ ಆರಂಭ?

ನಾಳೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲಾಗಿದೆ. ಒಟ್ಟು 195 ನಿಮಿಷಗಳ ಕಾಲ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ಮಧ್ಯಾಹ್ನ 1:30ಕ್ಕೆ ಮುಚ್ಚಲಾಗುತ್ತೆ ವಿದ್ಯಾರ್ಥಿಗಳೇ ಗಮನಿಸಿ, ಒಂದು ವೇಳೆ ನಿಗದಿಪಡಿಸಿದ ಸಮಯಕ್ಕೆ ತಡವಾಗಿ ಬರುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇರುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ.

ಕಡ್ಡಾಯ ಡ್ರೆಸ್ ಕೋಡ್ ಕಡ್ಡಾಯ

  • NTA ಹೊರಡಿಸಿರುವ ಡ್ರೆಸ್‌ ಕೋಡ್‌ ಕಡ್ಡಾಯವಾಗಿದ್ದು, ಇದರ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು ಕೆಳಗಿನಂತಿವೆ.
  • ನೀರಿನ ಬಾಟಲ್‌ ಅನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿದೆ.
  • ಮಳೆಯಿಂದ ಹಾನಿಯಾಗದಂತೆ ಪ್ರವೇಶ ಪತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.
  • ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ವಸ್ತುಗಳು (ಪೇಟಾ, ಹಿಜಾಬ್‌ ಮುಂತಾದವು) ಧರಿಸಲು ಅವಕಾಶದೆ ಆದರೆ, ತಪಾಸಣೆಗಾಗಿ ಅಭ್ಯರ್ಥಿಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಬೇಕು.
  • ತಿಳಿ ಬಣ್ಣದ ಉಡುಪುಗಳಿದ್ದರೆ ಸೂಕ್ತ. ಅಗತ್ಯವಿದ್ದರೆ ಪೂರ್ಣ ತೋಳಿನ ಅಥವಾ ಉಣ್ಣೆಯ ಉಡುಪು ಧರಿಸಬಹುದು.
  • ತಪಾಸಣೆಗೆ ಅನುಕೂಲವಾಗುವಂತೆ ಮುಂಚಿತವಾಗಿ ಕೇಂದ್ರಕ್ಕೆ ಬರಬೇಕು.
  • ಚಪ್ಪಲಿ ಅಥವಾ ಕಡಿಮೆ ಹೀಲಿನ ಪಾದರಕ್ಷೆಗಳು ಧರಿಸುವುದು ಸೂಕ್ತ.
  • ಹೆಚ್ಚು ಹೀಲಿನ ಪಾದರಕ್ಷೆ ಧರಿಸಿದರೆ ಹೆಚ್ಚುವರಿ ತಪಾಸಣೆ ನಡೆಸಬಹುದು.

ನಿಷೇಧಿತ ವಸ್ತುಗಳು:

  • ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್ ಸಾಧನಗಳು, ಇಯರ್‌ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಅಥವಾ ಸಂವಹನ ಸಾಧನಗಳು ನಿಷೇಧಿಸಲಾಗಿದೆ.
  • ಲೋಹದ ವಸ್ತುಗಳು, ದೊಡ್ಡ ಬೆಲ್ಟ್ ಬಕಲ್‌ಗಳು, ಭಾರವಾದ ಆಭರಣಗಳು ಮತ್ತು ಇತರ ಲೋಹದ ಅಲಂಕಾರಿಕ ವಸ್ತುಗಳಿಗೆ ಅನುಮತಿ ಇಲ್ಲ.
  • ಎಲ್ಲಾ ಅಭ್ಯರ್ಥಿಗಳಿಗೂ ಪ್ರವೇಶದ ಮೊದಲು ಕಡ್ಡಾಯ ತಪಾಸಣೆ ಇರುತ್ತದೆ. ಆದ್ದರಿಂದ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ NTA ಸಲಹೆ ನೀಡಿದೆ.

ಯಾವುದೇ ಸ್ಪಷ್ಟೀಕರಣ ಅಥವಾ ಸಹಾಯಕ್ಕಾಗಿ NTA ಸಹಾಯವಾಣಿ ಸಂಖ್ಯೆಗಳು: 011-40759000 / 011-69227700 ಅನ್ನು ಸಂಪರ್ಕಿಸಬಹುದು.

PREV
Read more Articles on
click me!

Recommended Stories

ಪಿಯು ಉಪನ್ಯಾಸಕರಿಗೆ ಬಿಗ್ ಶಾಕ್: ಇನ್ಮುಂದೆ 9 ಮತ್ತು 10ನೇ ತರಗತಿಗೂ ಬೋಧನೆ ಕಡ್ಡಾಯಗೊಳಿಸಿದ ಸರ್ಕಾರ!
NEET UG 2026 Re-exam Bengaluru: ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ, ಕಠಿಣ ರೂಲ್ಸ್ ಜಾರಿ