ಇಂದು ಬಿಡುಗಡೆಯಾಗಲಿದೆ NEET UG 2022 ಕೀ ಉತ್ತರಗಳು..! ಆಕ್ಷೇಪಣೆ ಸಲ್ಲಿಸಲು ಇಲ್ಲಿದೆ ವಿವರ..

By BK AshwinFirst Published Aug 18, 2022, 6:32 PM IST
Highlights

ನೀಟ್‌ ಯುಜಿ ಪರೀಕ್ಷೆಯ ಕೀ ಉತ್ತರಗಳನ್ನು ಆಗಸ್ಟ್‌ 18 ರಂದು ಪ್ರಕಟಿಸಲಾಗುವುದೆಂದು ಕೆಲ ವರದಿಗಳು ಹೇಳುತ್ತಿವೆ. ಅಲ್ಲದೆ, ಶೀಘ್ರದಲ್ಲೇ ಇದರ ಫಲಿತಾಂಶ ಸಹ ಪ್ರಕಟವಾಗಲಿದೆ. 

ನೀವು ಸಹ ಮೆಡಿಕಲ್‌ ಶಿಕ್ಷಣ ಪಡೆಯಲು ನೀಟ್ ಪರೀಕ್ಷೆ ಬರೆದು ಫಲಿತಾಂಶಗಳಿಗಾಗಿ ಕಾಯುತ್ತಿದ್ದೀರಾ…? ಹಾಗಾದರೆ, ಶೀಘ್ರದಲ್ಲೇ ನಿಮ್ಮ ಫಲಿತಾಂಶ ಬರಲಿದೆ. ಹೌದು, 
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (National Testing Agency) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಪದವೀಧರ (NEET UG) 2022 ಕೀ ಉತ್ತರಗಳನ್ನು ಇಂದು ಅಂದರೆ ಆಗಸ್ಟ್ 18, 2022 ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಕೆಲ ವರದಿಗಳು ಹೇಳುತ್ತಿವೆ. NEET UG 2022 ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್- neet.nta.nic.in ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಾಗುವಂತೆ ಮಾಡಲಾಗುತ್ತದೆ. ಕೀ ಉತ್ತರಗಳ ಬಿಡುಗಡೆಯ ನಂತರ NEET UG ಕೀ ಉತ್ತರಗಳು ಮತ್ತು OMR ಉತ್ತರ ಪತ್ರಿಕೆಯನ್ನು ಬಳಸಿಕೊಂಡು ಅಭ್ಯರ್ಥಿಗಳು ತಮ್ಮ ಅಂದಾಜು ಅಂಕಗಳನ್ನು ಲೆಕ್ಕ ಹಾಕಬಹುದು.
 
ಜುಲೈ 17 ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಯುಜಿ 2022 ಅನ್ನು ನಡೆಸಿತ್ತು. ಇನ್ನು, ಇಂದು ತಾತ್ಕಾಲಿಕ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್ - neet.nta.nic.in ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು, ಕೀ ಉತ್ತರಗಳು ಪ್ರಕಟವಾದ ಕೆಲ ದಿನಗಳಲ್ಲೇ ಫಲಿತಾಂಶಗಳನ್ನು ಸಹ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಬಿಡುಗಡೆ ಮಾಡಲಿದೆ ಎಂದೂ ತಿಳಿದುಬಂದಿದೆ. ಆದರೆ, ಕೀ ಉತ್ತರಗಳು ಇಂದು ಬಿಡುಗಡೆಯಾಗಲ್ಲ, ಈ ವಾರದಲ್ಲಿ ಶೀಘ್ರದಲ್ಲಿ ಬಿಡುಗಡೆಯಾಗಬಹುದು ಎಂದು ಹಿರಿಯ ಎನ್‌ಟಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದೂ ಹೇಳಲಾಗಿದೆ. ಒಟ್ಟಾರೆ, ಶೀಘ್ರದಲ್ಲೇ ಕೀಉತ್ತರಗಳು ಪ್ರಕಟವಾಗುವುದಂತೂ ಖಚಿತ. 

ಸಿಯುಇಟಿಯಲ್ಲಿ ವಿಲೀನವಾಗಲಿದೆ ನೀಟ್‌, ಜೆಇಇ..? ಕೇಂದ್ರ ಸರ್ಕಾರಕ್ಕೆ ಯುಜಿಸಿ ಪ್ರಸ್ತಾವ
ಜುಲೈ 17 ರಂದು ನಡೆದ NEET UG 2022 ಪರೀಕ್ಷೆಯಲ್ಲಿ 95 ಪ್ರತಿಶತ ಹಾಜರಾತಿ ದಾಖಲಾಗಿದೆ, ಇದರಲ್ಲಿ 18 ಲಕ್ಷಕ್ಕೂ ಹೆಚ್ಚು (18,72,341) ಅಭ್ಯರ್ಥಿಗಳು ಕಾಣಿಸಿಕೊಂಡಿದ್ದಾರೆ, ಇದು ದೇಶದ ಯಾವುದೇ ಪ್ರವೇಶ ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಭಾರತದ 497 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಳು ಸೇರಿ 3,570 ಕೇಂದ್ರಗಳಲ್ಲಿ ನೀಟ್‌ ಯಜಿ ಪರೀಕ್ಷೆಯನ್ನು ನಡೆಸಲಾಗಿತ್ತು.
  
 NEET UG 2022 ರ ಕೀ ಉತ್ತರಗಳ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ..?
- NTA NEET ನ ಅಧಿಕೃತ ವೆಬ್‌ಸೈಟ್ - neet.nta.nic.in ಗೆ ಭೇಟಿ ನೀಡಿ
- ಕೀ ಉತ್ತರಗಳನ್ನು ಬಿಡುಗಡೆ ಮಾಡಿದ ನಂತರ, ‘View and challenge answer key, OMR and response sheet’ ಲಿಂಕ್ ಅನ್ನು ಕ್ಲಿಕ್ ಮಾಡಿ
- ನಂತರ ಅಪ್ಲಿಕೇಶನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಸೆಕ್ಯುರಿಟಿ ಪಿನ್ ಅನ್ನು ನಮೂದಿಸಿ ಮತ್ತು ‘view/challenge answer key’ ಕ್ಲಿಕ್ ಮಾಡಿ
- NEET UG 2022 ಕೀ ಉತ್ತರಗಳನ್ನು ಉಲ್ಲೇಖಿಸುವ ನಿರ್ದಿಷ್ಟ ಕೋಡ್‌ನ ಪ್ರಶ್ನೆಗಳಿಗೆ ಉತ್ತರಗಳನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ನಂತರ, ಕೋಡ್‌ನ ಕೀ ಉತ್ತರಗಳನ್ನು ಪರಿಶೀಲಿಸಿ  
- ಪ್ರತಿ ಉತ್ತರದ ಸವಾಲಿಗೆ 200 ರೂ. ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕವನ್ನು ಪಾವತಿಸುವ ಮೂಲಕ ತಾತ್ಕಾಲಿಕ ಕೀ ಉತ್ತರಗಳ ವಿರುದ್ಧ ಆನ್‌ಲೈನ್ ಸವಾಲನ್ನು ಮಾಡಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ. ಸಾರ್ವಜನಿಕ ಸೂಚನೆಯಲ್ಲಿ ಸೂಚಿಸಿದಂತೆ ನಿರ್ದಿಷ್ಟ ಅವಧಿಯೊಳಗೆ ಸವಾಲು ಹಾಕಬಹುದು.
- ನೀವು ಮಾಡಿದ ಸವಾಲುಗಳನ್ನು ವಿಷಯ ತಜ್ಞರ ಸಮಿತಿಯ ಸಹಾಯದಿಂದ NTA ಪರಿಶೀಲಿಸುತ್ತದೆ. ಅದು ಸರಿಯಾಗಿ ಕಂಡುಬಂದರೆ, ಕೀ ಉತ್ತರಗಳನ್ನು ಅದಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ.

NEET UG 2022 Answer Keys ಬಿಡುಗಡೆಗೆ ಕ್ಷಣಗಣನೆ, ಚೆಕ್ ಮಾಡುವುದು ಹೇಗೆ?
- ಪರಿಷ್ಕೃತ ಅಂತಿಮ ಕೀ ಉತ್ತರವನ್ನು ಆಧರಿಸಿ, ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಘೋಷಿಸಲಾಗುತ್ತದೆ.
- ಯಾವುದೇ ವೈಯಕ್ತಿಕ ಅಭ್ಯರ್ಥಿಗೆ ಅವರ ಸವಾಲಿನ ಸ್ವೀಕಾರ/ಸ್ವೀಕರಿಸದಿರುವ ಬಗ್ಗೆ ತಿಳಿಸಲಾಗುವುದಿಲ್ಲ.
- ಸವಾಲುಗಳ ನಂತರ ಅಂತಿಮಗೊಳಿಸಲಾದ ಕೀ ಉತ್ತರವನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ.

click me!