ನೀಟ್ ಪರೀಕ್ಷೆ ಫಲಿತಾಂಶ/ ಸಂಪೂರ್ಣ ಅಂಕ ಪಡೆದುಕೊಂಡರೂ ಮೊದಲನೆ ಸ್ಥಾನ ಸಿಗಲಿಲ್ಲ/ ಮೊದಲನೆ ಸ್ಥಾನ ಪಡೆದುಕೊಳ್ಳಲು ಅಡ್ಡಿಯಾದ ವಯಸ್ಸು/ ಸೋಶಿಯಲ್ ಮೀಡಿಯಾದಲ್ಲಿಯೂ ಚರ್ಚೆ
ನವದೆಹಲಿ( ಅ.17) ನೀಟ್ ಪರೀಕ್ಷೆ ಬರೆದ ನವದೆಹಲಿಯ ಆಕಾಂಶಾ ಸಿಂಗ್ 720ಕ್ಕೆ 720 ಅಂಕಗಳನ್ನು ಗಳಿಸಿದ್ದಾರೆ ಆದರ ಪ್ರಥಮ ಸ್ಥಾನ ದಕ್ಕಿಲ್ಲ!
ದೇಶಾದ್ಯಂತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶವು ಶುಕ್ರವಾರ ಪ್ರಕಟವಾಗಿದೆ. ವೈದ್ಯಕೀಯ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಬರೆದ ನವದೆಹಲಿಯ ಆಕಾಂಶಾ ಸಿಂಗ್ 720ಕ್ಕೆ 720 ಅಂಕಗಳನ್ನು ಗಳಿಸಿದ್ದಾರೆ. ಆದರೆ ಪ್ರಥಮ ಸ್ಥಾನ ದಕ್ಕಿಲ್ಲ.
undefined
ಪ್ರಥಮ ಸ್ಥಾನ ಕೈತಪ್ಪಲು ಕಾರಣವಾಗಿದ್ದು ಆಕೆಯ ವಯಸ್ಸು. 720ಕ್ಕೆ 720 ಅಂಕ ಪಡೆದ ಸೋಯೆಬ್ ಅಫ್ತಾಬ್ ಗಿಂಯ ಈಕೆ ಕಿರಿಯಳಾದ ಕಾರಣ ಪ್ರಥಮ ಸ್ಥಾನ ಕಳೆದುಕೊಂಡಿದ್ದಾಳೆ.
ನೀಟ್ ಪರೀಕ್ಷೆ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಮಾದರಿ ಕಾರ್ಯ, ಸಾರ್ಥಕವಾಯ್ತು!
ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳ ಶ್ರೇಯಾಂಕವನ್ನು ಆರಂಭದಲ್ಲಿ ನಿರ್ಧರಿಸಲಾಗುತ್ತದೆ. ಇವುಗಳನ್ನು ಅನುಸರಿಸಿ, ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಅಭ್ಯರ್ಥಿಗಳ ಉತ್ತರ ಸಂಖ್ಯೆಯನ್ನು ಪರಿಗಣಿಸಿ ಮತ್ತಷ್ಟು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ, ವಯಸ್ಸಿಗೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ.
ಒರಿಸ್ಸಾದ ಶೋಯೆಬ್ ಮತ್ತು ದೆಹಲಿಯ ಆಕಾಂಶಾ ಸಮನಾದ ಅಂಕ ಗಳಿಸಿಕೊಂಡಿದ್ದರು. ಶೋಯೇಬ್ ವಯಸ್ಸಿನಲ್ಲಿ ಹಿರಿಯ ಆಧ ಕಾರಣ ಅವರನ್ನು ಮೊದಲನೆ ಸ್ಥಾನ ಎಂದು ಘೋಷಿಸಲಾಗಿದೆ.