ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ

Suvarna News   | Asianet News
Published : Oct 17, 2020, 04:36 PM IST
ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ

ಸಾರಾಂಶ

ದೇಶದ ಪ್ರಖ್ಯಾತ ಫ್ಯಾಷನ್ ಡಿಸೈನರ್ ಸಭ್ಯಸಾಚಿಯಿಂದ ದಿಲ್ಲಿಯ ಬಡ ಶಾಲಾ ಹೆಣ್ಣು ಮಕ್ಕಳಿಗೆ ಸ್ಕೂಲ್ ಯೂನಿಫಾರ್ಮ್ ಡಿಸೈನ್  ಭಾಗ್ಯ.

ದೇಶದ ಪ್ರಖ್ಯಾತ ಫ್ಯಾಷನ್ ಡಿಸೈನರ್ ಸಭ್ಯಸಾಚಿಯಿಂದ ದಿಲ್ಲಿಯ ಬಡ ಹೆಣ್ಣ ಮಕ್ಕಳಿಗೆ ಸ್ಕೂಲ್ ಯೂನಿಫಾರ್ಮ್ ಡಿಸೈನ್  ಭಾಗ್ಯ.

ಸಭ್ಯಸಾಚಿ ಅಂದಕೂಡಲೇ ಥಟ್ಟನೆ ನೆನಪಾಗೋದು ಡಿಸೈನರ್ ಬಟ್ಟೆಗಳು. ದೇಶದ ಪ್ರಸಿದ್ಧ ಡಿಸೈನರ್ ಸಭ್ಯಸಾಚಿ ಮುಖರ್ಜಿ. ಸಭ್ಯಸಾಚಿ ವಿನ್ಯಾಸದ ಬಟ್ಟೆಗಳನ್ನು ಇಷ್ಟಪಡದವರೇ ಇಲ್ಲ. ಅದರಲ್ಲೂ ಬಾಲಿವುಡ್ ಅಂಗಳದಲ್ಲಿ ಸಭ್ಯಸಾಚಿ ಸಿಕ್ಕಾಪಟ್ಟೆ ಫೇಮಸ್. ಸಭ್ಯಸಾಚಿ ವಿನ್ಯಾಸದ ವೆರೈಟಿ ಉಡುಗೆಗಳನ್ನ ಧರಿಸಿ ಮಿಂಚುತ್ತಾರೆ. ಸಭ್ಯಸಾಚಿಯ ಹೊಸ ಹೊಸ ಡಿಸೈನರ್ ವೇರ್ ಗಳು ಮಾರುಕಟ್ಟೆಗೆ ಲಗ್ಗೆಯಿಡ್ತಾನೆ ಇವೆ. ಇಷ್ಟೊಂದು ಫೇಮಸ್ ಆಗಿರೋ ಸಭ್ಯಸಾಚಿ, ಇದೀಗ ಶಾಲಾ ವಲಯದಲ್ಲೂ ತನ್ನದೇ ಛಾಪು ಮೂಡಿಸೋಕೆ ಹೊರಟಿದೆ.


ದೇಶದ ರಾಜಧಾನಿ ದೆಹಲಿಯ ಶಾಲೆಯೊಂದರ ಬಡ ಮಕ್ಕಳಿಗೆ ಸಭ್ಯಸಾಚಿ ಯೂನಿಫಾರಂ ಧರಿಸುವ ಯೋಗ ಬಂದಿದೆ. ಸಿಐಟಿಟಿಎ ಎಂಬ ಅಮೆರಿಕ ಮೂಲದ ಲಾಭರಹಿತ ಸಂಸ್ಥೆಯ ಸಹಯೋಗ ಹೊಂದಿರುವ ಜೈಸಲ್ಮೇರ್ ಅವರ ರಾಜ್ ಕುಮಾರಿ ರತ್ನಾವತಿ ಬಾಲಕಿಯರ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿನ್ಯಾಸ ಮಾಡಿಕೊಡಲಿದೆ ಸಭ್ಯಸಾಚಿ ಕಂಪನಿ. ಸಾಮಾನ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಸಿದ್ಧ ಡಿಸೈನ್‌ರೊಬ್ಬರು ಯೂನಿಫಾರ್ಮ್ ಡಿಸೈನ್ ಮಾಡಿಕೊಡುತ್ತಿರುವುದು ಇದೇ ಮೊದಲು ಇರಬಹುದು. ಹಾಗಾಗಿ, ಈ ವಿಷಯ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳು ಪ್ರಸಿದ್ಧ ವಿನ್ಯಾಸಕರರು ಡಿಸೈನ್ ಮಾಡಿದ ದಿರಿಸುಗಳನ್ನು ಧರಿಸುವ ಯೋಗ ಬಂದಿದೆ.

ಹಣದ ಬಣ್ಣ ಯಾವುದು ? ಇಂಟರ್ ವ್ಯೂನಲ್ಲಿ ಈ ರೀತಿಯ ಪ್ರಶ್ನೆಯೂ ಕೇಳುತ್ತಾರೆ

ಬ್ಲಾಕ್ ಪ್ರಿಂಟ್ ತಂತ್ರವನ್ನು ಬಳಸಿ ವಿದ್ಯಾರ್ಥಿಗಳ ಸಮವಸ್ತ್ರಗಳನ್ನ ವಿನ್ಯಾಸ ಮಾಡಲಾಗಿದೆ. ಇದನ್ನು ಜನಪ್ರಿಯವಾಗಿ ಅಜ್ರಾಖ್ ಎಂದು ಕರೆಯಲಾಗುತ್ತದೆ. ಅಜ್ರಾಖ್ ಪ್ರದೇಶದ ಸಾಂಪ್ರದಾಯಿಕ ಜವಳಿ ಇದು. "ಆಧುನಿಕ ಇತಿಹಾಸಕ್ಕೆ ಮುಂಚಿನ" ನೈಸರ್ಗಿಕ ಬಣ್ಣಗಳ ತಂತ್ರವನ್ನು ಬಳಸಲಾಗುತ್ತದೆ. ಸಭ್ಯಸಾಚಿಯ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ   ಸಮವಸ್ತ್ರ ಧರಿಸಿದ ಐವರು ಬಾಲಕಿಯರ ಚಿತ್ರವನ್ನು ಹಂಚಿಕೊಂಡಿದೆ. ನೀಲಿ ಮತ್ತು ಕೆಂಪು ಫ್ರಾಕ್ ಶೈಲಿಯ ಡಿಸೈನರ್ ಸಮವಸ್ತ್ರದಲ್ಲಿ ನಗು ನಗುತ್ತಾ ಪೋಸ್ ಕೊಟ್ಟ ಮಕ್ಕಳ ಚಿತ್ರಗಳು ಗಮನ ಸೆಳೀತಿವೆ. ಇದಕ್ಕೆ ಸಾಕಷ್ಟು ಪ್ರಚಾರವೂ ದೊರೆಯುತ್ತಿದೆ. ಹಲವಾರು ಜನರು ಲೈಕ್ ಮಾಡಿ, ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ, ಸಭ್ಯಸಾಚಿಯ ಈ ಪ್ರಯತ್ನಕ್ಕೆ ಶ್ಲಾಘನೆ ಕೂಡ ದೊರೆಯುತ್ತಿದೆ.

 

 

ಮತ್ತೊಂದು ಪೋಸ್ಟ್ ನಲ್ಲಿ ಸ್ವತಃ ಸಭ್ಯಸಾಚಿ ಅವರೇ ಮಕ್ಕಳ ಸಮವಸ್ತ್ರ ವಿನ್ಯಾಸದ ಬಗ್ಗೆ ವಿವರಿಸಿದ್ದಾರೆ. 'ನಾನು ಶಿಕ್ಷಣದ ಪರಿವರ್ತನಾ ಶಕ್ತಿಯನ್ನು ಸದಾ ನಂಬುತ್ತೇನೆ. ವ್ಯಕ್ತಿಯನ್ನ ವೈಯಕ್ತಿಕ ಮಟ್ಟದಿಂದ ಸಮಾಜಕ್ಕೆ ದೊಡ್ಡದಾಗಿ ಬಿಂಬಿಸುವಲ್ಲಿ ಇದರ ಪಾತ್ರ ದೊಡ್ಡದು. ಅದರಲ್ಲೂ ವಿಶೇಷವಾಗಿ ನನಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ  ಸಂಪನ್ಮೂಲಗಳನ್ನು ಒದಗಿಸುವುದಯ ಹೆಚ್ಚು ಪ್ರಿಯವಾದ ವಿಚಾರ.  ಜನಸಂಖ್ಯೆ ಅವಕಾಶದ ಪ್ರವೇಶದಲ್ಲಿ ಹೆಚ್ಚು ಸೀಮಿತವಾಗಿದೆ ಮತ್ತು ಪುರಾತನ ಸಾಮಾಜಿಕ ನಿರೀಕ್ಷೆಗಳಿಂದ ಹೆಚ್ಚು ಗಟ್ಟಿಯಾಗಿದೆ ಅಂತಾರೆ 46 ವರ್ಷದ ಡಿಸೈನರ್ ಸಭ್ಯಸಾಚಿ. ಅವರ ಈ ಮಾತುಗಳು ಶಾಲಾ ಯೂನಿಫಾರ್ಮ್‌ ಡಿಸೈನ್ ಮಾಡುವಲ್ಲಿನ ಅವರ ಆಸಕ್ತಿ ಎದ್ದು ಕಾಣುತ್ತದೆ ಮತ್ತು ಮಕ್ಕಳೆಡೆಗೆ ಅವರು ಹೊಂದಿರುವ ಪ್ರೀತಿಯೂ ಎದ್ದು ಕಾಣುತ್ತದೆ.

Classroom on wheels: ಚಲಿಸುವ ಬಸ್‌ನಲ್ಲಿ ಕ್ಲಾಸ್ ರೂಮ್ 

ಈ ಬಟ್ಟೆಗಳನ್ನು ವಿನ್ಯಾಸಗೊಳಿಸುವಾಗ ಸಮವಸ್ತ್ರವು ಪ್ರದೇಶದ ಕರಕುಶಲ ಪರಂಪರೆಯನ್ನು ಪ್ರತಿಬಿಂಬಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸಿದ್ದೆ. ಇದು ಯುವತಿಯರ ಸೌಂದರ್ಯ ಮತ್ತು ಕರಕುಶಲತೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ, ಜೊತೆಗೆ ಸಮುದಾಯ, ಸಂಪರ್ಕ ಮತ್ತು ಅವರ ಸಮುದಾಯಕ್ಕೆ ಉತ್ತಮ ಅರ್ಥವನ್ನು ನೀಡುವುದು ಹೆಮ್ಮೆಯ ವಿಚಾರ ಎಂದಿದ್ದಾರೆ ಸಭ್ಯಸಾಚಿ.

ಈ ಸಹಯೋಗಿ ಯೋಜನೆಯು ಹೆಣ್ಣು ಮತ್ತು ಮಹಿಳೆಯರಿಗೆ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸುವುದು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಸಭ್ಯಸಾಚಿ ಶಾಲಾ ಮಕ್ಕಳ ಯೂನಿರ್ಫಾರ್ಮ್ ಡಿಸೈನ್ ಮಾಡುವ ಮೂಲಕ ಮತ್ತೊಂದು ವಿಶಿಷ್ಟವಾದ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ ಮತ್ತು ಹೆಚ್ಚು ಮೆಚ್ಚುಗೆಗೆ ಒಳಗಾಗುತ್ತಿದ್ದಾರೆ.

ಶಾಲೆ ಇಲ್ಲ, ಆಟವಿಲ್ಲ, ಮಕ್ಕಳಿಗೆ ಬೊಜ್ಜು ಬರುತ್ತಿದೆಯಲ್ಲ

 

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ