NEET Counselling 2021: ನೀಟ್ ಕೌನ್ಸೆಲಿಂಗ್ ನಲ್ಲಿ ಮಹತ್ವದ ಬದಲಾವಣೆ ಮಾಡಿದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ

By Suvarna News  |  First Published Dec 20, 2021, 9:09 PM IST
  • ಒಟ್ಟು ನಾಲ್ಕು ಸುತ್ತುಗಳಲ್ಲಿ  ನೀಟ್ ಕೌನ್ಸೆಲಿಂಗ್ ಮಾಡಲಿದೆ MCC
  • ಈ ಬಾರಿ ಹೊಸ 5 ಬದಲಾವಣೆ ಮಾಡಿದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ
  • ಅಧಿಸೂಚನೆ ಇಲ್ಲದೆಯೇ  ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭಿಸಿದ ರಾಜ್ಯಗಳು
     

ನವದೆಹಲಿ(ಡಿ.20): ಪ್ರತಿವರ್ಷ ನೀಟ್ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯುತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency)  NEET ಕೌನ್ಸೆಲಿಂಗ್ ನಲ್ಲಿ ಈ ಬಾರಿ ಹೊಸ 5 ಬದಲಾವಣೆಯನ್ನು ಮಾಡಿದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (  Medical Counselling Committee -MCC) ಶೇ.15 ನೀಟ್ ಯುಜಿ  ಕೋರ್ಸ್ ಗಳ ಸೀಟುಗಳಿಗೆ  ಮತ್ತು ಶೇ. 50 ನೀಟ್ ಪಿಜಿ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದಿದೆ. ಒಟ್ಟು ನಾಲ್ಕು ಸುತ್ತುಗಳಲ್ಲಿ ಕೌನ್ಸೆಲಿಂಗ್ ನಡೆಸುವುದಾಗಿ ಆಯೋಗ ಶನಿವಾರ ಹೇಳಿದೆ. 

AIQ NEET ಕೌನ್ಸೆಲಿಂಗ್ ನೀತಿಗೆ ಕೆಲವು ಇತರ ಬದಲಾವಣೆಗಳನ್ನು ಮಾಡಿದೆ. ಈ ಹಿಂದೆ ಅಖಿಲ ಭಾರತ ಕೋಟಾದ ಸೀಟುಗಳನ್ನು 2ನೇ ಸುತ್ತಿನ ಕೌನ್ಸೆಲಿಂಗ್‌ನ ನಂತರ ರಾಜ್ಯಗಳಿಗೆ ಹಿಂತಿರುಗಿಸಲಾಗಿತ್ತು, ಈಗ AIQ ಕೌನ್ಸೆಲಿಂಗ್‌ನ ಮಾಪ್ ಅಪ್ ಮತ್ತು ಖಾಲಿ ಸುತ್ತುಗಳಲ್ಲಿ ಭರ್ತಿ ಮಾಡಲಾಗುತ್ತಿದೆ.  ಜೊತೆಗೆ AIQ ಸುತ್ತಿನ ಕೌನ್ಸೆಲಿಂಗ್ ಮುಗಿದ ನಂತರ ಯಾವುದೇ AIQ ಸೀಟುಗಳನ್ನು ರಾಜ್ಯಗಳಿಗೆ ಹಿಂತಿರುಗಿಸಲಾಗುವುದಿಲ್ಲ ಎಂದು MCC ತಿಳಿಸಿದೆ.

Tap to resize

Latest Videos

undefined

NEET 2021 ಅರ್ಹ ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭವಾಗಲು ಕಾಯುತ್ತಿದ್ದಾರೆ. ಆದರೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಖಿಲ ಭಾರತ ಕೋಟಾ NEET UG 2021 ಕೌನ್ಸೆಲಿಂಗ್ ಅಧಿಸೂಚನೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೂ ವಿವಿಧ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ  ಹಲವಾರು ರಾಜ್ಯಗಳು ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. 

KARNATAKA PGCET RESULT 2021: ಪಿಜಿಸಿಇಟಿ ಫಲಿತಾಂಶ ಪ್ರಕಟ, ನೋಡುವ ವಿಧಾನ ಇಲ್ಲಿದೆ

ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಮಾಡಿರುವ  5 ಬದಲಾವಣೆಗಳು ಇಂತಿದೆ:
A.ಶೇಕಡಾ 15ರಷ್ಟು ನೀಟ್ ಯುಜಿ ಸೀಟುಗಳಿಗೆ ಮತ್ತು ಶೇ.50ರಷ್ಟು ನೀಟ್ ಪಿಜಿ ಸೀಟುಗಳಿಗೆ ನಾಲ್ಕು ಸುತ್ತುಗಳಲ್ಲಿ  ಕೌನ್ಸೆಲಿಂಗ್  ಮಾಡಲಾಗುತ್ತದೆ. AIQ ಸುತ್ತು1, AIQ ಸುತ್ತು 2, AIQ ಮಾಪ್ ಅಪ್ ಸುತ್ತು ಮತ್ತು ನಾಲ್ಕನೆಯದಾಗಿ  AIQ ಸ್ಟ್ರೇ  ವೆಕೆನ್ಸಿ ಸುತ್ತುಗಳು ಇರಲಿದೆ.

B.AIQ ಸುತ್ತು 1, AIQ ಸುತ್ತು 2, AIQ ಮಾಪ್-ಅಪ್ ಸುತ್ತಿನಲ್ಲಿ ಮಾತ್ರ ಅಭ್ಯರ್ಥಿಗಳಿಗೆ ಹೊಸ ನೋಂದಣಿಯನ್ನು ಅನುಮತಿಸಲಾಗುತ್ತದೆ. ನಾಲ್ಕನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹೊಸ ನೋಂದಣಿ ಇರುವುದಿಲ್ಲ.

C.ಅಖಿಲ ಭಾರತ ಕೋಟಾದ ಸೀಟುಗಳನ್ನು ಹಿಂದೆ 2 ನೇ ಸುತ್ತಿನ ಕೌನ್ಸೆಲಿಂಗ್‌ನ ನಂತರ ರಾಜ್ಯಗಳಿಗೆ ಹಿಂತಿರುಗಿಸಲಾಗಿತ್ತು. ಆದರೆ ಈಗ ಮೂರು ಮತ್ತು 4 ನೇ ಸುತ್ತುಗಳಲ್ಲಿ ಭರ್ತಿ ಮಾಡುವುದನ್ನು ಮುಂದುವರಿಸಲಾಗುತ್ತದೆ.

D.ಅಪ್-ಗ್ರೇಡೇಶನ್ ಮತ್ತು ಉಚಿತ ನಿರ್ಗಮನದ ಆಯ್ಕೆಗಳು ಮೊದಲ ಸುತ್ತಿನ NEET ಕೌನ್ಸೆಲಿಂಗ್‌ನಲ್ಲಿ ಮಾತ್ರ ಲಭ್ಯವಿರಲಿವೆ.ಅಭ್ಯರ್ಥಿಗಳು ಎರಡನೇ ಸುತ್ತಿನಲ್ಲಿ ಒಂದನ್ನು ಹಂಚಿಕೆ ಮಾಡಿದರೆ ಮತ್ತು ಸೀಟುಗಳ ಅಪ್-ಗ್ರೇಡೇಶನ್  ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

E.ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ನಿಗದಿಪಡಿಸಿದ ಸೀಟಿಗೆ ಸೇರುವ ಅಭ್ಯರ್ಥಿಗಳಿಗೆ ರಾಜೀನಾಮೆ ನೀಡಲು ಅನುಮತಿಸಲಾಗುವುದಿಲ್ಲ ಮತ್ತು ಯಾವುದೇ ರೀತಿಯ ಕೌನ್ಸೆಲಿಂಗ್‌ನ ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಇದಲ್ಲದೆ 2 ನೇ ಸುತ್ತಿನಲ್ಲಿ ನಿಗದಿಪಡಿಸಿದ ಸೀಟಿಗೆ ಸೇರದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಅರ್ಹರಾಗಿರುತ್ತಾರೆ. ಆದರೆ ಭದ್ರತಾ ಠೇವಣಿ ಮೇಲೆ ಎಲ್ಲವೂ ನಿಗದಿಯಾಗಿರುತ್ತದೆ. ಮತ್ತು ಕೇವಲ ಮಾಪ್-ಅಪ್ ಸುತ್ತಿನಲ್ಲಿ ಹೊಸ ನೋಂದಣಿಗೆ ಒಳಪಟ್ಟವರು ಮುಂದಿನ ಸುತ್ತಿನ ಕೌನ್ಸೆಲಿಂಗ್‌ಗೆ ಅರ್ಹರಾಗಿರುತ್ತಾರೆ.

ಶಿವಮೊಗ್ಗ GTTCಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಮತ್ತು ದಾವಣಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

click me!