Karnataka PGCET Result 2021: ಪಿಜಿಸಿಇಟಿ ಫಲಿತಾಂಶ ಪ್ರಕಟ, ನೋಡುವ ವಿಧಾನ ಇಲ್ಲಿದೆ

By Suvarna News  |  First Published Dec 20, 2021, 2:38 PM IST
  • ಪಿಜಿಸಿಇಟಿ 2021ನೇ ಸಾಲಿನ ಫಲಿತಾಂಶ ಪ್ರಕಟ
  • ಎಂಇ/ಎಂಟೆಕ್/ಎಂ.ಅರ್ಕ್, ಎಂ.ಸಿ.ಎ, ಎಂಬಿಎ ಕೋರ್ಸ್ ಗಳ ಪ್ರವೇಶಾತಿಗೆ ನಡೆದಿದ್ದ ಪರೀಕ್ಷೆ
  • kea.kar.nic.in ಅಥವಾ https://cetonline.karnataka.gov.in/kea/ ನಲ್ಲಿ ಫಲಿತಾಂಶ ವೀಕ್ಷಿಸಿ 

ಬೆಂಗಳೂರು(ಡಿ.16): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿಸಿಇಟಿ 2021 ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ತಾಣದಲ್ಲಿ ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ಪಿಜಿಸಿಇಟಿ ಪರೀಕ್ಷೆಯು ನವೆಂಬರ್ 11 ರಿಂದ ನವೆಂಬರ್ 14ರವರೆಗೆ ನಡೆದಿತ್ತು.

2021ನೇ ಸಾಲಿನ ಎಂಇ/ಎಂಟೆಕ್/ಎಂ.ಅರ್ಕ್, ಎಂ.ಸಿ.ಎ, ಎಂಬಿಎ ಕೋರ್ಸ್ ಗಳ ಪ್ರವೇಶಾತಿಗೆ ನವೆಂಬರ್ ನಲ್ಲಿ ಈ  ಪರೀಕ್ಷೆಯನ್ನು ನಡೆಸಲಾಗಿತ್ತು. ದಾಖಲೆಗಳ ಪರಿಶೀಲನಾ ವೇಳಾಪಟ್ಟಿಯನ್ನು ಸದ್ಯದಲ್ಲಿಯೇ ಪ್ರಾಧಿಕಾರದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ

Latest Videos

undefined

ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳು ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪಿಜಿಸಿಇಟಿ-2021ರ ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ ಹಾಗೂ ಎಲ್ಲಾ ಮೂಲ ದಾಖಲೆಗಳನ್ನು/ಪ್ರಮಾಣ ಪತ್ರಗಳನ್ನು ಅರ್ಹತಾ ಕಂಡಿಕೆಗೆ ಅನುಗುಣವಾಗಿ ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಿದೆ. ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಮೂಲ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳು 2021ನೇ ಸಾಲಿನ ಎಂಇ/ಎಂಟೆಕ್/ಎಂ.ಆರ್ಕ್, ಎಂ.ಸಿ.ಎ, ಎಂಬಿಎ ಕೋರ್ಸ್ ಗಳ ಸೀಟು ಹಂಚಿಕೆಗೆ ಅರ್ಹತೆಯನ್ನು ಪಡೆಯುವುದಿಲ್ಲ.

UGC NET 2021: ಯುಜಿಸಿ-ನೆಟ್ 2ನೇ ಹಂತದ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪಿಜಿಸಿಇಟಿ 2021 ಫಲಿತಾಂಶ ವೀಕ್ಷಿಸುವುದು ಹೇಗೆ ?:
ಹಂತ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/?utm_source=DH-MoreFromPub&utm_medium=DH-app&utm_campaign=DH ಗೆ ಭೇಟಿ ನೀಡಿ. ಅಥವಾ kea.kar.nic.in ಗೆ ಭೇಟಿ ನೀಡಿ.
ಹಂತ 2: ನಂತರ ಪಿಜಿಸಿಇಟಿ 2021 ರಿಸಲ್ಟ್ ಲಿಂಕ್ ಮೇಲೆ ಒತ್ತಿ
ಹಂತ 3: ಅಲ್ಲಿ ಕೇಳಲಾಗಿರುವ ಪಿಜಿಸಿಇಟಿ ಸಂಖ್ಯೆಯನ್ನು ಭರ್ತಿ ಮಾಡಿ
ಹಂತ 4: ನಂತರ ಸ್ಕ್ರೀನ್ ಮೇಲೆ ಫಲಿತಾಂಶ ಲಭ್ಯವಾಗುವುದು
ಹಂತ 5: ಫಲಿತಾಂಶದ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

KPSC Re-Exam: ಕೆಪಿಎಸ್‌ಸಿ ಮರು ಪರೀಕ್ಷೆ ದೃಢ, 200 ಅಭ್ಯರ್ಥಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆಯೇ

ಯುಜಿಸಿ-ನೆಟ್ 2ನೇ ಹಂತದ ಪರೀಕ್ಷಾ ವೇಳಾಪಟ್ಟಿ ಪ್ರಕಟ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) UGC NET 2021 ಪರೀಕ್ಷೆಯ 2ನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಡಿಸೆಂಬರ್ 2020 ಮತ್ತು ಜೂನ್ 2021 ರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (National Eligibility Test)ಹಂತ ಎರಡರ ಪರೀಕ್ಷೆಗಳು 2021ರ  ಡಿಸೆಂಬರ್ 24 ರಿಂದ ಡಿಸೆಂಬರ್ 27 ರವರೆಗೆ ನಡೆಯಲಿವೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಹಿರಂಗಪಡಿಸಿದೆ. ವೇಳಾಪಟ್ಟಿ  ಮತ್ತು ಇತರ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ ಆದ ugcnet.nta.nic.in ನಲ್ಲಿ  ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.

Delhi School Development: 70 ವರ್ಷಗಳಲ್ಲಿ ಕಾಂಗ್ರೆಸ್‌‌ಗೆ ಆಗದ್ದು, AAP ಮಾಡಿದೆಯೆಂದ ಕೇಜ್ರಿವಾಲ್

ಹಂತ 2ರಲ್ಲಿ ಐದು ವಿಷಯಗಳಾದ ಕನ್ನಡ, ಬಂಗಾಳಿ, ಗೃಹ ವಿಜ್ಞಾನ, ಹಿಂದಿ ಮತ್ತು ಸಂಸ್ಕೃತಗಳಿಗೆ ದಿನಾಂಕವಾರು ಮತ್ತು ಶಿಫ್ಟ್​ವಾರು ಡಿಸೆಂಬರ್ 24, 26 ಮತ್ತು 27, 2021 ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿದ್ದು, ಮೊದಲನೆಯ ಶಿಫ್ಟ್​ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯ ಶಿಫ್ಟ್​ನಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿಯು 180 ನಿಮಿಷಗಳವರೆಗೆ (3 ಗಂಟೆಗಳ ಕಾಲ) ಇರಲಿದೆ. ಆದರೆ ಪೇಪರ್ 1 ಮತ್ತು ಪೇಪರ್ 2ರ ನಡುವೆ ಯಾವುದೇ ವಿರಾಮಗಳು ಇರುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ಡಿಸೆಂಬರ್ 24 ರಂದು ಬಂಗಾಳಿ, ಡಿಸೆಂಬರ್ 26ರಂದು ಕನ್ನಡ(ಶಿಪ್ಟ್ 1), ಹಿಂದಿ(ಶಿಪ್ಟ್ 1 & ಶಿಪ್ಟ್ 2) ಮತ್ತು ಡಿಸೆಂಬರ್ 27ರಂದು ಸಂಸ್ಕೃತ (ಶಿಪ್ಟ್ 1) ಮತ್ತು ಹೋಂ ಸೈನ್ಸ್ ( ಶಿಪ್ಟ್ 2) ಪರೀಕ್ಷೆಗಳು ನಡೆಯಲಿದೆ. 

click me!