ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು ಇಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ 2022 ಫಲಿತಾಂಶಗಳನ್ನು ಘೋಷಿಸಲಿದೆ.
ಬೆಂಗಳೂರು(ಮಾ.9): ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು (National Institute of Fashion Technology -NIFT) ಇಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ 2022 ಫಲಿತಾಂಶಗಳನ್ನು ಘೋಷಿಸಲಿದೆ. ಫೆಬ್ರವರಿ 6 ರಂದು ವಿನ್ಯಾಸ ಪ್ರವೇಶ ಪರೀಕ್ಷೆ 2022 (design entrance exam 2022 ) ಅನ್ನು ತೆಗೆದುಕೊಂಡ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ nift.ac.inನಲ್ಲಿ ಫಲಿತಾಂಶವನ್ನು ಪರಿಶೀಲನೆ ನಡೆಸಬಹುದು. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಏಪ್ರಿಲ್ 2 ರಿಂದ 5 ರವರೆಗೆ ಬ್ಯಾಚುಲರ್ ಆಫ್ ಡಿಸೈನ್ (B.Des) ಕಾರ್ಯಕ್ರಮದ ಸನ್ನಿವೇಶ ಪರೀಕ್ಷೆಯಲ್ಲಿ ಭಾಗವಹಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು niftadmissions.in ಗೆ ಲಾಗಿನ್ ಆಗಿ ಮುಂದಿನ ಹಂತದ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ತಮ್ಮ ಆದ್ಯತೆಯ ಸ್ಥಳವನ್ನು ಆಯ್ಕೆ ಮಾಡಲು ಮಾರ್ಚ್ 11ರವರೆಗೆ ಸಮಯಾವಕಾಶವಿದೆ. ಮಾರ್ಚ್ 16 ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ.
NIFT ಪ್ರವೇಶ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ?
ಹಂತ 1: ಅಧಿಕೃತ ಇಲಾಖೆಯ ವೆಬ್‌ತಾಣ nift.ac.in ಗೆ ಭೇಟಿ ನೀಡಿ.
ಹಂತ 2: ಮುಖಮುಟದಲ್ಲಿ ಬರುವ ದಾಖಲಾತಿ (admission) ಟ್ಯಾಬ್ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಯೋಜನೆಯನ್ನು ಆಯ್ಕೆ ಮಾಡಿ.
ಹಂತ 4: ನಿಮ್ಮ ಕ್ರಮ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಹಂತ 5: ಸಬ್‌ಮಿಟ್ ಮತ್ತು ಫಲಿತಾಂಶವನ್ನು ಪರಿಶೀಲಿಸಿ.
ಹಂತ 6: ಬಳಿಕ ಡೌನ್‌ಲೋಡ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ
CBSE TERM 1 RESULTS 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ
NIFT GD/PI ರೌಂಡ್ ಅನ್ನು ಪರಿಸ್ಥಿತಿ ಪರೀಕ್ಷೆಯ ನಂತರ ಪ್ರಾರಂಭಿಸಲು ನಿರ್ಧರಿಸಲಾಗಿದೆ, ಇದು 7 ಏಪ್ರಿಲ್ ನಿಂದ 26 ಏಪ್ರಿಲ್ 2022 ವರೆಗೆ ಹಲವು ಬ್ಯಾಚ್‌ಗಳಲ್ಲಿ ನಡೆಯಲಿದೆ.
NIFT ಆರು ಬ್ಯಾಚುಲರ್ ಆಫ್ ಡಿಸೈನ್ (BDes) ಕಾರ್ಯಕ್ರಮಗಳನ್ನು ನೀಡುತ್ತದೆ. ಅವೆಂದರೆ ಪರಿಕರ ವಿನ್ಯಾಸ (Accessory Design), ಫ್ಯಾಷನ್ ಸಂವಹನ (Fashion Communication), ಫ್ಯಾಷನ್ ವಿನ್ಯಾಸ (Fashion Design), ನಿಟ್‌ವೇರ್ ವಿನ್ಯಾಸ (Knitwear Design), ಚರ್ಮದ ವಿನ್ಯಾಸ (Leather Design) ಮತ್ತು ಜವಳಿ ವಿನ್ಯಾಸ (Textile Design). ಇದರ ಜೊತೆಗೆ ಸಂಸ್ಥೆಯು ಬ್ಯಾಚುಲರ್ ಆಫ್ ಫ್ಯಾಶನ್ ಟೆಕ್ನಾಲಜಿ (BFTech) ಮತ್ತು ಮೂರು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಕೂಡ ನೀಡುತ್ತದೆ ಅದರೆಂದರೆ ವಿನ್ಯಾಸದಲ್ಲಿ ಸ್ನಾತಕೋತ್ತರ (Master of Design -MDes), ಫ್ಯಾಷನ್ ನಿರ್ವಹಣೆಯಲ್ಲಿ ಸ್ನಾತಕೋತ್ತರ (Master of Fashion Management - MFM), ಮತ್ತು ಫ್ಯಾಷನ್ ತಂತ್ರಜ್ಞದಲ್ಲಿ ಸ್ನಾತಕೋತ್ತರ (Master of Fashion Technology- MFTech).
ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವೈದ್ಯಕೀಯ ಆಯೋಗ ತೀರ್ಮಾನಿಸಲಿದೆ: ಡಾ.ಕೆ.ಸುಧಾಕರ್
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (Central Board of Secondary Education -CBSE) 12ನೇ ತರಗತಿ ಟರ್ಮ್ 1ರ ಫಲಿತಾಂಶ ಇಂದು(ಮಾ.9) ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಈ ಮೊದಲು 12ನೇ ತರಗತಿ ಟರ್ಮ್ 1ರ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಮತ್ತು CBSE 10ನೇ ತರಗತಿ ಟರ್ಮ್ 1ರ ಫಲಿತಾಂಶ ಮಾ.12ರ ನಂತರ ಪ್ರಕಟವಾಗಲಿದೆ ಎಂದು ಸುದ್ದಿಯಾಗಿತ್ತು. " ಫಲಿತಾಂಶ ತಯಾರಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಅದನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು. ಮಂಡಳಿಯು ಶೀಘ್ರದಲ್ಲೇ ತಿಳಿಸುತ್ತದೆ" ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ ಅಧಿಕೃತ ಸೈಟ್ ನಲ್ಲಿ https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.