CBSE Term 1 Results 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ

By Suvarna News  |  First Published Mar 9, 2022, 2:51 PM IST

ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ಟರ್ಮ್‌ 1,2022 ಫಲಿತಾಂಶವನ್ನು ಈ ವಾರದೊಳಗೆ ಬಿಡುಗಡೆ ಮಾಡಲಿದೆ. 12ನೇ ತರಗತಿ  ಪರೀಕ್ಷೆಯ ಫಲಿತಾಂಶ ಇಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.  10ನೇ ತರಗತಿ ಫಲಿತಾಂಶ ಶುಕ್ರವಾರದ ನಂತರ ಬಿಡುಗಡೆಯಾಗಲಿದೆ.
 


ಬೆಂಗಳೂರು(ಮಾ.9): ಕೇಂದ್ರ ಪ್ರೌಢಶಿಕ್ಷಣ ಮಂಡಳಿ  (Central Board of Secondary Education -CBSE) 12ನೇ ತರಗತಿ ಟರ್ಮ್ 1ರ ಫಲಿತಾಂಶ ಇಂದು(ಮಾ.9) ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಈ ಮೊದಲು 12ನೇ ತರಗತಿ ಟರ್ಮ್ 1ರ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.  ಮತ್ತು CBSE 10ನೇ ತರಗತಿ ಟರ್ಮ್ 1ರ ಫಲಿತಾಂಶ ಮಾ.12ರ ನಂತರ ಪ್ರಕಟವಾಗಲಿದೆ ಎಂದು ಸುದ್ದಿಯಾಗಿತ್ತು.  " ಫಲಿತಾಂಶ ತಯಾರಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಅದನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು. ಮಂಡಳಿಯು ಶೀಘ್ರದಲ್ಲೇ ತಿಳಿಸುತ್ತದೆ" ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ  ಅಧಿಕೃತ ಸೈಟ್‌ ನಲ್ಲಿ  https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.

Tap to resize

Latest Videos

undefined

ನವೆಂಬರ್ - ಡಿಸೆಂಬರ್‌ನಲ್ಲಿ ನಡೆದ  10ನೇ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಒಟ್ಟು 36 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಸದ್ಯ ವಿದ್ಯಾರ್ಥಿಗಳು ಟರ್ಮ್‌ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್‌ ಅಥವಾ ಫೇಲ್‌ ಎಂಬುದನ್ನು ತಿಳಿಸುವುದಿಲ್ಲ. ಸಿಬಿಎಸ್‌ಇ ಟರ್ಮ್‌ 1 ಪರೀಕ್ಷೆ ಫಲಿತಾಂಶವನ್ನು ಚೆಕ್‌ ಮಾಡಲು ವಿದ್ಯಾರ್ಥಿಗಳು cbse.gov.in ಅಥವಾ cbseresults.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಫಲಿತಾಂಶವನ್ನು ಟರ್ಮ್‌ 1 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಹಾಗೂ ಟರ್ಮ್‌ 2 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಆಧಾರದಲ್ಲಿ  ಅಂದರೆ ಶೇಕಡ.50 ಅಂಕಗಳ ವ್ಹೇಟೇಜ್‌ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.

SBI Recruitment 2022: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ ಎಸ್‌ಬಿಐ ನೇಮಕಾತಿ

ಸಿಬಿಎಸ್‌ಇ ಫಲಿತಾಂಶ ಚೆಕ್‌ ಮಾಡುವ ವಿಧಗಳು: ವಿದ್ಯಾರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ cbse.gov.in  ಅಥವಾ cbseresults.nic.in ಗೆ ಭೇಟಿ ನೀಡಿ. ಓಪನ್‌ ಅದ ಪೇಜ್‌ನಲ್ಲಿ ರಿಜಿಸ್ಟ್ರೇಷನ್‌ ನಂಬರ್ ನೀಡಿ ಲಾಗಿನ್‌ ಆಗಿ. ಫಲಿತಾಂಶ ಚೆಕ್ ಮಾಡಿ. ಅಗತ್ಯವಿದ್ದಲ್ಲಿ ದಾಖಲೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ.

ಡಿಜಿ ಲಾಕರ್ ಮೂಲಕವು ವೀಕ್ಷಿಸಬಹುದು: ಡಿಜಿಲಾಕರ್ ಆ್ಯಪ್‌ನಲ್ಲಿ ಅಭ್ಯರ್ಥಿಗಳು ತಮ್ಮ 10, 12ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಅಥವಾ ವೆಬ್‌ಸೈಟ್ digilocker.gov.in ನಲ್ಲಿ ಪರಿಶೀಲಿಸಬಹುದು.

ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವೈದ್ಯಕೀಯ ಆಯೋಗ

ಡಿಜಿಲಾಕರ್ ಆಪ್‌ನಿಂದ ಸಿಬಿಎಸ್‌ಇ 10ನೇ ಮತ್ತು 12 ನೇ ತರಗತಿ ಟರ್ಮ್ 1ರ ಮಾರ್ಕ್‌ಶೀಟ್ ಅನ್ನು ಪರಿಶೀಲಿಸುವುದು ಅಥವಾ ಡೌನ್‌ಲೋಡ್ ಮಾಡುವುದು ಹೇಗೆ? : ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಹೋಗಿ.  ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಸಿಬಿಎಸ್‌ಇ ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಬಳಿಕ ಶಿಕ್ಷಣ ವಿಭಾಗಕ್ಕೆ ಹೋಗಿ ಮತ್ತು "10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 10 ನೇ ತರಗತಿಯ ಅಂಕಪಟ್ಟಿ" ಅಥವಾ "12 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 12 ನೇ ತರಗತಿಯ ಅಂಕಪಟ್ಟಿ" ಆಯ್ಕೆಮಾಡಿ.  ಲಾಗಿನ್ ಜಾಗದಲ್ಲಿ ವರ್ಷ, ಹೆಸರು ಮತ್ತು ರೋಲ್ ಸಂಖ್ಯೆಯನ್ನು ನಮೂದಿಸಿ. ಸಿಬಿಎಸ್‌ಇ ಟರ್ಮ್ 1ರ ಮಾರ್ಕ್‌ಶೀಟ್ ಕಾಣಿಸಿಕೊಳ್ಳುತ್ತದೆ. ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಉಮಂಗ್ ಮೂಲಕವು ಪರಿಶೀಲಿಸಬಹುದು: CBSE ವಿದ್ಯಾರ್ಥಿಗಳು UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೂಡ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. UMANG ಅಪ್ಲಿಕೇಶನ್ ಅನ್ನು Google Play ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಬಹುದು.

click me!